ಕೇಂದ್ರದಿಂದ ಬಂದ ಶೇ.80ರಷ್ಟು ವೆಂಟಿಲೇಟರ್ ಧೂಳು ಹಿಡಿಯುತ್ತಿವೆ, ಕರ್ನಾಟಕವೇ ಟಾಪ್!
ರಾಜ್ಯದಲ್ಲಿ ವೆಂಟಿಲೇಟರ್ ಸಿಗದೆ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದೆ. ದುರಂತವೆಂದರೆ ಕೇಂದ್ರದಿಂದ ವೆಂಟಿಲೇಟರ್ ಬಂದರೂ ರಾಜ್ಯದಲ್ಲಿ ಮಾತ್ರ ಬಳಕೆಯಾಗುತ್ತಿಲ್ಲ. ಹೌದು ಕೇಂದ್ರ ಸರ್ಕಾರ ರಾಜ್ಯಗಳಿಗೆ ಕಳುಹಿಸಿದ ವೆಂಟಿಲೇಟರ್‌ಗಳು ಸದ್ಯ ಧೂಳು ಹಿಡಿಯುತ್ತಿವೆ.

ಸದ್ಯ ಈ ಕೆಂದ್ರ ಕಳುಹಿಸಿರುವ ವೆಂಟಿಲೇಟರ್ ಬಳಸದಿರುವವರ ಪಟ್ಟಿಯಲ್ಲಿ ಕರ್ನಾಟಕವೇ ಮೊದಲ ಸ್ಥಾನದಲ್ಲಿದೆ ಎಂಬುವುದು ಅದಕ್ಕೂ ದೊಡ್ಡ ವಿಚಾರ. ವೆಂಟಿಲೇಟರ್ ಕೊರತೆಯಿಂದ ರಾಜ್ಯದಲ್ಲಿ ಸಾವು ಸಂಭವಿಸುತ್ತಿದ್ದರೂ ಸರ್ಕಾರ ಹೀಗೆ ಯಾಕೆ ನಡೆದುಕೊಳ್ಳುತ್ತಿದೆ ಎಂಬುವುದೇ ದೊಡ್ಡ ಸವಾಲಾಗಿದೆ.
ಕೊಪ್ಪಳದ ಗೋದಾಮಿನಲ್ಲಿ 18 ವೆಂಟಿಲೇಟರ್‌ಗಳಿಗೆ ಧೂಳು!
ಕೆಂದ್ರ ಸರ್ಕಾರ ಕಳುಹಿಸಿಕೊಟ್ಟ ಶೇ. 80ರಷ್ಟು ವೆಮಟಿಲೇಟರ್‌ಗಳನ್ನು ರಾಜ್ಯ ಸರ್ಕಾರ ಈವರೆಗೆ ಬಳಸಿಯೇ ಇಲ್ಲ. ಪಿಎಂ ಕೇರ್ಸ್ ಫಂಡ್‌ನಿಂದ ಬರೋಬ್ಬರಿ 2,025 ವೆಂಟಿಲೇಟರ್‌ಗಳು ಬಂದಿದ್ದು, ಇವುಗಳಲ್ಲಿ ಶೇ. 20 ಅಂದರೆ ಕೇವಲ 405 ಮಾತ್ರ ಬಳಸಲಾಗುತ್ತಿದೆ.
ಇನ್ನು ಈ ವೆಂಟಿಲೇಟರ್‌ಗಳು ಸೂಕ್ತವಾಗಿ ಬಳಸದಿರುವುದಕ್ಕೆ ಪ್ರಧಾನಿ ಮೋದಿ ಫುಲ್ ಗರಂ ಆಗಿದ್ದಾರೆ. ಸೋಂಕಿನ ನಡುವೆ ಸರ್ಕಾರಗಳ ಈ ಧೋರಣೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.