* ಬಳಕೆ ಮಾಡಿಕೊಳ್ಳುವುದಕ್ಕಿಲ್ಲವಂತೆ ಸಿಬ್ಬಂದಿ!* ಬಳಕೆ ಮಾಡಿಕೊಳ್ಳಲು ಬೇಕಂತೆ ಆಕ್ಸಿಜನ್‌ ಬೆಡ್‌* ಕೊಪ್ಪಳ ಜಿಲ್ಲೆಯಲ್ಲಿ ವೆಂಟಿಲೇಟರ್‌ ಬಳಕೆ ಮಾಡಲು ಅಗತ್ಯ ವೈದ್ಯರು ಮತ್ತು ಸಿಬ್ಬಂದಿಯ ಕೊರತೆ 

ಸೋಮರಡ್ಡಿ ಅಳವಂಡಿ

ಕೊಪ್ಪಳ(ಮೇ.14): ರಾಜ್ಯ ಮತ್ತು ಜಿಲ್ಲೆಯಲ್ಲಿ ಕಳೆದೊಂದು ತಿಂಗಳಿಂದ ವೆಂಟಿಲೇಟರ್‌ಗಳ ಕೊರತೆಯಾಗಿದೆ. ಈಗಲೂ ವೆಂಟಿಲೇಟರ್‌ ಇಲ್ಲದೆ ರೋಗಿಗಳು ಸಾಯುತ್ತಿದ್ದಾರೆ. ದುರಂತ ಎಂದರೆ, ಜಿಲ್ಲೆಯಲ್ಲಿ 18 ವೆಂಟಿಲೇಟರ್‌ಗಳು ಬಳಕೆಯಾಗದೆ ಗೋದಾಮಿನಲ್ಲಿ ಧೂಳು ತಿನ್ನುತ್ತಿವೆ! ಇದು, ಜಿಲ್ಲಾಡಳಿತದ ಅಧಿಕೃತ ಮಾಹಿತಿಯ ಲೆಕ್ಕಾಚಾರ. ಇನ್ನೂ ಅಚ್ಚರಿ ಎಂದರೆ, ಅಳವಡಿಸಲಾದ ಕೆಲವು ವೆಂಟಿಲೇಟರ್‌ ಬಳಕೆಯಾಗುತ್ತಿಲ್ಲ ಎನ್ನುವ ಆರೋಪವೂ ಇದೆ.

ಜಿಲ್ಲೆಯಲ್ಲಿ 72 ವೆಂಟಿಲೇಟರ್‌ ಇದ್ದು, ಈ ಪೈಕಿ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್‌ಗೆ 29 ಹಾಗೂ ನಾನ್‌ ಕೋವಿಡ್‌ 12 ಸೇರಿ 41 ವೆಂಟಿಲೇಟರ್‌ ಬಳಕೆಯಾಗುತ್ತಿವೆ. ಒಂದು ವೆಂಟಿಲೇಟರ್‌ ಆಕ್ಸಿಜನ್‌ ಬೆಡ್‌ ಇಲ್ಲದೇ ಉಪಯೋಗವಾಗುತ್ತಿಲ್ಲ. ಒಟ್ಟು 42 ವೆಂಟಿಲೇಟರ್‌ ಜಿಲ್ಲಾಸ್ಪತ್ರೆಯಲ್ಲಿವೆ.

"

ಗಂಗಾವತಿ- 8, ಯಲಬುರ್ಗಾ-4. ಅಲ್ಲಿಗೆ 54 ವೆಂಟಿಲೇಟರ್‌ ಬಳಕೆಯಾಗುತ್ತಿದ್ದು, 18 ವೆಂಟಿಲೇಟರ್‌ ಖಾಲಿ ಉಳಿದಿವೆ. ಇದರಲ್ಲಿ 6 ವೆಂಟಿಲೇಟರ್‌ ಮುನಿರಾಬಾದ್‌ನಲ್ಲಿ ಕಳೆದೊಂದು ವರ್ಷದಿಂದ ಹಾಗೆ ಇದ್ದು, ಬಳಕೆ ಮಾಡಿಲ್ಲ. ಈಗ ಅವುಗಳನ್ನು ಕೊಪ್ಪಳ ಗವಿಸಿದ್ಧೇಶ್ವರ ಕೋವಿಡ್‌ ಆಸ್ಪತ್ರೆಯಲ್ಲಿ ಸ್ಥಾಪಿಸುವ ಪ್ರಯತ್ನ ನಡೆದಿದೆ.

ಕೊಪ್ಪಳ: ಕೋವಿಡ್‌ ಆಸ್ಪತ್ರೆ ಕಸಗೂಡಿಸಿದ ಗವಿಸಿದ್ಧೇಶ್ವರ ಶ್ರೀ

ಏನು ಸಮಸ್ಯೆ?:

ಜಿಲ್ಲೆಯಲ್ಲಿ ವೆಂಟಿಲೇಟರ್‌ ಬಳಕೆ ಮಾಡಲು ಅಗತ್ಯ ವೈದ್ಯರು ಮತ್ತು ಸಿಬ್ಬಂದಿಯ ಕೊರತೆ ಇದೆ. ಅರವಳಿಕೆ ತಜ್ಞರು, ತಜ್ಞ ಸ್ಟಾಫ್‌ ನರ್ಸ್‌ ಬೇಕಾಗುತ್ತದೆ. ಎರಡು ವೆಂಟಿಲೇಟರ್‌ಗೆ ಒಬ್ಬರಾದರೂ ಸ್ಟಾಫ್‌ ನರ್ಸ್‌ ಬೇಕು. ವೆಂಟಿಲೇಟರ್‌ ಸ್ಥಾಪನೆ ಮಾಡುವಾಗ ಅದಕ್ಕೆ ಪೂರಕ ಆಕ್ಸಿಜನ್‌ ಬೆಡ್‌ ಬೇಕಾಗುತ್ತದೆ. ಸದ್ಯ ಅಂಥ ಲಭ್ಯತೆ ಇಲ್ಲದಿರುದು ಎಲ್ಲವನ್ನೂ ಬಳಕೆ ಮಾಡಲು ಆಗುತ್ತಿಲ್ಲ ಎನ್ನಲಾಗುತ್ತಿದೆ.

ವೆಬ್‌ಸೈಟ್‌ನಲ್ಲಿ ಪ್ರಕಟಿಸಿ...

ಜಿಲ್ಲೆಯಲ್ಲಿ ವೆಂಟಿಲೇಟರ್‌ ಬಳಕೆಯ ಬಗ್ಗೆ ತಪ್ಪು ಮಾಹಿತಿ ನೀಡಲಾಗುತ್ತಿದೆ ಎನ್ನಲಾಗುತ್ತಿದೆ. ಯಾರಾದರೂ ಒತ್ತಡ ತಂದಾಗ ಮಾತ್ರ ಬಳಕೆ ಮಾಡಲಾಗುತ್ತದೆ ಎನ್ನುವ ಆಪಾದನೆ ಇದೆ. ಸದ್ಯ ನಾನ್‌ ಕೋವಿಡ್‌ ವೆಂಟಿಲೇಟರ್‌ ಇದ್ದರೂ ಅವುಗಳಲ್ಲಿ ಎಲ್ಲವನ್ನೂ ಬಳಕೆ ಮಾಡುತ್ತಿಲ್ಲ. ವೆಂಟಿಲೇಟರ್‌ ಭರ್ತಿಯಾಗಿವೆ ಎನ್ನುವ ಸಿದ್ಧ ಉತ್ತರ ನೀಡಲಾಗುತ್ತದೆ. ಆದ್ದರಿಂದ ಬೆಡ್‌ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡುವ ವೇಳೆಯಲ್ಲಿ ಯಾವ ವೆಂಟಿಲೇಟರ್‌ನಲ್ಲಿ ಯಾವ ರೋಗಿ ಇದ್ದಾನೆ ಎನ್ನುವ ಮಾಹಿತಿಯನ್ನೂ ಪ್ರಕಟಿಸಬೇಕು. ಅಂದಾಗಲೇ ನಿಜವಾಗಿಯೂ ಬಳಕೆಯಾಗುತ್ತಿವೆಯಾ ಇಲ್ಲವೋ ಎನ್ನುವ ಸತ್ಯಾಸತ್ಯತೆ ಗೊತ್ತಾಗುತ್ತದೆ. ಕೋವಿಡ್‌ ವೆಂಟಿಲೇಟರ್‌ಗಳ ಬಳಕೆಯ ಕುರಿತು ಪಾರದರ್ಶಕತೆಯೂ ಮೂಡಿ ಬರಬೇಕಾಗಿದೆ. ವೆಬ್‌ಸೈಟ್‌ನಲ್ಲಿ ಪ್ರಕಟಿಸದಿದ್ದರೂ ಆಸ್ಪತ್ರೆಯಲ್ಲಿಯಾದರೂ ವೆಂಟಿಲೇಟರ್‌ಗಳ ವಿವರ ಹಾಗೂ ಅದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಯ ಮಾಹಿತಿಯನ್ನು ಪ್ರಕಟ ಮಾಡಿದಾಗಲೇ ಇದರ ಸತ್ಯಾಸತ್ಯತೆ ಗೊತ್ತಾಗುತ್ತದೆ.

ವೆಂಟಿಲೇಟರ್‌ ಸಮಸ್ಯೆ ಇಲ್ಲ. ಆದರೆ, ವೆಂಟಿಲೇಟರ್‌ ಅಳವಡಿಸಲು ಆಕ್ಸಿಜನ್‌ ಬೆಡ್‌ ಹಾಗೂ ತಜ್ಞ ವೈದ್ಯರ ಕೊರತೆ ಇದೆ. ಹೀಗಾಗಿ, ವೆಂಟಿಲೇಟರ್‌ಗಳು ಖಾಲಿ ಬಿದ್ದಿವೆ ಎಂದು ಹೆಸರು ಹೇಳದ ವೈದ್ಯರು ಹೇಳಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲಿ 29 ಕೋವಿಡ್‌ ವೆಂಟಿಲೇಟರ್‌ ಹಾಗೂ 12 ನಾನ್‌ ಕೋವಿಡ್‌ ವೆಂಟಿಲೇಟರ್‌ ಇದ್ದು, ಅಷ್ಟೂ ಭರ್ತಿಯಾಗಿವೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪ್ರಶಾಂತ ತಿಳಿಸಿದ್ದಾರೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona