
ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಅವಿಮುಕ್ತೇಶ್ವರಾನಂದ ಸ್ವಾಮೀಜಿ ನಡುವೆ ತೀವ್ರ ಸಂಘರ್ಷ ಏರ್ಪಟ್ಟಿದೆ. ಈ ಸಂತ-ಸನ್ಯಾಸಿ ಸಮರದ ಹಿಂದಿನ ಕಾರಣಗಳು, ತೆರೆಮರೆಯ ರಾಜಕೀಯ ಬೆಳವಣಿಗೆಗಳು ಮತ್ತು ಬಿಜೆಪಿ ಪಕ್ಷದೊಳಗಿನ ಆಂತರಿಕ ಬಿಕ್ಕಟ್ಟಿನ ಬಗ್ಗೆ ಇಲ್ಲಿದೆ ವರದಿ.
ಉತ್ತರ ಪ್ರದೇಶದಲ್ಲಿ ಸಂತ ಸಿಎಂ Vs ಸ್ವಾಮೀಜಿ ಧರ್ಮಯುದ್ಧ..! ಮೋದಿ ವಿರೋಧಿ ಸ್ವಾಮೀಜಿ ಬೆನ್ನಿಗೆ ಉತ್ತರದ ಉಪಮುಖ್ಯಮಂತ್ರಿ.. ಸಮರ.. ಇದು ಸನ್ಯಾಸಿಗಳಿಬ್ಬರ ನಡುವಿನ ಸಮರ.. ಉತ್ತರ ಪ್ರದೇಶ ಮಾತ್ರವಲ್ಲ, ಇಡೀ ರಾಷ್ಟ್ರದ ಚಿತ್ತವನ್ನ ತನ್ನತ್ತ ಸೆಳೆದುಕೊಂಡಿರೋ ಕದನವಿದು.. ಹಾಗಿದ್ರೆ ಈ ಸಂಗ್ರಾಮಕ್ಕೆ ಕಾರಣ ಏನು..? ಕಣ್ಣಿಗೆ ಕಾಣ್ತಿರೋ ಸಂಘರ್ಷ ಹೇಗಿದೆ..? ತೆರೆ ಹಿಂದೆ ನಡೆಯುತ್ತಿರೋ ದಂಗಲ್ ಯಾವ ರೀತಿಯಾಗಿದೆ..? ಬಿಜೆಪಿ ಕಂಟ್ರೋಲ್ನಲ್ಲಿರೋ ವಿಶಾಲ ಸಾಮ್ರಾಜ್ಯದಲ್ಲಿಯೇ ಮೂಡಿದ್ಯಾ ಬಿರುಕು.? ಸಂತ ವರ್ಸಸ್ ಸಂತ ನಡುವಿನ ಸಮರದ ಹಿಂದಿನ ಅಸಲಿ ಕಥೆಯನ್ನ ನಿಮ್ಮ ಮುಂದೆ ತೆರೆದಿಡ್ತೀವಿ ನೋಡಿ.
ಅಷ್ಟಕ್ಕೂ ಅವಿಮುಕ್ತೇಶ್ವರಾನಂದ ಸ್ವಾಮೀಜಿ, ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಸಮರ ಸಾರಿರೋದು ಯಾಕೆ.? ಈ ಎಲ್ಲಾ ಜಟಾಪಟಿಯ ಮೂಲ ಏನು? ಅವಿಮುಕ್ತೇಶ್ವರಾನಂದ ಸ್ವಾಮೀಜಿಯು ಈಗ್ಯಾಕೆ ಯೋಗಿ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕ್ತಿದ್ದಾರೆ..? ಈ ಸಂಘರ್ಷಕ್ಕೊಂದು ಮೂಲ ಅಂತ ಇರಬೇಕಲ್ವಾ..? ಹಾಗಿದ್ರೆ ಆ ಮೂಲ ಏನು..? ಈ ಜಟಾಪಟಿಯ ಎಫೆಕ್ಟ್ ಉತ್ತರ ಪ್ರದೇಶದಲ್ಲಿ ಹೇಗಿದೆ..? ಎಲ್ಲಾ ಡಿಟೇಲ್ ಇಲ್ಲಿದೆ ನೋಡಿ..