ನಡುರಸ್ತೆಯಲ್ಲಿ ಕೂದಲು ಎಳೆದುಕೊಂಡು ಕಿತ್ತಾಡಿದ ಯುವತಿಯರು, ವಿಡಿಯೋ ವೈರಲ್

ನಡುರಸ್ತೆಯಲ್ಲಿ ಯುವತಿಯರಿಬ್ಬರು ಪರಸ್ಪರ ಹೊಡೆದಾಡಿಕೊಂಡಿದ್ದು ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Share this Video
  • FB
  • Linkdin
  • Whatsapp

ನಡುರಸ್ತೆಯಲ್ಲಿ ಯುವತಿಯರಿಬ್ಬರು ಪರಸ್ಪರ ಹೊಡೆದಾಡಿಕೊಂಡಿದ್ದು ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇತ್ತೀಚೆಗೆ ಹುಡುಗಿಯರು ಕೂಡ ತಾವೇನೂ ಪುರುಷರಿಗೆ ಕಡಿಮೆ ಇಲ್ಲ ಎಂಬಂತೆ ಬೀದಿಗಳಲ್ಲಿ ನಿಂತು ಗ್ಯಾಂಗ್‌ ಕಟ್ಟಿಕೊಂಡು ಕಿತ್ತಾಡುವುದು ಸಾಮಾನ್ಯ ಎನಿಸಿದೆ. ಕೆಲ ದಿನಗಳ ಹಿಂದೆ ಯುವತಿಯರ ಗ್ಯಾಂಗ್‌ ರಸ್ತೆಯಲ್ಲಿ ನಿಂತು ಪರಸ್ಪರ ಹೊಡೆದಾಡಿಕೊಂಡ ವಿಡಿಯೋ ವೈರಲ್ ಆಗಿತ್ತು. ಇದಾದ ಬಳಿಕ ಉತ್ತರಪ್ರದೇಶದಲ್ಲಿ ಪಬ್ಬೊಂದರ ಮುಂದೆ ಯುವತಿಯರಿಬ್ಬರು ಕುಡಿದ ಮತ್ತಿನಲ್ಲಿ ಯುವಕನಿಗೆ ಥಳಿಸಿದ ವಿಡಿಯೋ ವೈರಲ್ ಆಗಿತ್ತು. ಈಗ ಯುವತಿಯರಿಬ್ಬರು ನಡುರಸ್ತೆಯಲ್ಲಿ ರಸ್ಲಿಂಗ್‌ ಸ್ಪರ್ಧಾಳುಗಳಂತೆ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ತುಂಡುಡುಗೆ ಧರಿಸಿದ ಯುವತಿಯರಿಬ್ಬರು ಹಾವು ಮುಂಗುಸಿಗಳಂತೆ ಹೊಡೆದಾಡಿಕೊಂಡಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Related Video