ತಿಮ್ಮಪ್ಪನಿಗೂ ಮೋಸ, 'ನಮೋ ವೆಂಕಟೇಶ..' ಎಂದವರಿಗೆ ನಾನ್‌ವೆಜ್‌ ಪ್ರಸಾದ ತಿನ್ನಿಸಿದ ಜಗನ್‌!


ದೇಶಾದ್ಯಂತ ತಿರುಪತಿ ತಿಮ್ಮಪ್ಪನ ಭಕ್ತರಿಗೆ ಬರಸಿಡಿಲು ಬಡಿದಿದೆ. ಜಗನ್ ಅವಧಿಯಲ್ಲಿ ಲಡ್ಡುಗೆ ಪ್ರಾಣಿಗಳ ಕೊಬ್ಬು ಬಳಕೆ ದೃಢವಾಗಿದೆ.  ವೈಎಸ್​ಆರ್ ಈ ಆರೋಪ ಅಲ್ಲಗಳೆದರೂ,  ಟಿಡಿಪಿ, ವೈಎಸ್‌ಆರ್‌ ವಿರುದ್ಧ ಚಾಟಿ ಬೀಸಿದೆ.

First Published Sep 20, 2024, 11:24 PM IST | Last Updated Sep 20, 2024, 11:24 PM IST

ಬೆಂಗಳೂರು (ಸೆ.20): ಆಂಧ್ರಪ್ರದೇಶದಲ್ಲಿ ತಿರುಪತಿ ಲಡ್ಡು ಲಡಾಯಿ ಕಿಚ್ಚು ಜೋರಾಗಿದೆ. ರಾಜಕೀಯ ವಾಗ್ವಾದಕ್ಕೆ ತಿರುಪತಿ ತಿಮ್ಮಪ್ಪನ ಲಡ್ಡು ಕಾರಣವಾಗಿದೆ. ಲ್ಯಾಬ್‌ ಪರೀಕ್ಷೆಯಲ್ಲೂ ‘ತಿರುಪತಿ ಪ್ರಸಾದ’ದ ರಹಸ್ಯ ಸಾಬೀತಾಗಿದೆ.

ಜಗನ್ ಸರ್ಕಾರವಿದ್ದಾಗ ತಿರುಪತಿ ಲಡ್ಡುಗೆ ಪ್ರಾಣಿಗಳ ಕೊಬ್ಬು ಬಳಕೆಯಾಗಿರುವುದು ನಿಜ ಎನ್ನಲಾಗಿದೆ. ಆಂಧ್ರ ಸಿಎಂ ಚಂದ್ರಬಾಬು ಮಾತಿಗೆ ಲ್ಯಾಬ್ ರಿಪೋರ್ಟ್‌ ಸಾಕ್ಷ್ಯವನ್ನೂ ನೀಡಲಾಗಿದೆ. ಲ್ಯಾಬ್ ರಿಪೋರ್ಟ್‌ನಲ್ಲಿ ದನದ ಕೊಬ್ಬು, ಮೀನಿನ ಎಣ್ಣೆ ಪತ್ತೆಯಾಗಿದೆ.

History Of Tirupati Laddu: 308 ವರ್ಷಗಳ ಇತಿಹಾಸದ ತಿರುಪತಿ ಲಡ್ಡುವಿಗೆ ಇದೆಂಥಾ ಅಪಚಾರ!

ಇದರ ನಡುವೆ ಟಿಟಿಡಿಗೆ ತುಪ್ಪ ಸರಬರಾಜು ಮಾಡುತ್ತಿದ್ದ ತಮಿಳುನಾಡು ಮೂಲದ ಕಂಪನಿಗೆ ಬಿಗಿ ಪೊಲೀಸ್‌ ಭದ್ರತೆ ಒದಗಿಸಲಾಗಿದೆ. ಇನ್ನೊಂದೆಡೆ ಕಂಪನಿ ಕೂಡ ಮಾಡಿರುವ ಆರೋಪಗಳೆಲ್ಲವೂ ಸುಳ್ಳು ಎಂದು ಹೇಳಿದೆ.