
The Kashmir Files: ಸುಳ್ಳಿನ ಕಂತೆ, ಬಲಿಯಾದ ಮುಸ್ಲಿಮರ ಬಗ್ಗೆ ಒಂದು ವಾಕ್ಯವೂ ಇಲ್ಲ: ಒಮರ್ ಅಬ್ದುಲ್ಲಾ
ದಿ ಕಾಶ್ಮೀರ್ ಫೈಲ್ಸ್, ಬಹಳ ಚರ್ಚೆಯಾಗುತ್ತಿರುವ ಸಿನಿಮಾ. ಕಾಶ್ಮೀರ ಪಂಡಿತರ ಮೇಲೆ ನಡೆದ ಕ್ರೌರ್ಯದ ಕಹಿ ಸತ್ಯ ಬಿಚ್ಚಿಡುವ ಬಾಲಿವುಡ್ ವಿವೇಕ್ ಅಗ್ನಿಗೋತ್ರಿ ನಿರ್ದೇಶನದ ಚಿತ್ರ ದಿ ಕಾಶ್ಮೀರ ಫೈಲ್ಸ್ ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿದೆ.
ಶ್ರೀನಗರ (ಮಾ. 20): ದಿ ಕಾಶ್ಮೀರ್ ಫೈಲ್ಸ್, ಬಹಳ ಚರ್ಚೆಯಾಗುತ್ತಿರುವ ಸಿನಿಮಾ. ಕಾಶ್ಮೀರ ಪಂಡಿತರ ಮೇಲೆ ನಡೆದ ಕ್ರೌರ್ಯದ ಕಹಿ ಸತ್ಯ ಬಿಚ್ಚಿಡುವ ಬಾಲಿವುಡ್ ವಿವೇಕ್ ಅಗ್ನಿಗೋತ್ರಿ ನಿರ್ದೇಶನದ ಚಿತ್ರ ದಿ ಕಾಶ್ಮೀರ ಫೈಲ್ಸ್ ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿದೆ. ಚಿತ್ರ ವೀಕ್ಷಿಸಿದ ಪ್ರತಿಯೊಬ್ಬರೂ ಭಾವುಕರಾಗುತ್ತಿರುವುದು ಈ ಚಿತ್ರದ ಕಥೆ ಅದೆಷ್ಟು ಪರಿಣಾಮ ಬೀರುತ್ತಿದೆ ಎನ್ನುವುದಕ್ಕೆ ಸಾಕ್ಷಿ. ಇನ್ನು ರಾಜಕೀಯವಾಗಿ ಕಾಂಗ್ರೆಸ್- ಬಿಜೆಪಿ ನಡುವೆ ಕೆಸರೆರಚಾಟಕ್ಕೆ ಆಹಾರವೂ ಆಗಿದೆ.
Russia Ukraine War:ರಷ್ಯಾಗೆ ಜಾಗತಿಕ ನಿರ್ಬಂಧ, ಭಾರತೀಯ ಔಷಧ ಕಂಪನಿಗಳಿಗೆ ಹೆಚ್ಚಾಯ್ತು ಡಿಮ್ಯಾಂಡ್.!
ಇದೀಗ ಕಾಶ್ಮೀರ ಮಾಜಿ ಸಿಎಂ ನ್ಯಾಶನಲ್ ಕಾನ್ಫೆರೆನ್ಸ್ ಪಕ್ಷದ ಅಧ್ಯಕ್ಷ ಓಮರ್ ಅಬ್ದುಲ್ಲಾ, 'ಇದು ಸುಳ್ಳಿನ ಕಂತೆ. ಕಾಶ್ಮೀರ ಪಂಡಿತರ ಮೇಲೆ ಕ್ರೌರ್ಯ ನಡೆಯಿತು ಎಂದು ಹೇಳಲಾಗುತ್ತಿರುವ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಫಾರುಖ್ ಅಬ್ದುಲ್ಲಾ ಆಗಿರಲಿಲ್ಲ. ಈ ವೇಳೆ ರಾಜ್ಯಪಾಲರ ಆಡಳಿತವಿತ್ತು. ಕೇಂದ್ರದಲ್ಲಿ ವಿಪಿ ಸಿಂಗ್ ಸರ್ಕಾರವಿತ್ತು. ಈ ಸರ್ಕಾರಕ್ಕೆ ಬಿಜೆಪಿ ಬಾಹ್ಯ ಬೆಂಬಲವಿತ್ತು. ಆದರೆ ಈ ವಿವರ ಚಿತ್ರದಲ್ಲಿ ಮರೆ ಮಾಚಲಾಗಿದೆ. 1990 ರಲ್ಲಿ ಕಾಶ್ಮೀರ ಪಂಡಿತರ ಮೇಲೆ ದಾಳಿಯಾಗಿದೆ ಅನ್ನುವುದು ಸತ್ಯವಾದರೆ ವಿಷಾಧಿಸುತ್ತೇನೆ. ಆದರೆ ಕಣಿವೆ ರಾಜ್ಯದಲ್ಲಿ ಮುಸ್ಲಿಮರೂ ಕೂಡಾ ಬಲಿಯಾಗಿದ್ದಾರೆ. ಅವರ ಕುರಿತ ಒಂದು ವಾಕ್ಯವೂ ಚಿತ್ರದಲ್ಲಿಲ್ಲ. ಹೀಗಾಗಿ ದಿ ಕಾಶ್ಮೀರ ಚಿತ್ರ ಸತ್ಯಕ್ಕೂ ದೂರವಾಗಿದೆ' ಎಂದು ಅಬ್ದುಲ್ಲಾ ಹೇಳಿದ್ದಾರೆ.