Narendra Modi: ಪಾಕ್‌ನಲ್ಲಿ ಉಗ್ರರ ಮುಗಿಸುವ ಹಿಂದೆ RAW ಕೈವಾಡ ? ಒಬ್ಬೊಬ್ಬ ಟೆರರಿಸ್ಟ್‌ ಹತ್ಯೆಯೂ ಅತ್ಯಂತ ರಣರೋಚಕ !

‘ಅಪರಿಚಿತ ಬಂದೂಕುದಾರಿ’ಮೂಲಕ RAW ಹತ್ಯೆ ಮಾಡಿಸಿದೆಯಾ? 
ಭಾರತದ ವಿರುದ್ಧ ಸ್ಕೆಚ್ ಹಾಕಿದ್ದವರು ಎಲ್ಲಿದ್ರು ಆಗ್ತಾರಾ ಖಲ್ಲಾಸ್?
ಕೆನಡಾದಲ್ಲೂ ತನ್ನ ವಿರೋಧಿಗಳ ಹೆಡೆಮುರಿ ಕಟ್ಟಿತಾ ಭಾರತ..? 
 

First Published Apr 7, 2024, 11:19 AM IST | Last Updated Apr 7, 2024, 11:20 AM IST

“ಇದು ಹಳೇ ಭಾರತ ಅಲ್ಲ. ಇದು ನಯಾ ಭಾರತ್ ಅನ್ನೋದು ಈಗ ಶತ್ರು ದೇಶಗಳಿಗೂ ಅರ್ಥವಾಗಿದೆ. ಭಾರತದ ಹೆಸರು ಕೇಳಿದ್ರೆ ಈಗ ಶತ್ರು ದೇಶಗಳು ನಡುಗುತ್ತವೆ. ಭಾರತದ ತಂಟೆಗೆ ಬಂದ್ರೆ ನುಗ್ಗಿ ಹೊಡೆಯುತ್ತೇವೆ ಎಂಬುವುದು ಶತ್ರುಗಳಿಗೂ ಗೊತ್ತಿದೆ.” ಪ್ರಧಾನಿ ನರೇಂದ್ರ ಮೋದಿ(Narendra Modi)ರಾಜಸ್ಥಾನದಲ್ಲಿ(Rajasthan) ಹೇಳಿದ್ದಾರೆ. ಈ ಮಾತು ಮೋದಿಯವರ ಈ ಮಾತುಗಳು ಎಲ್ಲೆಡೆ ಚರ್ಚೆಗಳಾಗುತ್ತಿದೆ. ಯಾಕೆಂದ್ರೆ ಪ್ರಧಾನಿ ನರೇಂದ್ರ ಮೋದಿ ಈ ಮಾತುಗಳನ್ನು  ಸುಮ್ಮನೆ ಹೇಳಿಲ್ಲ. ಈ ಮಾತುಗಳನ್ನು ಮೋದಿ ಈಗಾಗ್ಲೇ ಸಾಧಿಸಿಯಾಗಿದೆ. ದೇಶಕ್ಕೆ ತೊಂದ್ರೆ ಕೊಟ್ಟ ಉಗ್ರರನ್ನು(Terrorists) ಶತ್ರುಗಳ ಗಡಿಯೊಳಗೆ ನುಗ್ಗಿ ಆಗಲೇ ಹೊಡೆಯಲಾಗಿದೆ. ಪ್ರಧಾನಿ ನರೇಂದ್ರ ಮೋದಿ ರಾಜಸ್ಥಾನದ ಚುರುವಿನಲ್ಲಿ ಎಲೆಕ್ಷನ್ ಪ್ರಚಾರದಲ್ಲಿದ್ದರು. ಈ ಸಂದರ್ಭದಲ್ಲಿ ರಾಜಸ್ಥಾನ ಜನತೆ ಮುಂದೆ, ಹತ್ತು ವರ್ಷಗಳ ತಮ್ಮ ಸಾಧನಾ ಪಟ್ಟಿಯನ್ನು ಮುಂದಿಟ್ಟರು. ಹಾಗೆನೇ 2014ರ ಹಿಂದೆ ಭಾರತ ಹೇಗಿತ್ತು, ಭಾರತೀಯ ಸೇನೆ ಹೇಗಿತ್ತು. ಆದ್ರೆ, ಈಗ ಭಾರತ ಹೇಗಿದೆ, ಭಾರತೀಯ ಸೇನೆ(Indian Army) ಹೇಗೆ ಬದಲಾಗಿದೆ ಅನ್ನೋದನ್ನು ಮೋದಿ ವಿವರಿಸಿದರು. ಈ ಸಂದರ್ಭದಲ್ಲಿ  ಅಂದು ಸೇನೆಯನ್ನು ಕಟ್ಟಿ ಹಾಕಿದ್ದವರು. ಈಗ ಸೇನಾ ಶಕ್ತಿಯನ್ನು ಪ್ರಶ್ನಿಸುತ್ತಿದ್ದಾರೆ. ಉಗ್ರರ ಹೆಡೆಮುರಿ ಕಟ್ಟಿದ್ದೇವೆಂದು ಸೇನೆ ಹೇಳಿದರೆ, ಸಾಕ್ಷಿ ಕೊಡಿ ಎಂದು ಕೇಳುತ್ತಿದ್ದಾರೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು ಮೋದಿ.

ಇದನ್ನೂ ವೀಕ್ಷಿಸಿ:  Turning Point : ಬೆಚ್ಚಿಬೀಳಿಸಿತ್ತು ಭಿಂದ್ರನ್‌ವಾಲೆಯ ಬೇಡಿಕೆ! ಪಂಜಾಬಿನ ರಕ್ತಪಾತದ ಹಿಂದೆ ರಾಜಕಾರಣದ ನೆರಳು!

Video Top Stories