ಪಾಕ್ ಆರ್ಮಿ ಟೆರರಿಸ್ಟ್‌ಗಳಿಗೆ ಭಾರತವೇ ಟಾರ್ಗೆಟ್..! ಮಾಜಿ ಸೈನಿಕರನ್ನು ಛೂ ಬಿಡುತ್ತಿರುವ ಪಾಕ್ ಆರ್ಮಿ
ಪಾಕ್ ಮಾಜಿ ಸೈನಿಕರಿಂದಲೇ ನಡೆಯಿತಾ ರಜೌರಿ ಅಟ್ಯಾಕ್..?
ನಿದ್ದೆಗೆಡಿಸಿದ್ದ ಲಷ್ಕರ್ ಇ ತೊಯ್ಬಾ ಕಮಾಂಡರ್ ಉಡೀಸ್
ಮೊನ್ನೆಯ ರಜೌರಿ ದಾಳಿಯಲ್ಲಿ ಪಾಕ್ ಮಾಜಿ ಸೈನಿಕರ ನೆರಳು
ಭಾರತದ ಆರ್ಮಿ ಕಮಾಂಡರ್ ಉಪೇಂದ್ರ ದ್ವಿವೇದಿ ಅವರಿಂದ ಅಚ್ಚರಿ ಮಾಹಿತಿಯೊಂದು ಹೊರ ಬಿದ್ದಿದೆ. ಮೊನ್ನೆ ಜಮ್ಮು ಕಾಶ್ಮೀರ್‌ನ(Jammu and Kashmir) ರಜೌರಿನಲ್ಲಿ ಉಗ್ರರರು ಕಾಣಿಸಿಕೊಂಡಿದ್ರು. ಉಗ್ರರ ದಾಳಿಯಿಂದ ಐವರು ಭಾರತೀಯ ಸೈನಿಕರು(Soliders) ವೀರ ಮರಣವನಪ್ಪಿದ್ದರು. ಈ ಉಗ್ರರ ದಾಳಿಯಲ್ಲಿ ಪಾಕ್‌ನ (Pakisthan) ಮಾಜಿ ಸೈನಿಕರೂ ಇದ್ದರೆಂದು ಕಮಾಂಡರ್ ಉಪೇಂದ್ರ ದ್ವಿವೇದಿ ಹೇಳಿದ್ದಾರೆ. ಇಂತಹದ್ದೊಂದು ಪ್ರಶ್ನೆ ಈಗ ಹುಟ್ಟಿಕೊಂಡಿದೆ. ಪಾಕಿಸ್ತಾನ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದವರು. ಸೇವಾ ನಿವೃತ್ತಿ ನಂತರ ಕೆಲವರು ಮನೆಯಲ್ಲಿ ಸುಮ್ಮನೆ ಕೂರುವುದಿಲ್ಲವಂತೆ. ಎಡಗೈನಲ್ಲಿ ಗನ್ನು, ಬಲಗೈನಲ್ಲಿ ಬಾಂಬ್ ಹಿಡಿದು, ಸೇವೆಯಲ್ಲಿ ಮುಳುಗಿರ್ತಾರಂತೆ. ಅಂದ್ರೆ, ಪಾಕ್‌ನ ಮಾಜಿ ಸೈನಿಕರಲ್ಲಿ ಕೆಲವರು ನಿವೃತ್ತಿ ನಂತರ ಭಯೋತ್ಪಾದನೆಗೆ ಇಳಿಯುತ್ತಾರಂತೆ. ಇವರ ಕೆಲಸ ಏನ್ ಗೊತ್ತಾ? ಭಾರತದ(India) ಗಡಿಯೊಳಗೆ ನುಗ್ಗಿಸಲು ಉಗ್ರರನ್ನು ತಯಾರು ಮಾಡುವುದು, ಹಾಗೆನೇ ಆ ಹುಡುಗರೊಟ್ಟಿಗೆ ತಾವೂ ಭಾರತದ ಗಡಿಯೊಳಗೆ ನುಸುಳುವುದು. ಜಮ್ಮು ಮತ್ತು ಕಾಶ್ಮೀರದಲ್ಲಿನ ರಜೌರಿ ಮೇಲೆ ದಿಢೀರ್ ಉಗ್ರರು(Terrorist)ಕಾಣಿಸಿಕೊಂಡಿದ್ದರು. ಉಗ್ರರ ಹೆಡೆಮುರಿ ಕಟ್ಟಲು ಜಮ್ಮು ಕಾಶ್ಮೀರ್ ಪೊಲೀಸರೊಂದಿಗೆ ಇಂಡಿಯನ್ ಆರ್ಮಿ ಕಾರ್ಯಾಚರಣೆಗೆ ಇಳಿದಿದ್ದರು. ಅಲ್ಲಿದ್ದದ್ದು ನಾಲ್ಕು ಜನ ಉಗ್ರರು. ಆ ನಾಲ್ವರು ತುಂಬಾ ಟ್ರೇನ್ಡ್ ಉಗ್ರರಾಗಿದ್ದರು. ಹೀಗಾಗಿ ಈ ಕಾರ್ಯಾವರಣೆ ಸುಮಾರು 16 ಗಂಟೆಗಳ ಕಾಲ ನಡೆದಿತ್ತು. ಈ 16 ಗಂಟೆಗಳ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯ ಐವರು ಸೈನಿಕರು ವೀರಮರಣವನ್ನಪ್ಪಿದರು. ಉಗ್ರರ ಬೇಟೆ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡ ಐವರಲ್ಲಿ, 28 ವರ್ಷದ ಕ್ಯಾಪ್ಟನ್ ಪ್ರಾಂಜಲ್ ಕೂಡ ಹೌದು. ಇವರು ನಮ್ಮ ಕರ್ನಾಟಕದವರು.
ಇದನ್ನೂ ವೀಕ್ಷಿಸಿ: ಹಾಡಹಗಲಲ್ಲೇ ಗುಂಡು ಹಾರಿಸಿದ ಕಿರಾತಕರು..! ಆ 2 ಗ್ಯಾಂಗ್‌ಗಳ ನಡುವಿನ ವೈಷಮ್ಯ ಎಂಥದ್ದು ಗೊತ್ತಾ..?