ಹಾಡಹಗಲಲ್ಲೇ ಗುಂಡು ಹಾರಿಸಿದ ಕಿರಾತಕರು..! ಆ 2 ಗ್ಯಾಂಗ್‌ಗಳ ನಡುವಿನ ವೈಷಮ್ಯ ಎಂಥದ್ದು ಗೊತ್ತಾ..?

ಅವನ ಮೇಲಿನ ಸೇಡಿಗೆ ಅಮಾಯಕನ ಮೇಲೆ ಅಟ್ಯಾಕ್..!
ಶಾಂತವಾಗಿದ್ದ ಗುಮ್ಮಟನಗರಿಯಲ್ಲಿ ಮತ್ತೆ ಗುಂಡಿನ ಸದ್ದು..!
ಆ 2 ಗ್ಯಾಂಗ್‌ಗಳ ನಡುವಿನ ವೈಷಮ್ಯ ಎಂಥದ್ದು ಗೊತ್ತಾ..?

Share this Video
  • FB
  • Linkdin
  • Whatsapp


ವಿಜಯಪುರ ಜಿಲ್ಲೆ ಅಂದಾಕ್ಷಣ ನಮಗೆಲ್ಲ ನೆನಪಾಗೋದು ಡೆಡ್ಲಿಯೆಸ್ಟ್‌ ಭೀಮಾತೀರ. ಅಲ್ಲಿ ನಡೆದ ಸರಣಿ ಹತ್ಯಾಕಾಂಡಗಳಿಗೆ ಲೆಕ್ಕವಿಲ್ಲ. ಅರ್ಧ ಶತಮಾನದ ಹಿಂದೆ ಹುಟ್ಟಿಕೊಂಡ ಪಾರಂಪರಿಕ ದ್ವೇಷ, ಅದೇಷ್ಟೋ ಶೂಟೌಟ್‌ ಗಳಿಗೆ(Shootout) ಕಾರಣವಾಗಿದೆ. ಆದ್ರೆ ಹಿಂದಿನ ಎಡಿಜಿಪಿ ಅಲೋಕ್‌ ಕುಮಾರ್‌ ಭೀಮಾತೀರ ರಕ್ತಸಿಕ್ತವಾಗಲು ಕಾರಣವಾಗಿದ್ದ ಚಡಚಣ ಹಾಗೂ ಬೈರಗೊಂಡ ಕುಟುಂಬದ ನಡುವೆ ಸಂದಾನ ಮಾಡಿಸುವ ಮೂಲಕ ರಕ್ತಪಾತಕ್ಕೆ ಕಡಿವಾಣವೇನೋ ಹಾಕಿದ್ದಾರೆ. ಆದ್ರೆ ಪೊಲೀಸ್‌(police) ಇಲಾಖೆ ಭೀಮಾತೀರ ಶಾಂತವಾಗಿದೆ ಅಂತಾ ನಿಟ್ಟುಸಿರು ಬಿಡುತ್ತಿರುವಾಗ್ಲೇ ವಿಜಯಪುರ(Vjayapura) ನಗರದಲ್ಲಿಯೇ ಶೂಟೌಟ್‌, ಗ್ಯಾಂಗ್‌ ವಾರ್‌ಗಳು(Gang war) ಶುರುವಾಗಿವೆ. ರೌಡಿ ಹೈದರ್‌ ಹತ್ಯೆ ಮಾಡಿದ ಶೇಖ್‌ ಮೋದಿ ಮೇಲಿನ ಸೇಡಿಗೆ ಅಳಿಯನ ಮೇಲೆ ನಡೆದ ಅಟ್ಯಾಕ್‌ ಮಾಡಿದ್ರಾ? ಮೇಲ್ನೋಟಕ್ಕೆ ಹಾಗೇ ಕಾಣಿಸಿದ್ರು, ಈ ಪ್ರಕರಣದ ಹಿಂದಿರುವ ಅಸಲಿ ಕಹಾನಿಯೇ ಬೇರೆ.ಅಂದು ಹೈದರ್‌ ಮೇಲೆ ಪೈರಿಂಗ್‌ ನಡೆಸಿ ಮಾಡಲಾದ ಹತ್ಯೆಯ ಬಳಿಕ ರಿವೆಂಜ್‌ ಗಾಗಿ ನಡೆದಿರುವ ಅಟ್ಯಾಕ್‌ ಇದು ಅನ್ನೋದ್ರಲ್ಲಿ ಎರಡು ಮಾತಿಲ್ಲ. ಹಾಗಿದ್ರೆ ಹೈದರ್‌ ಹತ್ಯೆ ಮಾಡಿದ ಉಳಿದ ಆರೋಪಿಗಳ ಮೇಲೆ ನಡೆಯದ ಅಟ್ಯಾಕ್‌ ಶೇಖ್‌ ಮೋದಿಯ ಅಮಾಯಕ ಅಳಿಯನ ಮೇಲೆ ಯಾಕೆ ನಡೆದಿದೆ. ಅಂದ್ರೆ ದಾಲ್‌ ಮೇ ಕುಚ್‌ ಕಾಲಾ ಹೈ ಅನ್ತಿದ್ದಾರೆ ಬಿಜಾಪುರದ ಮಂದಿ.ಗ್ಯಾಂಗ್‌ ವಾರ್‌ಗಳಿಂದಲೇ ನಟೋರಿಯಸ್‌ ಆಗಿ ಬಿಂಬಿತವಾಗಿದ್ದ ಆಗಿದ್ದ ಭೀಮಾತೀರದಲ್ಲಿ ಚಡಚಣ-ಬೈರಗೊಂಡ ಗ್ಯಾಂಗ್‌ ಗಳ ನಡುವೆ ಸಂಧಾನ ನಡೆದು ಶಾಂತಿ ನೆಲೆಸಿದೆ. ಆದ್ರೆ ಈಗ ವಿಜಯಪುರ ನಗರದಲ್ಲಿ ಗ್ಯಾಂಗ್‌ ವಾರ್‌, ಗುಂಡಿನ ದಾಳಿಗಳು MTFTE ಶುರುವಾಗಿರೋದು ಆತಂಕ ಸೃಷ್ಟಿಸಿದೆ. ಪೊಲೀಸ್‌ ಇಲಾಖೆ ಆರಂಭದಲ್ಲೆ ಇದಕ್ಕೆ ಕಡಿವಾಣ ಹಾಕಬೇಕಿದೆ. ವಿಜಯಪುರ ನಗರದಲ್ಲೆ ಮತ್ತೊಂದು ರಕ್ತ ಚರಿತ್ರೆ ಸೃಷ್ಟಿಯಾಗದೇ ಇರಲಿ ಅನ್ನೋದು ನಮ್ಮ ಆಶಯ ಅಂತ ಹೇಳ್ತಾ ಇವತ್ತಿನ ಎಪಿಸೋಡ್ ಮುಗಿಸುತ್ತಿದ್ದೇನೆ.

ಇದನ್ನೂ ವೀಕ್ಷಿಸಿ: ಪ್ರೊಫೈಲ್‌ ಪಿಕ್‌ ನೋಡಿ ಬೆತ್ತಲಾದ... ನಗ್ನ ಲೇಡಿಯ ಖೆಡ್ಡಾಗೆ ಬಿದ್ದು ಲಕ್ಷ ಲಕ್ಷ ಕಳಕೊಂಡ!

Related Video