Asianet Suvarna News Asianet Suvarna News

3 ರಾಜ್ಯಗಳಿಗೆ ರೆಡ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ..!ಪ್ರಕೃತಿಯ ಡೆಡ್ಲಿ ಡಿಸೆಂಬರ್ ಆಟ ಶುರುವಾಯ್ತಾ..!?

ಮುಳುಗಿದ ಹಾಸ್ಪಿಟಲ್..ತೇಲಿ ಹೋದ ಕಾರ್..!
ಕೊಚ್ಚಿ ಹೋಗ್ತಿದ್ದ ಮಹಿಳೆ ಜಸ್ಟ್ ಮಿಸ್..!
ರಣವೇಗದಲ್ಲಿ ನಗರಕ್ಕೆ ನುಗ್ಗಿ ಬಂತು ಸಮುದ್ರ..!
 

ಬರೊಬ್ಬರಿ ಗಂಟೆಗೆ 100 ಕಿ.ಮೀ ವೇಗದಲ್ಲಿ ಮೈಚಾಂಗ್‌ ಸೈಕ್ಲೋನ್‌ ಗಾಳಿ ಬೀಸುತ್ತಿದ್ದು, ಕರಾವಳಿಯಲ್ಲಿ ಜಲ ತಾಂಡವ ಶುರುಮಾಡಿದೆ. ನೋಡ ನೋಡ್ತಿದ್ದಂತೆ ಕೊಚ್ಚಿಹೋದ ಕಾರ್, ದಿಕ್ಕಾಪಾಲಾಗಿ ಓಡಿ ಹೋದ ಜನ. ಸುನಾಮಿ ರೂಪದಲ್ಲಿ ನಗರಕ್ಕೆ ಎಂಟ್ರಿ ಕೊಟ್ಟ ಸಮುದ್ರ. ಈ ಎಲ್ಲಾ ದೃಶ್ಯಗಳು ರೆಕಾರ್ಡ್ ಆಗಿದ್ದು, ಪಕ್ಕದ ತಮಿಳುನಾಡಿನಲ್ಲಿ(Tamilnadu) ಹೌದು ಚೆನ್ನೈ (Chain) ಹಾನಗರವನ್ನ ಈಗ ಮೈಚಾಂಗ್ ಕಬ್ಜಾ ಮಾಡಿಕೊಂಡಿದೆ. ಒಂದೇ ದಿನಕ್ಕೆ ಸೈತಾನ್ ರೂಪ ಪಡೆದುಕೊಂಡಿರೋ ಮೈಚಾಂಗ್ ಸೈಕ್ಲೋನ್.. ಡೆಡ್ಲಿ ಆಟ ಶುರು ಮಾಡಿದೆ. ಬಂಗಾಳ ಕೊಲ್ಲಿಯಲ್ಲಿ ಮೈಚಾಂಗ್ ಚಂಡಮಾರುತ ಸೃಷ್ಟಿಯಾಗಿದೆ. ಈ ಚಂಡಮಾರುತ ಮೊದಲು ಚೆನ್ನೈ ನಗರಕ್ಕೆ, ಗಂಟೆಗೆ 100-120 ಕಿ.ಮೀ ವೇಗದಲ್ಲಿ ಅಪ್ಪಳಿಸಿದೆ. ಪರಿಣಾಮ ಚೆನ್ನೈನಲ್ಲಿ ಭಾರಿ ಮಳೆ ಸುರಿತಿದೆ.  ಇನ್ನು ಈ ಚಂಡಮಾರುತ ಮುಂದೆ ಸಾಗಿ, ಆಂಧ್ರಪ್ರದೇಶ ರಾಯಲಸೀಮ ಮತ್ತು ವಿಶಾಖಾಪಟ್ಟಣದ ವರೆಗೂ ಸಾಗಲಿದೆ. ಮುಂದೆ ಸಾಗಿದಂತೆ ಚಂಡಮಾರುತ ವೇಗದಲ್ಲಿ ಕಮ್ಮಿಯಾಗಲಿದೆ ಅಂತ ಹವಾಮಾನ ಇಲಾಖೆ ಹೇಳಿದೆ.ಹಾಗಾದ್ರೆ ಚೆನ್ನೈನಲ್ಲಿ ಮೈಚಾಂಗ್ ಸೃಷ್ಟಿಸಿದ ಜಲ ಪ್ರಳಯ. ಬಂಗಾಳಕೊಲ್ಲಿ ಮೈಚಾಂಗ್ ಅನ್ನೋ ಸೈಕ್ಲೋನ್ ಸೃಷ್ಟಿಯಾಗಿದ್ದು, ಚೆನ್ನೈ ನಗರದಲ್ಲಿ ದೊಡ್ಡ ಪ್ರಳಯವನ್ನೇ ಸೃಷ್ಟಿಸಿದೆ.

ಇದನ್ನೂ ವೀಕ್ಷಿಸಿ:  ಮಹಾಯುದ್ಧಕ್ಕೆ ಮೆಗಾ ತಾಲೀಮು..ಮೋದಿ ಹ್ಯಾಟ್ರಿಕ್ ಪಕ್ಕನಾ..? ಲೋಕಯುದ್ಧದ ಮೇಲೆ ಪಂಚ ಕುರುಕ್ಷೇತ್ರದ ಎಫೆಕ್ಟ್ ಏನು..?

Video Top Stories