Asianet Suvarna News Asianet Suvarna News

ಸುವರ್ಣ ಫೋಕಸ್: ಹಠವಾದಿ ಮೋದಿ..!

ಸ್ವಾತಂತ್ರ್ಯ ಬಂದ ಬಳಿಕ ದೇಶದಲ್ಲಿ ಆಗದೇ ಉಳಿದಿದ್ದ ಕೆಲಸಗಳನ್ನು ಮೋದಿ ಆಡಳಿತದಲ್ಲಿ ಬಹುತೇಕ ಕೆಲಸಗಳು ಕಂಪ್ಲೀಟ್ ಆಗಿವೆ. ಎಂತಹ ವಿರೋಧವನ್ನು ಲೆಕ್ಕಿಸದೇ ಒಂಟಿ ಸಲಗದಂತೆ ಮುನ್ನುಗ್ಗುವ ಮೋದಿ ದೇಶದ ಮಾತ್ರವಲ್ಲ ಜಗಮೆಚ್ಚಿದ ನಾಯಕನಾಗಿ ಗುರುತಿಸಿಕೊಂಡಿದ್ದಾರೆ.

First Published May 31, 2020, 5:42 PM IST | Last Updated May 31, 2020, 5:42 PM IST

ಬೆಂಗಳೂರು(ಮೇ.31): ಅಸಾಧ್ಯವಾದುದನ್ನೆಲ್ಲ ಸಾಧ್ಯವನ್ನಾಗಿ ಮಾಡಿ ತೋರಿಸಿದ್ದಾರೆ ಪ್ರಧಾನಿ ಮೋದಿ. ನರೇಂದ್ರ ದಾಮೋದರ್ ದಾಸ್ ಮೋದಿ ಎರಡನೇ ಬಾರಿಗೆ ಪ್ರಧಾನಿಯಾಗಿ ಒಂದು ವರ್ಷ ಭರ್ತಿಯಾಗಿದೆ. ಅಂದಿನಿಂದ ಇಂದಿನವರೆಗೆ ಮೋದಿ ನೀಡಿದ ಆಡಳಿತ ಕಂಡು ದೇಶದ ಜನ ಫಿದಾ ಆಗಿ ಹೋಗಿದ್ದಾರೆ. ಇದನ್ನು ನಾವು ಹೇಳ್ತಾ ಇಲ್ಲ, ಬದಲಾಗಿ ಇತ್ತೀಚೆಗೆ ನಡೆದ ಸಮೀಕ್ಷೆಗಳು ಈ ವಿಚಾರವನ್ನು ಸಾಕ್ಷೀಕರಿಸಿವೆ.

ಸ್ವಾತಂತ್ರ್ಯ ಬಂದ ಬಳಿಕ ದೇಶದಲ್ಲಿ ಆಗದೇ ಉಳಿದಿದ್ದ ಕೆಲಸಗಳನ್ನು ಮೋದಿ ಆಡಳಿತದಲ್ಲಿ ಬಹುತೇಕ ಕೆಲಸಗಳು ಕಂಪ್ಲೀಟ್ ಆಗಿವೆ. ಎಂತಹ ವಿರೋಧವನ್ನು ಲೆಕ್ಕಿಸದೇ ಒಂಟಿ ಸಲಗದಂತೆ ಮುನ್ನುಗ್ಗುವ ಮೋದಿ ದೇಶದ ಮಾತ್ರವಲ್ಲ ಜಗಮೆಚ್ಚಿದ ನಾಯಕನಾಗಿ ಗುರುತಿಸಿಕೊಂಡಿದ್ದಾರೆ.

ಶಿವಮೊಗ್ಗದಲ್ಲಿ ಮರಿ ಹುಲಿ S/O ರಾಜಾಹುಲಿ..!

ಕಳೆದ 12  ತಿಂಗಳಲ್ಲಿ ಮೋದಿ 12 ಸಾಧನೆ ಮಾಡಿದ್ದಾರೆ. ಎಂತಹ ಕಠಿಣ ಕೆಲಸವೇ ಆದರೂ ಮೋದಿ ಒಮ್ಮೆ ಹಠ ತೊಟ್ಟರೆಂದರೆ ಮುಗಿಯಿತು, ಆ ಕೆಲಸವನ್ನು ಮಾಡಿಯೇ ವಿಶ್ರಮಿಸುತ್ತಾರೆ. ಈ ಕುರಿತಾದ ಒಂದು ವಿಶೇಷ ವರದಿ ಸುವರ್ಣ ಫೋಕಸ್‌ನಲ್ಲಿ.

Video Top Stories