Asianet Suvarna News Asianet Suvarna News

ಶಿವಮೊಗ್ಗದಲ್ಲಿ ಮರಿ ಹುಲಿ S/O ರಾಜಾಹುಲಿ..!

ಶಿವಮೊಗ್ಗ ಕ್ಷೇತ್ರದ ಜನತೆಯ ಪಾಲಿಗೆ ಅಭಿವೃದ್ದಿಯ ಹರಿಕಾರ. ಮಲೆನಾಡಿನ ಜನರ ಮನೆಮಗನಾಗಿ ಬಿ.ವೈ. ರಾಘವೇಂದ್ರ ಗುರುತಿಸಿಕೊಂಡಿದ್ದಾರೆ. ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಫುಡ್‌ಕಿಟ್ ಹಂಚಿ ಬಡವರ ನೆರವಿಗೆ ನಿಂತಿದ್ದಾರೆ ರಾಘಣ್ಣ. 

First Published May 31, 2020, 5:28 PM IST | Last Updated May 31, 2020, 5:28 PM IST

ಶಿವಮೊಗ್ಗ(ಮೇ.31): ಪ್ರಧಾನಿ ಮೋದಿ, ಶಾ ಮೆಚ್ಚಿದ ನೀಲಿಗಣ್ಣಿನ ಹುಡುಗ. ಸಂಸದ ಬಿ.ವೈ. ರಾಘವೇಂದ್ರ ರಾಜ್ಯ ರಾಜಕಾರಣದ ಪವರ್‌ಫುಲ್ ಲೀಡರ್. ಬಿಜೆಪಿ ಮುಖಂಡರ ಪಾಲಿನ ಅಚ್ಚುಮೆಚ್ಚಿನ ಹುಡುಗ. 

ಶಿವಮೊಗ್ಗ ಕ್ಷೇತ್ರದ ಜನತೆಯ ಪಾಲಿಗೆ ಅಭಿವೃದ್ದಿಯ ಹರಿಕಾರ. ಮಲೆನಾಡಿನ ಜನರ ಮನೆಮಗನಾಗಿ ಬಿ.ವೈ. ರಾಘವೇಂದ್ರ ಗುರುತಿಸಿಕೊಂಡಿದ್ದಾರೆ. ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಫುಡ್‌ಕಿಟ್ ಹಂಚಿ ಬಡವರ ನೆರವಿಗೆ ನಿಂತಿದ್ದಾರೆ ರಾಘಣ್ಣ.

ಕೊರೋನಾ ಮಧ್ಯೆ ಆಪರೇಷನ್ ಕಮಲ: ಬಿಜೆಪಿ ಸೇರಿದ ಕಾಂಗ್ರೆಸ್ ನಾಯಕ

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಪ್ರವಾಸಿಗರ ಪಾಲಿಗೆ ಅಚ್ಚುಮೆಚ್ಚಿನ ಕೇಂದ್ರ. ಶಿವಮೊಗ್ಗಕ್ಕೆ ತನ್ನದೇ ಆದ ಐತಿಹಾಸಿಕ, ಹೋರಾಟದ ಹಿನ್ನಲೆಯಿದೆ. ಇನ್ನು ರಾಜ್ಯ ರಾಜಕೀಯದಲ್ಲೂ ತನ್ನದೇ ಆದ ಛಾಪು ಮೂಡಿಸಿದೆ. ಇನ್ನು ಮುಖ್ಯಮಂತ್ರಿ ಯಡಿಯೂರಪ್ಪನವರ ಮಗ ಬಿ.ವೈ. ರಾಘವೇಂದ್ರ ಸಂಸದನಾಗಿ ಇಡೀ ಜಿಲ್ಲೆಯನ್ನು ಹೇಗೆ ಮಾದರಿ ಜಿಲ್ಲೆಯನ್ನಾಗಿಸಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಈ ಕುರಿತಾದ ಒಂದು ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ.