
Suvarna Focus: ಪುಣ್ಯ ಯಾತ್ರೆಯ ಹೊತ್ತಲ್ಲೇ ಇದೆಂಥಾ ಅನಾಹುತ! ಗೌರಿಕುಂಡದ ದಾರಿಯಲ್ಲೇ ಕಾದಿದೆ ಗಂಡಾಂತರ!
ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ ಮತ್ತು ಭೂಕುಸಿತದಿಂದಾಗಿ ಭಾರೀ ವಿನಾಶ ಸಂಭವಿಸಿದೆ. ಜಲಪ್ರಳಯದಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ನೂರಾರು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಧರ್ಮಶಾಲಾ ಮತ್ತು ಕಾಂಗ್ರಾ ಜಿಲ್ಲೆಗಳಲ್ಲಿ ಹಾನಿ ಹೆಚ್ಚಾಗಿದೆ.
ಬೆಂಗಳೂರು (ಜೂ.27): ಅದೇಕೋ ಏನೋ.. ಜಗತ್ತಲ್ಲಿ ಬರೀ ದುರಂತಗಳೇ ನಡೀತಿವೆ. ಕೆಲವೊಂದನ್ನ ಮನುಷ್ಯ ತಾನೇ ತಾನಾಗಿ ಮಾಡಿಕೊಂಡರೆ, ಇನ್ನೊಂದಷ್ಟು ಅನಾಹುತಗಳನ್ನ ಪ್ರಕೃತಿಯೇ ಆಕ್ರೋಶ ಹೊತ್ತು ನಡೆಸುತ್ತಿದೆ.
ಅದಕ್ಕೆ ಉದಾಹರಣೆಯಾಗಿರೋದು, ಹಿಮಾಚಲದ ಮೇಘಸ್ಫೋಟ. ದೇಶದಾದ್ಯಂತ ಭಯಭೀತ ವಾತಾವರಣ ಸೃಷ್ಟಿಸಿರೋ ವರುಣಾರ್ಭಟ. ಜಲಪ್ರವಾಹದ ಅಬ್ಬರಕ್ಕೆ ಜನರ ಪರಿಸ್ಥಿತಿ ರಣಘೋರವಾಗಿದೆ. ನೂರಾರು ಜನರ ಪ್ರಾಣಕ್ಕೇ ಕರಾಳ ರಾತ್ರಿ ಕುತ್ತು ತಂದಿದೆ.
26ರ ತುಂಟನಿಗೆ ಎಲ್ಲರ ಮುಂದೆಯೇ ಕಿಸ್ ಕೇಳಿದ 36ರ ಆಂಟಿ; ಮುಂದಾಗಿದ್ದು ಘನಘೋರ!
ಧರ್ಮಶಾಲಾದಲ್ಲಿ ಯಮ ಪ್ರವಾಹ ಆಗುತ್ತಿದ್ದು, ಮಳೆ ಪ್ರಳಯವಾಗಿದೆ. ಭೂ ಕುಸಿತ ಭೀತಿಯಲ್ಲಿ ಸಾವಿರಾರು ಜನರಿದ್ದು, ಕಂಗ್ರಾದಲ್ಲಿ ಕಾರ್ಮಿಕರ ಮೇಲೆ ದುರ್ವಿಧಿಯ ದರ್ಪ ಮೆರೆದಿದೆ. ಸೇತುವೆಗಳು ಕೊಚ್ಚಿ ಹೋಗುತ್ತಿದ್ದರೆ, ರಸ್ತೆಗಳು ಮುಚ್ಚಿಹೋಗುತ್ತಿವೆ. ಇದ್ದಕ್ಕಿದ್ದಂತೆಯೇ ಉರುಳುತ್ತಿವೆ ದೈತ್ಯ ಬಂಡೆಗಳು ಜಾರಿ ಬೀಳುತ್ತಿವೆ.