Asianet Suvarna News Asianet Suvarna News

ಕೊರೋನಾ ಸೋಂಕಿಗೆ ಕಡಿವಾಣ ಬಿದ್ದರೂ ಸಾವಿನ ಸಂಖ್ಯೆ ತಗ್ಗುತ್ತಿಲ್ಲ, ಹೆಚ್ಚಾದ ಆತಂಕ!

May 25, 2021, 5:17 PM IST

ಬೆಂಗಳೂರು(ಮೇ.25): ದೇಶದಲ್ಲಿ ಎದ್ದಿದ್ದ ಕೊರೋನಾ ಸೋಂಕಿಗೆ ಹಾಗೋ ಹೀಗೋ ಕಡಿವಾಣ ಬಿದ್ದಿದೆ. ಆದ್ರೆ ಸಾವಿನ ರಣಕೇಕೆ ಮಾತ್ರ ನಿಂತೇ ಇಲ್ಲ. ಒಂದೇ ದಿನ ನಾಲ್ಕೂವರೆ ಸಾವಿರ ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಕೊರೋನಾ ಬರೆದಿದೆ ಮರಣ ಶಾಸನ.

ಕೊರೋನಾ ಬೆನ್ನಲ್ಲೇ ಹೆಚ್ಚುತ್ತಿದೆ ಬ್ಲ್ಯಾಕ್‌ ಫಂಗಸ್‌ ಸೋಂಕಿತರ ಸಾವು!

ಇನ್ನು ಭಾರೀ ಸಾವು, ನೋವು ಉಂಟು ಮಾಡಿರುವ ಈ ಕೊರೋನಾಗೆ ಫಂಗಸ್‌ಗಳೂ ಸಾತ್ ನೀಡಿವೆ. ಈ ಚೀನಾ ವೈರಸ್‌, ಫಂಗಸ್‌ಗಳ ಹಾವಳಿ ಹಲವಾರು ಜೀವಗಳನ್ನು ಬಲಿ ಪಡೆಯುತ್ತಿದ್ದು, ಈ ಮರಣ ಮೃದಂಗ ಯಾವಾಗ ನಿಲ್ಲಿಸುತ್ತದೆ ಎಂದು ಜನರು ಕಾಯುತ್ತಿದ್ದಾರೆ.