ಓದಿದ್ದು SSLC..ಗಳಿಸಿದ್ದು ಕೋಟಿ ಕೋಟಿ..! ಮೋಸಗಾರ ಸುಕೇಶ್ ತಗಲಾಕಿಕೊಂಡಿದ್ದು ಹೇಗೆ..?

12 ಸುಂದರಿಯರ ಡ್ರೀಮ್ ಬಾಯ್ ಸುಖಪುರುಷ ಸುಕೇಶ್..!
ಸುಳ್ಳಿಯ ಕೋಟೆಗೆ 12 ಚೆಲುವೆಯರನ್ನ ರಾಣಿಯಾಗಿ ಮಾಡಿದ್ದ!
200 ಕೋಟಿ ವಂಚನೆ ಪ್ರಕರಣದಲ್ಲಿ ಜೈಲು ಸೇರಿದ್ದ ಸುಖೇಶ್..!

Share this Video
  • FB
  • Linkdin
  • Whatsapp

ಸೊಂಟ ಕುಳುಕೋ ಜಾಕ್ಲಿನ್ ಫರ್ನಾಂಡಿಸ್. ಇವಳ ಮೈಮಾಟಕ್ಕೆ ಪಡ್ಡೆ ಹುಡುಗರೆಲ್ಲ ತಲೆ ಕೆಡಿಸಿಕೊಂಡಿದ್ರು. ನಟನೆಯಿಂದ ಫೇಮಸ್ ಆಗಿದ್ದ ಈ ಬಾಲಿವುಡ್ ಚೆಂದುಳ್ಳಿ ಚೆಲುವೆ, ಅದೊಬ್ಬನ ಪ್ರೀತಿಯ ಬಲೆಗೆ ಬಿದ್ದಿದ್ದಳು. ಅವನೇ ಮಿಸ್ಟರ್ ಹ್ಯಾಂಡಸಮ್ ಸುಕೇಶ್(Sukhesh Chandrasekhar). ಜೈಲಿನಲ್ಲಿದ್ದುಕೊಂಡೇ ನಟಿ ಜಾಕ್ವೆಲಿನ್ ಫರ್ನಾಂಡಿಸ್‌ ಗೆ(Jacqueline Fernandez) ಪ್ರೇಮ ಪತ್ರ(Letter) ಬರೆಯುವ ಮೂಲಕ ಸುದ್ದಿಯಾಗಿದ್ದ. ನಿನಗಾಗಿ ನಾನು ಎಂತಹ ರಿಸ್ಕ್ ತಗೆದುಕೊಳ್ಳಲೂ ರೆಡಿ ಇರುವುದಾಗಿ ತಿಳಿಸಿದ್ದ. ಈ ಪತ್ರವನ್ನು ಜಾಕ್ವೆಲಿನ್ ಯಾವ ರೀತಿಯಲ್ಲಿ ಸ್ವೀಕರಿಸುತ್ತಾರೋ ಗೊತ್ತಿಲ್ಲ. ಆದರೆ ಪತ್ರವನ್ನಂತೂ ಬರೆದು, ಜಾಕ್ವೆಲಿನ್ ಗೆ ಪೋಸ್ಟ್ ಮಾಡಿದ್ದ. ಬರೊಬ್ಬರಿ 12 ಬಾಲಿವುಡ್ ಸುಂದರಿಯರು ಈ ಸುಳ್ಳಗಾರ ಸುಖೇಶ್ ಬೀಸಿದ ಬಲೆಗೆ ಬಿದ್ದಿದ್ದರು. ಈತ ದೊಡ್ಡ ದೊಡ್ಡ ಉದ್ಯಮಿಗಳು, ರಾಜಕಾರಣಿಗಳಿಗೆ ಪಂಗನಾಮ ಹಾಕಿ, ಅವರಿಂದ ಕೋಟಿ ಕೋಟಿ ದುಡ್ಡು ಲಪಟಾಯಿಸಿ, ಸುರಸುಂದರಿಯರಿಗೆ ಕೋಟಿ ಕೋಟಿ ಬೆಲೆಬಾಳುವ ಗಿಫ್ಟ್‌ಗಳನ್ನ ಕೊಟ್ಟು ಕಾರುಬಾರು ಮಾಡ್ತಿದ್ದ ಈ ಸುಖೇಶ್ ಚಂದ್ರಶೇಖರ್. ಹೀಗೆ ಬೇರೆಯವರಿಗೆ ಮೋಸ ಮಾಡಿ, ತಾನು ಮಾತ್ರ ಕೋಟಿ ಕೋಟಿ ಬಂಗಲೆ, ಕೋಟಿ ಕೋಟಿ ಬೆಲೆಬಾಳೋ ಕಾರ್,ಮನೆ, ಮೊಬೈಲ್ ಹಿಡಿದು ಕಾರುಬಾರು ಮಾಡ್ತಿದ್ದ ಈ ಸುಖೇಶ್‌ಗೆ ಐಟಿ ಅಧಿಕಾರಿಗಳು(IT officials) ಶಾಕ್ ಕೊಟ್ಟಿದ್ದರು. ಈತನ ಕೋಟಿ ಕೋಟಿ ಕನಸುಗಳನ್ನ ಬೀದಿಗೆ ತಂದು ಹರಾಜಿಗಿಟ್ಟಿದ್ರು. 200 ಕೋಟಿ ರೂಪಾಯಿ ಸುಲಿಗೆ ಪ್ರಕರಣದಲ್ಲಿ ಜೈಲು(Jail) ಸೇರಿರುವ ಬೆಂಗಳೂರು ಮೂಲದ ಸುಕೇಶ್ ಚಂದ್ರಶೇಖರ್ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ. ಇದೀಗ ವಶಕ್ಕೆ ಪಡೆದಿರುವ ಐಷಾರಾಮಿ ಕಾರುಗಳನ್ನು ಹರಾಜು ಹಾಕಲಾಗುತ್ತಿದೆ. ರೋಲ್ಸ್ ರಾಯ್ಸ್, ಮರ್ಸಿಡಿಸ್ ಬೆಂಜ್, ಬ್ಯಾಂಬೋರ್ಗಿನಿ ಸೇರಿದಂತೆ ಕೋಟಿ ಕೋಟಿ ರೂಪಾಯಿ ಕಾರುಗಳು ಇದೀಗ 2.03 ಲಕ್ಷ ರೂ ಬೆಲೆಯಿಂದ ಖರೀದಿಗೆ ಲಭ್ಯವಿದೆ ಅಂತ ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ: ಪಾಕ್ ಆರ್ಮಿ ಟೆರರಿಸ್ಟ್‌ಗಳಿಗೆ ಭಾರತವೇ ಟಾರ್ಗೆಟ್..! ಮಾಜಿ ಸೈನಿಕರನ್ನು ಛೂ ಬಿಡುತ್ತಿರುವ ಪಾಕ್ ಆರ್ಮಿ

Related Video