508 ದಿನಗಳಲ್ಲಿ ನನಸಾಗಲಿದೆ ಮೂರು ದಶಕದ ಕನಸು!
ಇನ್ನು 508 ದಿನಗಳಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣವಾಗಲಿದೆ. ಮೂಲಗಳ ಪ್ರಕಾರ, 2024ರ ಜನವರಿ 14 ರಂದು ಈಗಾಗಲೇ ಮಹೂರ್ತವನ್ನು ನಿಗದಿ ಮಾಡಲಾಗಿದ್ದು, ಅದೇ ದಿನ ಶ್ರೀರಾಮನ ಮೂರ್ತಿಯನ್ನು ರಾಮ ಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಅದರೊಂದಿಗೆ ಮೂರು ದಶಕಗಳ ಕನಸು ನನಸಾಗಲಿದೆ.
ಬೆಂಗಳೂರು (ಆ.24): ಹಿಂದುಗಳ ಮೂರು ದಶಕಗಳ ಹೋರಾಟದ ಫಲ ಸಿಗುವ ದಿನಗಳು ಹತ್ತಿರವಾಗಿದೆ. ಅಯೋಧ್ಯೆಯಲ್ಲಿ ಈಗಾಗಲೇ ರಾಮ ಮಂದಿರ ನಿರ್ಮಾಣದ ಕಾಮಗಾರಿ ಅರಂಭವಾಗಿದೆ. ಈಗಿರುವ ಮಾಹಿತಿಗಳ ಪ್ರಕಾರ, 2024ರ ಜನವರಿ 14 ರಂದು ರಾಮಲಲ್ಲನ ವಿಗ್ರಹ ಅಯೋಧ್ಯೆಯ ಹೊಸ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲಿದೆ. ಅದರೊಂದಿಗೆ ಇನ್ನು 508 ದಿನಗಳಲ್ಲಿ ಮೂರು ದಶಕಗಳ ಕನಸು ನನಸಾಗಲಿದೆ.
ರಾಮಮಂದಿರ ನಿರ್ಮಾಣ ಕಾರ್ಯ ಇನ್ನೆರಡು ವರ್ಷಗಳೊಳಗೇ ಮುಗಿದು ಹೋಗುತ್ತೆ.. ಇನ್ನೊಂದ್ ಕಡೆ, ರಾಷ್ಟ್ರ ರಾಜಕೀಯದ ಮಹತ್ತರ ಘಟ್ಟ ಅನ್ನಿಸಿಕೊಂಡಿರೋ ಲೋಕಸಭಾ ಚುನಾವಣೆಗೂ 2 ವರ್ಷ ಬಾಕಿ ಇದೆ. ಇನ್ನು 500 ದಿನಗಳಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತೆ ಆದರೆ, ಇದಾದ ಬಳಿಕ ದೇಶದ ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದ ಪರಿಣಾಮಗಳು ಆಗುತ್ತವೆ.
ರಾಮಮಂದಿರಕ್ಕೆ ಶಿಲಾನ್ಯಾಸ ಮಾಡಿದ ದಿನದಂದೇ ಕಾಂಗ್ರೆಸ್ ಕಪ್ಪುಬಟ್ಟೆ ಧರಿಸಿದ್ದೇಕೆ?
ಮಂದಿರ ನಿರ್ಮಾಣ ಆದ ಮೇಲೆ ಖಂಡಿತವಾಗಿ ಹೊಸ ರಾಜಕೀಯ ಪರ್ವ ಆರಂಭವಾಗಲಿದೆ. ರಾಮನ ರಹಸ್ಯದಲ್ಲಿ ಕಮಲ ಪಾಳಯ ರಾಜಕೀಯ ಲೆಕ್ಕಾಚಾರ ಹಾಕಿಕೊಂಡಿದೆ. ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಶ್ರಮ ವಹಿಸಿದ ಕಾರಣಕ್ಕೆ ಪ್ರಭು ಶ್ರೀರಾಮ ವರ ನೀಡ್ತಾನೆ ಅನ್ನೋ ನಂಬಿಕೆಯಲ್ಲಿ ಬಿಜೆಪಿ ಪಕ್ಷವಿದೆ.