Sonia Gandhi : "ಲೋಕ" ದಾರಿ ಬಿಟ್ಟು ರಾಜ್ಯಸಭಾ ವ್ಯೂಹ ಹೆಣೆದದ್ದೇಕೆ 'ಕೈ' ರಾಜಮಾತೆ..?

ಕಣ್ಣೆದುರಲ್ಲೇ ಅತ್ತೆ..ಗಂಡನ ಹತ್ಯೆ..ರಾಜಕೀಯದ ಪಗಡೆಯಾಟ..!
ಕೈಗೆ ಬಂದಿದ್ದ ಪ್ರಧಾನಿ ಪಟ್ಟವನ್ನೇ ಬೇಡ ಅಂದಿದ್ದರು ಸೋನಿಯಾ..!
ಬೆರಗು ಹುಟ್ಟಿಸುತ್ತದೆ ಕಾಂಗ್ರೆಸ್ ರಾಜಮಾತೆಯ ರಾಜಕೀಯ ಚರಿತ್ರೆ..!
ದುರ್ಗಿಯಂಥಾ ಅತ್ತೆ, ಪತಿಯ ಹತ್ಯೆ ನಂತರ ರಾಜಕೀಯಕ್ಕೆ ಎಂಟ್ರಿ..!

First Published Feb 15, 2024, 6:27 PM IST | Last Updated Feb 15, 2024, 6:27 PM IST

ಲೋಕಸಭೆಗೆ ಗುಡ್ ಬೈ ಹೇಳಿದ್ರು ಕಾಂಗ್ರೆಸ್ ರಾಜಮಾತೆ. ರಾಜ್ಯಸಭೆಗೆ(Rajya Sabha) ಎಂಟ್ರಿ ಕೊಡಲಿದ್ದಾರೆ ಕಾಂಗ್ರೆಸ್(Congress) ಅಧಿನಾಯಕಿ. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಸೊಸೆ, ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಪತ್ನಿ. ಹುಟ್ಟೂರಲ್ಲದ ದೇಶವೊಂದಕ್ಕೆ ಸೊಸೆಯಾಗಿ ಬಂದು ಜನಬೆಂಬಲದೊಂದಿಗೆ ಭಾರತದ ಬಲಿಷ್ಠ ರಾಜಕೀಯ ನಾಯಕಿಯ ಸ್ಥಾನವನ್ನು ಆಕ್ರಮಿಸಿಕೊಂಡ ಛಲಗಾರ್ತಿ. ದೇಶದ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ್ದ ಸೋನಿಯಾ ಗಾಂಧಿಯವರ ರಾಜಕೀಯ ಚರಿತ್ರೆಗೆ ರೋಚಕ ತಿರುವು ಸಿಕ್ಕಿದೆ. ಇಲ್ಲಿವರೆಗೆ ಸತತ ಆರು ಬಾರಿ ಲೋಕಸಭಾ (Loksabha)ಸದಸ್ಯೆಯಾಗಿದ್ದ ಸೋನಿಯಾ ಗಾಂಧಿ(Sonia Gandhi), ಇದೀಗ ಲೋಕಸಭೆಗೆ ಗುಡ್ ಬೈ ಹೇಳಿ, ರಾಜ್ಯಸಭೆ ಪ್ರವೇಶಕ್ಕೆ ಸಜ್ಜಾಗಿದ್ದಾರೆ. ರಾಜಸ್ಥಾನದಿಂದ ರಾಜ್ಯಸಭೆ ಪ್ರವೇಶಿಸಲು ಮುಂದಾಗಿರುವ ಕಾಂಗ್ರೆಸ್ ರಾಜಮಾತೆ, ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ. ಏಳು ವರ್ಷಗಳ ಹಿಂದೆ ಕೇರಳದಲ್ಲಿ ನಡೆದ ಕಾಂಗ್ರೆಸ್ ಸಮಾವೇಶವೊಂದರಲ್ಲಿ ಸೋನಿಯಾ ಗಾಂಧಿ ಈ ರೀತಿ ಭಾವುಕರಾಗಿ ಮಾತನಾಡಿದ್ರು. ಇಟಲಿಯ ವೆನೆಟೋದ ಲೂಸಿಯಾನ ಎಂಬಲ್ಲಿ ಹುಟ್ಟಿದ್ದ ಸೋನಿಯಾ ಮೈನೋ, ಸೋನಿಯಾ ಗಾಂಧಿಯಾಗಿದ್ದೇ ಒಂದು ರೋಚಕ ಕಥೆ. ಪ್ರಿಯ ವೀಕ್ಷಕರೇ.. ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿರೋ ಭಾರತದಲ್ಲಿ, ಭಾರತದ ರಾಜಕಾರಣದಲ್ಲಿ ವಿದೇಶದಿಂದ ಬಂದ ಒಬ್ಬ ಮಹಿಳೆ ಛಾಪು ಮೂಡಿಸೋದಿದ್ಯಲ್ಲಾ... ಅದು ನಿಜಕ್ಕೂ ಬೆರಗು ಹುಟ್ಟಿಸುವಂಥಾ ಕಥೆ. ಅಂಥಾ ಕುತೂಹಲದ ಕಥೆಯ ಕಥಾನಾಯಕಿ ಸೋನಿಯಾ ಗಾಂಧಿ.

ಇದನ್ನೂ ವೀಕ್ಷಿಸಿ:  Raichur: ರಾಯಚೂರಿನಲ್ಲಿ ಮುಸ್ಲಿಮರ ನಡುವೆ ಮಾರಾಮಾರಿ: ಅಹಮದೀಯ ಮುಸ್ಲಿಮರ ಮೇಲೆ ಕಟ್ಟಾ ಮುಸ್ಲಿಮರಿಂದ ಹಲ್ಲೆ

Video Top Stories