Raichur: ರಾಯಚೂರಿನಲ್ಲಿ ಮುಸ್ಲಿಮರ ನಡುವೆ ಮಾರಾಮಾರಿ: ಅಹಮದೀಯ ಮುಸ್ಲಿಮರ ಮೇಲೆ ಕಟ್ಟಾ ಮುಸ್ಲಿಮರಿಂದ ಹಲ್ಲೆ

ಎರಡು ಮುಸ್ಲಿಂ ಗುಂಪುಗಳ ನಡುವೆ ಕಿತ್ತಾಟ
ಮುಸ್ಲಿಂ ಧರ್ಮ ಪ್ರಚಾರದ ವಿಚಾರಕ್ಕೆ ಗಲಾಟೆ
ಮೂವರು ಕಾರ್ಯಕರ್ತರ ವಿರುದ್ಧ ಎಫ್‌ಐಆರ್‌

First Published Feb 15, 2024, 5:49 PM IST | Last Updated Feb 15, 2024, 5:49 PM IST

ರಾಯಚೂರು: ಮುಸ್ಲಿಂ ಧರ್ಮ(Muslim Religion) ಪ್ರಚಾರದ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ(Fight)ನಡೆದಿರುವ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ದೇವತಗಲ್‌ ಗ್ರಾಮದಲ್ಲಿ ನಡೆದಿದೆ. ಇಲ್ಲಿ ಅಹಮದೀಯ ಮುಸ್ಲಿಂ ತತ್ವ ಪ್ರಚಾರಕ್ಕೆ ವಿರೋಧ ವ್ಯಕ್ತಪಡಿಸಲಾಗಿದೆ. ಕಟ್ಟಾ ಮುಸ್ಲಿಂ ಸಮುದಾಯದ ಮುಖಂಡರಿಂದ ವಿರೋಧ ಕೇಳಿಬಂದಿದೆ. ಅಲ್ಲದೇ ಅಹಮದೀಯ ಮುಸ್ಲಿಂರನ್ನ ಮನಬಂದಂತೆ ಕಟ್ಟಾ ಮುಸ್ಲಿಮರು ಥಳಿಸಿದ್ದಾರೆ.  ಸದ್ಯ ಗಲಾಟೆ ಮಾಡಿದ ಕಟ್ಟಾ ಮುಸ್ಲಿಮರ(Muslims) ವಿರುದ್ಧ ದೂರು ನೀಡಲಾಗಿದೆ. ಅಹಮದೀಯ ಮುಸ್ಲಿಂರಿಂದ ದೇವದುರ್ಗ ಪೊಲೀಸರಿಗೆ(Police) ದೂರು ನೀಡಲಾಗಿದ್ದು, ಹಲ್ಲೆಗೆ ಒಳಗಾದ ಖಾಜಿ ಮಹಮ್ಮದ್ ರಫಿ ಎಂಬುವರಿಂದ ದೂರು ನೀಡಲಾಗಿದೆ. ದೇವದುರ್ಗ ಪೊಲೀಸ್ ಠಾಣೆಯಲ್ಲಿ ನಾಲ್ಕು ಜನರ ವಿರುದ್ಧ ದೂರು ದಾಖಲಾಗಿದೆ.

ಇದನ್ನೂ ವೀಕ್ಷಿಸಿ: Foeticide case: ಸರ್ಕಾರಿ ಆಸ್ಪತ್ರೆ ನರ್ಸ್‌ಗಳಿಂದಲೇ ಅಬಾರ್ಷನ್‌ ದಂಧೆ! ಮದುವೆ ಆಗಲಿ..ಆಗದಿರಲಿ ಗರ್ಭಪಾತ ಪಕ್ಕಾ !