ಮೋದಿ ಕ್ಯಾಬಿನೆಟ್‌ಗೆ ಅಚ್ಚರಿಯ ಹೆಸರು: ಶೋಭಾ ಕರಂದ್ಲಾಜೆಗೆ ಸಚಿವ ಸ್ಥಾನ?

ಸದ್ಯ ಇಡೀ ದೇಶದ ಚಿತ್ತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂಪುಟದಲ್ಲಿ ಯಾರಿಗೆ ಸ್ಥಾನ ಸಿಗುತ್ತದೆ ಎಂಬ ವಿಚಾರದ ಮೇಲಿದೆ. ಇದೇ ಸಂದರ್ಭದಲ್ಲಿ ಕರ್ನಾಟಕದ ಯಾವ ಸಂಸದರಿಗೆ ಸಚಿವರಾಗೋ ಭಾಗ್ಯ ಸಿಗುತ್ತದೆ ಎಂಬ ವಿಚಾರವೂ ಕನ್ನಡಿಗರ ಕುತೂಹಲಕ್ಕೆ ಕಾರಣವಾಗಿದೆ. ಈ ಎಲ್ಲಾ ವಿಚಾರಗಳ ನಡುವೆ ಸದ್ಯ ಶೋಭಾ ಕರಂದ್ಲಾಜೆ ಹೆಸರು ಸಚಿವ ಸ್ಥಾನಕ್ಕೆ ಅಂತಿಮವಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ

Share this Video
  • FB
  • Linkdin
  • Whatsapp

ನವದೆಹಲಿ(ಜು.07): ಸದ್ಯ ಇಡೀ ದೇಶದ ಚಿತ್ತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂಪುಟದಲ್ಲಿ ಯಾರಿಗೆ ಸ್ಥಾನ ಸಿಗುತ್ತದೆ ಎಂಬ ವಿಚಾರದ ಮೇಲಿದೆ. ಇದೇ ಸಂದರ್ಭದಲ್ಲಿ ಕರ್ನಾಟಕದ ಯಾವ ಸಂಸದರಿಗೆ ಸಚಿವರಾಗೋ ಭಾಗ್ಯ ಸಿಗುತ್ತದೆ ಎಂಬ ವಿಚಾರವೂ ಕನ್ನಡಿಗರ ಕುತೂಹಲಕ್ಕೆ ಕಾರಣವಾಗಿದೆ. ಈ ಎಲ್ಲಾ ವಿಚಾರಗಳ ನಡುವೆ ಸದ್ಯ ಶೋಭಾ ಕರಂದ್ಲಾಜೆ ಹೆಸರು ಸಚಿವ ಸ್ಥಾನಕ್ಕೆ ಅಂತಿಮವಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ. 

ಮೋದಿ ಸಂಪುಟಕ್ಕೆ ಕರ್ನಾಟಕದ ಸಂಸದರು?: ಇಲ್ಲಿದೆ ಸಂಭಾವ್ಯ ಸಚಿವರ ಪಟ್ಟಿ!

ಹೌದು ಕರಾವಳಿ ಭಾಗ ಮತ್ತು ಒಕ್ಕಲಿಗ ಸಮೂದಾಯಕ್ಕೆ ಪ್ರಾತಿನಿಧ್ಯ ನೀಡಿದ ಕೇಂದ್ರ ನಾಯಕತ್ವ ಸದಾನಂದಗೌಡ ಅವರಿಗೆ ಪರ್ಯಾಯವಾಗಿ ಶೋಭಾ ಕರಂದ್ಲಾಜೆಗೆ ಅವಕಾಶ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಕರಾವಳಿ ಮತ್ತು ಒಕ್ಕಲಿಗ ಕೋಟಾದಡಿ ಶೋಭಾ ಹೆಸರು ಅಂತಿಮವಾಗಿದ್ದು, ಸಂಘಟನೆಯಲ್ಲೂ ಅವರಿಗೆ ಒಳ್ಳೆಯ ಹೆಸರು ಇದೆ. ಹೀಗಿರುವಾಗ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ನಡುವೆ ಉತ್ತಮ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುವ ಚಾಕಚಕ್ಯತೆಯೂ ಅವರಲ್ಲಿದೆ.

ಸಂಪುಟ ವಿಸ್ತರಣೆಗೆ ಶುಭ ಮುಹೂರ್ತ ಫಿಕ್ಸ್; ಸಂಜೆ 6 ಗಂಟೆಗೆ ಅತ್ಯಂತ ಕಿರಿಯರ ಕ್ಯಾಬಿನೆಟ್ ಪ್ರಕಟ!

ಇವೆಲ್ಲಕ್ಕಿಂತಲೂ ಮಿಗಿಲಾಗಿ ಜಾತಿ ಸಮೀಕರಣದಲ್ಲೂ ಶೋಭಾ ಆಯ್ಕೆ ಉತ್ತಮ ಫಲಿತಾಂಶ ನೀಡುವ ನಿರೀಕ್ಷೆ ಇದೆ ಎನ್ನಲಾಗಿದೆ. ಈಗಾಗಲೇ ಶೋಭಾ ಕರೆಂದ್ಲಾಜೆಯೂ ದೆಹಲಿ ಸೇರಿದ್ದಾರೆ.

Related Video