Asianet Suvarna News Asianet Suvarna News

ಸಂಪುಟ ವಿಸ್ತರಣೆಗೆ ಶುಭ ಮುಹೂರ್ತ ಫಿಕ್ಸ್; ನಾಳೆ ಸಂಜೆ 6 ಗಂಟೆಗೆ ಅತ್ಯಂತ ಕಿರಿಯರ ಕ್ಯಾಬಿನೆಟ್ ಪ್ರಕಟ!

  • ದೇಶದಲ್ಲೇ ಮೊದಲ ಬಾರಿಗೆ ಅತ್ಯಂತ ಕಿರಿಯರ ಸಂಪುಟ ಹೆಗ್ಗಳಿಕೆ
  • ಸಂಪುಟ ವಿಸ್ತರಣೆ, ಪುನರ್ ರಚನಗೆ ಮುಹೂರ್ತ ಫಿಕ್ಸ್
  • ನಾಳೆ ಸಂಜೆ 6 ಗಂಟೆಗೆ ಮೋದಿ ಸಂಪುಟ ವಿಸ್ತರಣೆ
PM Modi set to reshuffle his council of minister Final announcement expected 6pm Tomorrow
Author
Bengaluru, First Published Jul 6, 2021, 8:41 PM IST

ನವದೆಹಲಿ(ಜು.06): ದೇಶದ ರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ ಅತ್ಯಂತ ಕಿರಿಯರನ್ನೊಳಗೊಂಡ ಸಂಪುಟ ವಿಸ್ತರಣೆಗೆ ಪ್ರಧಾನಿ ನರೇಂದ್ರ ಮೋದಿ ಸಜ್ಜಾಗಿದ್ದಾರೆ. ನಾಳೆ(ಜು07) ಸಂಜೆ 6 ಗಂಟೆಗೆ ಮೋದಿ ಸಂಪುಟ ವಿಸ್ತರಣೆಯಾಗಲಿದೆ. ಈಗಾಗಲೇ ಜ್ಯೋತಿರಾಧಿತ್ಯ ಸಿಂಧಿಯಾ ಸೇರಿದಂತೆ ಪ್ರಮುಖರು ದೆಹಲಿ ಸೇರಿಕೊಂಡಿದ್ದಾರೆ.

ಮತ್ತೋರ್ವ ಕರ್ನಾಟಕ ಸಂಸದರೊಬ್ಬರಿಗೆ ದಿಲ್ಲಿಗೆ ಬರುವಂತೆ ಕರೆ: ಸಚಿವ ಸ್ಥಾನ ದಕ್ಕುವ ನಿರೀಕ್ಷೆ

ಬಿಜೆಪಿ ನೇತೃತ್ವದ 2ನೇ ಅವಧಿಯ ಸರ್ಕಾರದ ಮೊದಲ ಸಂಪುಟ ವಿಸ್ತರಣೆ ಇದಾಗಿದೆ. ಮೋದಿ ಸಂಪುಟ ಸೇರಿಕೊಳ್ಳುತ್ತಿರುವ ಬಹುತೇಕರು ಕಿರಿಯ ವಯಸ್ಸಿನವರು ಅನ್ನೋದು ವಿಶೇಷ. ಯುವ ಸಮೂಹಕ್ಕೆ ಮಣೆ ಹಾಕಿರುವ ಕೇಂದ್ರ ಬಿಜೆಪಿ, ಮಹಿಳಾ ಮಂತ್ರಿಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದೆ ಎಂದು ಮೂಲಗಳು ಹೇಳಿವೆ.

ಒಬಿಸಿ ಸೇರಿದಂತೆ ಹಿಂದುಳಿತ ವರ್ಗಗಳ ನಾಯಕರಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಈ ಮೂಲಕ ಸಣ್ಣ ಸಮುದಾಯಕ್ಕೆ ನ್ಯಾಯ ಒದಗಿಸುವ ಯತ್ನಕ್ಕೆ ಕೇಂದ್ರ ಬಿಜೆಪಿ ಕೈಹಾಕಿದೆ. ಇನ್ನ ಮೋದಿ ಸಂಪುಟ ಸೇರಿಕೊಳ್ಳುತ್ತಿರುವ ಯುವ ನಾಯಕರ ಪೈಕಿ ಬಹುತೇಕರು PhDs, MBAs, ಉನ್ನತ ವ್ಯಾಸಾಂಗ ಮಾಡಿದವರೇ ಇದ್ದಾರೆ ಎಂದು ಬಿಜೆಪಿ ಮೂಲಗಳು ಹೇಳಿವೆ.

ಚಿರಾಗ್‌ಗೆ ಚಿಕ್ಕಪ್ಪನಿಂದ ಟೆನ್ಶನ್: ಮೋದಿ ಸಂಪುಟ ಸೇರಲು ಸಜ್ಜಾದ ಪಶುಪತಿ, ಹೊಸ ಕುರ್ತಾ ರೆಡಿ!..

2024ರ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡ ಸಂಪುಟ ವಿಸ್ತರಣೆ ಮಾಡಲಾಗಿದೆ. ಪ್ರಮುಖ ನಾಯಕರಾದ ಜ್ಯೋತಿರಾದಿತ್ಯ ಸಿಂಧಿಯಾ, ಸರ್ಬಾನಂದ ಸೋನೋವಾಲ್, ಲೋಕ ಜನಶಕ್ತಿ ಪಕ್ಷದ ಪಶುಪತಿ ಪರಾಸ್, ನಾರಾಯಣ ರಾಣೆ, ವರುಣ್ ಗಾಂಧಿ ಈಗಾಗಲೇ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ.

ಚಿತ್ರದುರ್ಗದ ಸಂಸದ ಎ ನಾರಾಯಣಸ್ವಾಮಿ ಕುಟುಂಬ ಸಮೇತ ದೆಹಲಿಗೆ ಹಾರಿದ್ದಾರೆ. ಇನ್ನು ವಿಜಯಪುರ ಸಂಸದ ರಮೇಶ್ ಜಿಗಜಿಣಗಿಗೆ ಬುಲಾವ್ ಬಂದಿದ್ದು, ದೆಹಲಿ ತೆರಳುವ ಸಾಧ್ಯತೆ ಇದೆ. 

Follow Us:
Download App:
  • android
  • ios