Asianet Suvarna News Asianet Suvarna News

ಸರ್ಕಾರದ ರಕ್ಷಣೆಯಲ್ಲಿಯೇ ನ್ಯೂಸ್‌ ಚಾನೆಲ್ ಮೇಲೆ ದಾಳಿ: ಪ್ರತಿಪಕ್ಷ

 ಕೇರಳದ ಕೋಳಿಕ್ಕೋಡ್‌ನಲ್ಲಿರುವ ಏಷ್ಯಾನೆಟ್ ನ್ಯೂಸ್ ಚಾನೆಲ್ ಪ್ರಾದೇಶಿಕ ಕಚೇರಿ ಮೇಲೆ ಪೊಲೀಸರು ದಾಳಿ ನಡೆಸಿರುವ ವಿಚಾರ ಇಂದು ಕೇರಳ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತ್ತು.

ತಿರುವನಂತಪುರ:  ಕೇರಳದ ಕೋಳಿಕ್ಕೋಡ್‌ನಲ್ಲಿರುವ ಏಷ್ಯಾನೆಟ್ ನ್ಯೂಸ್ ಚಾನೆಲ್ ಪ್ರಾದೇಶಿಕ ಕಚೇರಿ ಮೇಲೆ ಪೊಲೀಸರು ದಾಳಿ ನಡೆಸಿರುವ ವಿಚಾರ ಇಂದು ಕೇರಳ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತ್ತು. ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಈ ವಿಚಾರ ಪ್ರಸ್ತಾಪಿಸಿದ ಶಾಸಕ ಪಿ.ಸಿ ವಿಶ್ವನಾಥ್ ಡ್ರಗ್‌ ಮಾಫಿಯಾ ವಿರುದ್ಧ ವರದಿ ಮಾಡಿದ ನ್ಯೂಸ್ ಚಾನೆಲ್ ವಿರುದ್ಧ ಎಸ್‌ಎಫ್‌ಐ ಏಕೆ ಪ್ರತಿಭಟನೆ ಮಾಡುತ್ತಿದೆ ಎಂದು ಅವರು ಪ್ರಶ್ನಿಸಿದರು. ಇದೇ ವೇಳೆ ಏಷ್ಯಾನೆಟ್ ನ್ಯೂಸ್ ಚಾನೆಲ್ ವಿರುದ್ಧ ಯೋಜನೆ ರೂಪಿಸಿ ದಾಳಿ ನಡೆಸಲಾಗಿದೆ ಎಂದು ಕೇರಳ ವಿರೋಧ ಪಕ್ಷದ ನಾಯಕ ವಿ.ಡಿ ಸತೀಶನ್ ಸದನದಲ್ಲಿ ಆರೋಪಿಸಿದ್ದರು. ಫೇಕ್‌ ನ್ಯೂಸ್ ಎಂಬ ಆರೋಪ ಸತ್ಯವಲ್ಲ.  ಒಂದು ವೇಳೆ ನ್ಯೂಸ್ ಚಾನೆಲ್‌ನ ಪ್ರಸಾರದಲ್ಲಿ ತಾಂತ್ರಿಕ ಸಮಸ್ಯೆಯಿದ್ದರೆ ಹೇಳಬಹುದಿತ್ತು. ಆದರೆ ಸರ್ಕಾರವೂ  ಏಷ್ಯಾನೆಟ್ ವರದಿಗಾರರನ್ನು ಬೇಟೆಯಾಡುತ್ತಿದೆ ಎಂದು ಸತೀಶನ್ ಆರೋಪಿಸಿದ್ದಾರೆ. 

ಏಷ್ಯಾನಟ್ ನ್ಯೂಸ್ ಕಚೇರಿ ದಾಳಿಗೆ ಪೊಲೀಸರ ಮೇಲಿತ್ತು ಕೇರಳ ಸರಕಾರದ ತೀವ್ರ ಒತ್ತಡ

 

Video Top Stories