Asianet Suvarna News Asianet Suvarna News

ಏಷ್ಯಾನಟ್ ನ್ಯೂಸ್ ಕಚೇರಿ ದಾಳಿಗೆ ಪೊಲೀಸರ ಮೇಲಿತ್ತು ಕೇರಳ ಸರಕಾರದ ತೀವ್ರ ಒತ್ತಡ

ಕೇರಳದ ಕೋಝಿಕೋಡ್‌ನಲ್ಲಿರುವ ಏಷ್ಯಾನೆಟ್ ನ್ಯೂಸ್ ಚಾನೆಲ್ ಮೇಲೆ ಪೊಲೀಸರು ದಾಳಿ ನಡೆಸಿ ಶೋಧ ನಡೆಸಿರುವುದರ ಹಿಂದೆ ತೀವ್ರ ರಾಜಕೀಯ ಒತ್ತಡವಿರುವುದು ತಿಳಿದು ಬಂದಿದೆ. 

Keral high level political pressure behind the Asianet News office raid in Kozhikode akb
Author
First Published Mar 6, 2023, 10:32 AM IST

ಕೊಚ್ಚಿ: ಕೇರಳದ ಕೋಝಿಕೋಡ್‌ನಲ್ಲಿರುವ ಏಷ್ಯಾನೆಟ್ ನ್ಯೂಸ್ ಚಾನೆಲ್ ಮೇಲೆ ಪೊಲೀಸರು ದಾಳಿ ನಡೆಸಿ ಶೋಧ ನಡೆಸಿರುವುದರ ಹಿಂದೆ ತೀವ್ರ ರಾಜಕೀಯ ಒತ್ತಡವಿರುವುದು ತಿಳಿದು ಬಂದಿದೆ. ಈ ಶೋಧನೆಯ ಹಿಂದೆ  ಉನ್ನತ ಮಟ್ಟದ ರಾಜಕೀಯ ಒತ್ತಡವಿತ್ತು. ಗೃಹ ಇಲಾಖೆಯ ಉನ್ನತಾಧಿಕಾರಿಗಳ ತೀವ್ರ ಒತ್ತಡದಿಂದಾಗಿ ಕೋಝಿಕ್ಕೋಡ್ ನಗರ ಪೊಲೀಸರು ಕಾನೂನು ಕ್ರಮಗಳ ಗಣನೆಗೆ ತೆಗೆದುಕೊಳ್ಳದೇ ಚಾನೆಲ್‌ನ ಪ್ರಾದೇಶಿಕ ಕಚೇರಿಯಲ್ಲಿ ತಪಾಸಣೆ ನಡೆಸಿದರು ಎಂದು ಏಷ್ಯಾನೆಟ್ ನ್ಯೂಸ್‌ಗೆ ತಿಳಿದು ಬಂದಿದೆ.

ಏಷಿಯಾನೆಟ್ ನ್ಯೂಸ್ ಕಚೇರಿಗೆ ತೆರಳಿ ಕಂಪ್ಯೂಟರ್ ಗಳನ್ನು ವಶಪಡಿಸಿಕೊಳ್ಳುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳುವಂತೆ ಕೋಝಿಕ್ಕೋಡ್ ಪೊಲೀಸರಿಗೆ  ಸೂಚನೆ ಬಂದಿತ್ತು. ಆದರೆ ಕೋಝಿಕ್ಕೋಡ್ ನಗರ ಪೊಲೀಸ್ ಅಧಿಕಾರಿಗಳು ಉನ್ನತ ಮಟ್ಟದ ಸೂಚನೆಗಳ ನಂತರವೂ ಕಚೇರಿಯಲ್ಲಿದ್ದ  ಕಂಪ್ಯೂಟರ್‌ಗಳನ್ನು ವಶಪಡಿಸಿಕೊಳ್ಳುವ ಕ್ರಮದಿಂದ ಹಿಂದೆ ಸರಿದರು.

ಭಾನುವಾರ ನಿನ್ನೆ ಕೋಝಿಕೋಡ್‌ನಲ್ಲಿರುವ ಏಷ್ಯಾನೆಟ್ ನ್ಯೂಸ್ ಪ್ರಾದೇಶಿಕ ಕಚೇರಿಯಲ್ಲಿ ಪೊಲೀಸರು  ಮಿಂಚಿನ ತಪಾಸಣೆ ನಡೆಸಿದ್ದರು. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಬೆಂಬಲಿತ ಶಾಸಕ ಪಿವಿ ಅನ್ವರ್ ಅವರು ಡಿಜಿಪಿಗೆ ಸಲ್ಲಿಸಿದ ದೂರನ್ನು ಸ್ವೀಕರಿಸಿದ 24 ಗಂಟೆಗಳ ನಂತರ ಪೊಲೀಸರು ಏಷ್ಯಾನೆಟ್ ನ್ಯೂಸ್ ಕಚೇರಿಯನ್ನು ತಲುಪಿದರು.  ಮತ್ತು ಪೊಲೀಸರು ಕೋಝಿಕ್ಕೋಡ್‌ನ ವೆಲ್ಲಾದಲ್ಲಿ  ಪಿವಿ ಅನ್ವರ್  ಅವರ ದೂರನ್ನು ದಾಖಲಿಸಿದ್ದರು.

ಕೇರಳದಲ್ಲಿ ಡ್ರಗ್‌ ಮಾಫಿಯಾ ಬಯಲು ಮಾಡಿದ್ದ ಏಷ್ಯಾನೆಟ್ ಕಚೇರಿ ಮೇಲೆ ಎಸ್‌ಎಫ್‌ಐ ಗೂಂಡಾಗಳ ದಾಳಿ

ಸಾಮಾನ್ಯವಾಗಿ ಒಂದು ಸ್ಥಳದಲ್ಲಿ ಕಾನೂನು ಉಲ್ಲಂಘನೆಯಾದರೆ ಯಾರು ಬೇಕಾದರೂ ದೂರು ದಾಖಲಿಸಬಹುದು. ಆದರೆ ಅಂತಹ ದೂರಿನಲ್ಲಿ (ದಾರಿ ತಪ್ಪಿಸುವ ವರದಿ ಆರೋಪ) ಎಫ್‌ಐಆರ್ ದಾಖಲಾಗಿದ್ದರೆ, ಈ ನಿಟ್ಟಿನಲ್ಲಿ ಪೊಲೀಸರು ತೆಗೆದುಕೊಳ್ಳಬೇಕಾದ ಕ್ರಮಗಳಿವೆ. ದೂರುದಾರರ ಹೇಳಿಕೆಯನ್ನು ದಾಖಲಿಸಿಕೊಳ್ಳುವುದು ಮೊದಲ ಹಂತವಾಗಿದೆ, ಆದರೆ ಇಲ್ಲಿ ಅದು ನಡೆದಿಲ್ಲ. ಶಾಸಕ ಪಿ.ವಿ.ಅನ್ವರ್ ಅವರು ನೀಡಿದ ದೂರಿಗೂ ನವೆಂಬರ್ 2022 ರಲ್ಲಿ ಏಷ್ಯಾನೆಟ್ ನ್ಯೂಸ್ ನಡೆಸಿದ ಮಾದಕ ದ್ರವ್ಯ ವಿರೋಧಿ ಅಭಿಯಾನಕ್ಕೂ ನೇರ ಸಂಬಂಧವೇ ಇಲ್ಲ. 

 
ಪ್ರಕರಣಗಳಲ್ಲಿ ದೂರುದಾರರ ಹೇಳಿಕೆ ಪಡೆದು ಪ್ರಾಥಮಿಕ ತನಿಖೆ ನಡೆಸಿದ ನಂತರವೇ ಪೊಲೀಸರು ಸಾಮಾನ್ಯವಾಗಿ ಮುಂದಿನ ಕ್ರಮಕ್ಕೆ ಮುಂದಾಗುತ್ತಾರೆ. ಆದರೆ ಇಲ್ಲಿ ಪೊಲೀಸರು ಅನ್ವರ್ ಹೇಳಿಕೆಯನ್ನೂ ತೆಗೆದುಕೊಳ್ಳದೆ ಏಷ್ಯಾನೆಟ್ ಸುದ್ದಿ ಕಚೇರಿಗೆ ಪರಿಶೀಲನೆಗೆ ಬಂದಿದ್ದರು. ಕೋಝಿಕ್ಕೋಡ್ ಕಮಿಷನರ್ (Narcotics is a dirty business) ಕಚೇರಿಯಲ್ಲಿ ಶನಿವಾರ ರಾತ್ರಿಯಿಂದ ಭಾನುವಾರ ಬೆಳಗಿನವರೆಗೂ ಮುಂದುವರಿದ ಚರ್ಚೆ ಬಳಿಕ ಏಷಿಯಾನೆಟ್ ನ್ಯೂಸ್ ಕಚೇರಿಗೆ ಪೊಲೀಸರು ಆಗಮಿಸಿದ್ದರು ಎಂಬ ಮಾಹಿತಿ ಇದೀಗ ತಿಳಿದು ಬರುತ್ತಿದೆ.

ಗಮನಿಸಬೇಕಾದ ಅಂಶವೆಂದರೆ, ಏಷ್ಯಾನೆಟ್ ನ್ಯೂಸ್‌ನಲ್ಲಿ ನವೆಂಬರ್ 10, 2022 ರಂದು ಪ್ರಸಾರವಾದ 'ನಾರ್ಕೋಟಿಕ್ಸ್ ಎ ಡರ್ಟಿ ಬಿಸಿನೆಸ್' (Narcotics is a dirty business) ಎಂಬ ಸರಣಿ ಕಾರ್ಯಕ್ರಮಕ್ಕೆ ಸಂಬಂಧಿಸಿದ್ದಾಗಿದೆ.  ದೂರಿನ ಪ್ರಕಾರ ಈ ಕಾರ್ಯಕ್ರಮದಲ್ಲಿ ಪ್ರಸಾರವಾದ 14 ವರ್ಷದ ಬಾಲಕಿಯ ಸಂದರ್ಶನ ನಕಲಿ ಎಂದು ಆರೋಪಿಸಲಾಗಿದೆ. ಇತ್ತ ದೂರುದಾರ ಅನ್ವರ್  ಪೋಕ್ಸೋ ಕೇಸ್‌ನಡಿ ಆರೋಪ ಮಾಡುತ್ತಿದ್ದು, ಈ ಬಾಲಕಿಯಾಗಲಿ ಅಥವಾ ಬಾಲಕಿ ಕುಟುಂಬವಾಗಲಿ ಈ ಬಗ್ಗೆ ಯಾವುದೇ ದೂರು ನೀಡಿಲ್ಲ ಎಂದು ನಗರ ಪೊಲೀಸ್ ಅಧಿಕಾರಿಗಳು ಹೇಳಿದ್ದು, ಅವರು ಏಷ್ಯಾನೆಟ್ ನ್ಯೂಸ್ ವರದಿಯೊಂದಿಗೆ ನಿಂತಿದ್ದಾರೆ.

ಈ ನಡುವೆ ದೂರುದಾರ ಪಿ.ವಿ.ಅನ್ವರ್ ಅವರ ಹೇಳಿಕೆಯನ್ನು ಪೊಲೀಸರು ತೆಗೆದುಕೊಂಡಿಲ್ಲ ಮತ್ತು ಪ್ರಾಥಮಿಕ ತನಿಖೆಯನ್ನು ನಡೆಸಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಆಯುಕ್ತರಿಗೆ ತಿಳಿಸಿದರು. ಅಲ್ಲದೇ ಕೋಝಿಕ್ಕೋಡ್ ಪೊಲೀಸ್ ಅಧಿಕಾರಿಗಳು ಪ್ರಾಥಮಿಕ ಕ್ರಮಗಳನ್ನು ತೆಗೆದುಕೊಳ್ಳದೆ ಮಾಧ್ಯಮ ಸಂಸ್ಥೆಯ ಕಚೇರಿಗೆ ಹೇಗೆ ಪ್ರವೇಶಿಸುತ್ತೀರಿ ಎಂದು ಇತರ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. 

ಸುಳ್ಳು ಕೇಸ್: ಕೇರಳದ ಕೋಳಿಕ್ಕೋಡ್ ಏಷ್ಯಾನೆಟ್ ಕಚೇರಿ ಮೇಲೆ ಪೊಲೀಸರ ದಾಳಿ

ಈ ವೇಳೆ ಆದಷ್ಟು ಬೇಗ ಏಷ್ಯಾನೆಟ್ ನ್ಯೂಸ್ ಕಚೇರಿಯನ್ನು ಪರಿಶೀಲಿಸುವಂತೆ ಮುಖ್ಯಮಂತ್ರಿ ಕಚೇರಿಯಿಂದ ಕಟ್ಟುನಿಟ್ಟಿನ ಸೂಚನೆ ಪೊಲೀಸ್ ಅಧಿಕಾರಿಗಳಿಗೆ ಬಂದಿತ್ತು ಎಂಬುದನ್ನು ಮೂಲಗಳು ಬಹಿರಂಗಪಡಿಸಿವೆ. ಕಚೇರಿಯಲ್ಲಿರುವ ಕಂಪ್ಯೂಟರ್ ಗಳನ್ನು ವಶಪಡಿಸಿಕೊಳ್ಳುವಂತೆ ಕೇಂದ್ರ ಕಚೇರಿಯಿಂದ ಆಗ್ರಹ ಕೇಳಿ ಬಂದಿತ್ತು. ಇದರೊಂದಿಗೆ ಏಷ್ಯಾನೆಟ್ ನ್ಯೂಸ್ ಪ್ರಾದೇಶಿಕ ಕಚೇರಿಯಲ್ಲಿ ಪರಿಶೀಲನೆ ನಡೆಸುವಂತೆ ಅಧೀನ ಅಧಿಕಾರಿಗಳಿಗೆ ಆಯುಕ್ತರು ಸೂಚಿಸಿದ್ದು, ಭಾನುವಾರ ಬೆಳಗ್ಗೆ 10:30ಕ್ಕೆ ಪೊಲೀಸ್ ಅಧಿಕಾರಿಗಳು ಏಷ್ಯಾನೆಟ್ ನ್ಯೂಸ್ ಕಚೇರಿಗೆ ತಲುಪಿದ್ದರು. 

ಕಚೇರಿಗೆ ಬಂದ ಪೊಲೀಸರು ಕಚೇರಿಯಲ್ಲಿದ್ದ ಪತ್ರಕರ್ತರು (journalists) ಮತ್ತು ನೌಕರರಿಂದ ಪ್ರಾಥಮಿಕ ಮಾಹಿತಿ ಸಂಗ್ರಹಿಸಿದರು.  ಆದರೆ ಕಂಪ್ಯೂಟರ್‌ಗಳನ್ನು ವಶಪಡಿಸಿಕೊಳ್ಳಬೇಕೆಂಬ ಹೈಕಮಾಂಡ್ (high command) ನಿರ್ದೇಶನವನ್ನು ಅವರು ನಿರ್ಲಕ್ಷಿಸಿದರು. ಸುಮಾರು ನಾಲ್ಕು ತಾಸು ಕಚೇರಿಯಲ್ಲಿ ಕಳೆದ ಅಧಿಕಾರಿಗಳು ಪತ್ರಿಕಾಗೋಷ್ಠಿ ಕರೆದು ಹೇಳಿಕೆ ನೀಡುವುದಾಗಿ ಹೇಳಿ ವಾಪಸಾಗಿದ್ದರು.

ಏತನ್ಮಧ್ಯೆ, ಕೇರಳದ ಪ್ರತಿಪಕ್ಷ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (United Democratic Front Secretary) ಕಾರ್ಯದರ್ಶಿ ಜಾನಿ ನೆಲ್ಲೂರ್ (Johnny Nellore) ಅವರು ಕೋಝಿಕ್ಕೋಡ್‌ನ ಏಷ್ಯಾನೆಟ್ ನ್ಯೂಸ್ ಕಚೇರಿಯಲ್ಲಿ ಪೊಲೀಸ್ ತಪಾಸಣೆಯನ್ನು ಫ್ಯಾಸಿಸ್ಟ್ ಕೃತ್ಯ ಎಂದು ಬಣ್ಣಿಸಿದ್ದಾರೆ. ಏಷಿಯಾನೆಟ್ ನ್ಯೂಸ್ ಕೊಚ್ಚಿ ಕಚೇರಿ ಮೇಲೆ ಶುಕ್ರವಾರ ನಡೆದ ಎಸ್‌ಎಫ್‌ಐ ದಾಳಿಯನ್ನು ಬಿಜೆಪಿ ಮತ್ತು ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರು ಕೂಡ ಖಂಡಿಸಿದ್ದಾರೆ. ಮಾಧ್ಯಮ ಕಚೇರಿಗೆ ನುಗ್ಗಿ ಪತ್ರಕರ್ತರನ್ನು ಭಯಭೀತಗೊಳಿಸುವುದು ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸುವ ಮಾರ್ಗವಲ್ಲ ಎಂದು ಬಿಜೆಪಿ ಕೇರಳ ಉಸ್ತುವಾರಿ ಹಾಗೂ ಮಾಜಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ (Prakash Javadekar )ಹೇಳಿದ್ದಾರೆ. ಮಾಧ್ಯಮ ಸ್ವಾತಂತ್ರ್ಯದ ಮೇಲಿನ ಹಿಂಸಾಚಾರವನ್ನು ಸಹಿಸಲು ಸಾಧ್ಯವಿಲ್ಲ ಎಂದು ಜಾವಡೇಕರ್ ಹೇಳಿದ್ದಾರೆ.

Follow Us:
Download App:
  • android
  • ios