ಸದನದೊಳಗೆ ದುಷ್ಕರ್ಮಿ ಸ್ಮೋಕ್ ಬಾಂಬ್ ತಂದಿದ್ದೇಗೆ..? 2001ರ ಬಳಿಕ ಮತ್ತೆ ಪಾರ್ಲಿಮೆಂಟ್‌ನಲ್ಲಿ ಭದ್ರತಾ ಲೋಪ..!

ಹೊಸ ಸಂಸತ್ ಭವನದ ಹೊರಗೂ ಆತಂಕ ಸೃಷ್ಟಿಸಿದ ಇಬ್ಬರು ವ್ಯಕ್ತಿಗಳು
ಸ್ಮೋಕ್ ಬಾಂಬ್ ಸಿಡಿಸಿ ಸಂಸತ್ ಮುಂದೆ ಆತಂಕ ಸೃಷ್ಟಿಸಿದ ಆರೋಪಿಗಳು
ಸಂಸತ್ನ ಒಳಗೆ ಇಬ್ಬರು, ಹೊರಗೆ ನಾಲ್ವರು ಸೇರಿ ಒಟ್ಟು 6 ಮಂದಿ ಬಂಧನ

Share this Video
  • FB
  • Linkdin
  • Whatsapp

ಸಂಸತ್‌ನಲ್ಲಿ(Parliament) ಮತ್ತೊಮ್ಮೆ ಭದ್ರತಾ ವೈಫಲ್ಯ(Security failure) ಉಂಟಾಗಿದೆ. ಲೋಕಸಭೆ(Lok Sabha) ಕಲಾಪ ನಡೆಯುತ್ತಿದ್ದಾಗಲೇ ಇಬ್ಬರಿಂದ ದಾಳಿ ನಡೆಸಲಾಗಿದೆ. ಗ್ಯಾಲರಿಯಿಂದ ಕಲಾಪಕ್ಕೆ ಧುಮುಕಿ ದಾಳಿಕೋರರು ಆತಂಕ ಸೃಷ್ಟಿಸಿದ್ದಾರೆ. ಲೋಕಸಭಾ ಗ್ಯಾಲರಿಯಿಂದ ಕಲಾಪದ ಸ್ಥಳಕ್ಕೆ ದಾಳಿಕೋರ ಧುಮುಕಿದ್ದಾನೆ. ಸಂಸದರು ಕೂರುವ ಚೇರ್, ಟೇಬಲ್‌ಗಳ ಮೇಲೆ ಓಡಾಡಿದ ಆರೋಪ ಸಹ ಇದೆ. ಸ್ಮೋಕ್ ಬಾಂಬ್ ಸ್ಪೋಟಿಸಿ ಆತಂಕವನ್ನು ದಾಳಿಕೋರರು ಸೃಷ್ಟಿಸಿದ್ದಾರೆ. ಬಳಿಕ ದಾಳಿಕೋರನನ್ನು ಸಂಸದರು ಮತ್ತು ಲೋಕಸಭಾ ಸಿಬ್ಬಂದಿ ಸುತ್ತುವರಿದ್ದಾರೆ. ಲೋಕಸಭಾ ಗ್ಯಾಲರಿಯಲ್ಲಿದ್ದ ಮತ್ತೊಬ್ಬನಿಂದ ಸರ್ಕಾರದ(Government) ವಿರುದ್ಧ ಘೋಷಣೆ ಕೂಗಲಾಗಿದೆ. ದಾಳಿ ಮಾಡಿದ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. 

ಇದನ್ನೂ ವೀಕ್ಷಿಸಿ: ಈಯರ್ ಎಂಡ್‌ನಲ್ಲಿ ಸ್ಟಾರ್ ಸಿನಿಮಾಗಳ ಧಮಾಕ..! ಡಿಸೆಂಬರ್ ಕೊನೆಯಲ್ಲಿ ಹಿಂದಿ,ತೆಲುಗು,ಕನ್ನಡ ಚಿತ್ರಗಳ ಹಬ್ಬ..!

Related Video