Ram Mandir: ಮಕ್ಕಳ ಮುಖಭಾವನೆ ಕಲ್ಪಿಸಿಕೊಂಡು ರಾಮಲಲ್ಲಾ ಮೂರ್ತಿ ಕೆತ್ತನೆ: ಅರುಣ್ ಯೋಗಿರಾಜ್

ರಾಮಲಲ್ಲಾ ಮೂರ್ತಿ ಶಿಲ್ಪಿ ಅರುಣ್ ಯೋಗಿರಾಜ್ ಮೂರ್ತಿ ಕೆತ್ತನೆ ಬಗೆಗಿನ ಸಂಪೂರ್ಣ ವಿವರವನ್ನು ಏಷ್ಯಾನೆಟ್‌ ಸುವರ್ಣ ನ್ಯೂಸ್‌ಗೆ ನೀಡಿದ್ದಾರೆ. ಇದರ ವಿಡಿಯೋ ಇಲ್ಲಿದೆ..

First Published Jan 19, 2024, 3:22 PM IST | Last Updated Jan 19, 2024, 3:22 PM IST

ಇದು ಏಷ್ಯಾನೆಟ್‌ ಸುವರ್ಣ ನ್ಯೂಸ್ ಸೂಪರ್ EXCLUSIVE ಸುದ್ದಿಯಾಗಿದ್ದು, ಅಯೋಧ್ಯೆ(Ayodhya) ರಾಮಲಲ್ಲಾ ಮೂರ್ತಿ ಶಿಲ್ಪಿ ಅರುಣ್ ಯೋಗಿರಾಜ್(Sculptor Arun Yogiraj) ನಮ್ಮ ಜೊತೆ ಮಾತನಾಡಿದ್ದಾರೆ. ರಾಮಲಲ್ಲಾ ಮೂರ್ತಿ(Ram Lalla idol) ಕೆತ್ತನೆ ಬಳಿಕ ಮೊದಲ ಸಂದರ್ಶನ ಇದಾಗಿದೆ. ದೇವಾಲಯದ ಅಂಗಳದಿಂದಲೇ ಅಜಿತ್ ಹನಮಕ್ಕನವರ್ ಅವರು ಸಂದರ್ಶನ ಮಾಡಿದ್ದಾರೆ. ಮಕ್ಕಳ ಮುಖಭಾವನೆ ಕಲ್ಪಿಸಿಕೊಂಡು ರಾಮಲಲ್ಲಾ ಮೂರ್ತಿ ಕೆತ್ತನೆ ಮಾಡಲಾಗಿದೆ. ಮಕ್ಕಳನ್ನು ಅಧ್ಯಯನ ಮಾಡಿದ ಬಳಿಕ ಮೂರ್ತಿಯ ಕಲ್ಪನೆ ಮೂಡಿತು. ಈ ಕಲ್ಪನೆಯಲ್ಲಿಯೇ ರಾಮಲಲ್ಲಾ ಮೂರ್ತಿ ಕೆತ್ತನೆ ಮಾಡಿದ್ದೇನೆ. ಮೂರ್ತಿ ಕೆತ್ತನೆಗೆ ವಿಶ್ವದೆಲ್ಲೆಡೆಯಿಂದ ಕಲ್ಲು ನೀಡಲು ಸಿದ್ಧರಿದ್ದರು. ಆದರೆ ಮೂರ್ತಿ ಕೆತ್ತನೆಗೆ ಕರ್ನಾಟಕದ ಕಲ್ಲು ಸಿಕ್ಕಿದ್ದು ತುಂಬಾ ಖುಷಿಯಾಗಿದೆ. ನಮ್ಮೂರಿನ ಬಡ ರೈತನ ಜಮೀನಿನ ಕಲ್ಲು ರಾಮನ ಮೂರ್ತಿಯಾಗಿದ್ದು ಸಂತೋಷವಾಗಿದೆ. ಮೂವರೂ ಶಿಲ್ಪಿಗಳ ಮಧ್ಯೆ ಆರೋಗ್ಯಕರ ಸ್ಪರ್ಧೆ ಇತ್ತು. ನಾವು ಮತ್ತೊಬ್ಬರು ಕೆತ್ತಿದ ಮೂರ್ತಿಯನ್ನು ಇನ್ನೂ ನೋಡೇ ಇಲ್ಲ. ನನ್ನ ಕೈ ಮೂಲಕ ಮೂರ್ತಿಯಾಗಿ ರೂಪುಗೊಳ್ಳಲು ದೇವರ ಆಶೀರ್ವಾದ ಕಾರಣ ಎಂದು ಅರುಣ್ ಯೋಗಿರಾಜ್ ಹೇಳುತ್ತಾರೆ.

ಇದನ್ನೂ ವೀಕ್ಷಿಸಿ:  Pejavara Shree: ಅಯೋಧ್ಯೆ ರಾಮ ಮಂದಿರ ಬಗ್ಗೆ ಪೇಜಾವರ ಶ್ರೀಗಳು ಹೇಳಿದ್ದೇನು..?