Pejavara Shree: ಅಯೋಧ್ಯೆ ರಾಮ ಮಂದಿರ ಬಗ್ಗೆ ಪೇಜಾವರ ಶ್ರೀಗಳು ಹೇಳಿದ್ದೇನು..?
ಅಯೋಧ್ಯೆಯಿಂದ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಗ್ರೌಂಡ್ ರಿಪೋರ್ಟ್
ಅಯೋಧ್ಯೆಯಲ್ಲಿ ಅಜಿತ್ ಹನಮಕ್ಕನವರ್ ಜೊತೆ ಪೇಜಾವರ ಶ್ರೀಗಳ ಮಾತು
ಕಾಶಿಯ ವಿಧ್ವಾಂಸರು ಅರುಣ್ ದೀಕ್ಷಿತ್ ನೇತೃತ್ವದಲ್ಲಿ ಪ್ರಾಣ ಪ್ರತಿಷ್ಠಾಪನೆ ಪೂಜೆ
ಅಯೋಧ್ಯೆಯಿಂದ ನಿಮ್ಮ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಗ್ರೌಂಡ್ ರಿಪೋರ್ಟ್ ನೀಡಲಾಗುತ್ತಿದೆ. ಅಯೋಧ್ಯೆಯಲ್ಲಿ ಅಜಿತ್ ಹನಮಕ್ಕನವರ್ ಜೊತೆ ಪೇಜಾವರ ಶ್ರೀಗಳ(Pejavara Shree) ಮಾತನಾಡಿದ್ದಾರೆ. ಜನವರಿ 22ರಂದು ಹೋಮ ಹವನಗಳ ಮೂಲಕ ಪ್ರಾಣ ರಾಮ ಪ್ರತಿಷ್ಠಾಪನೆ ಪೂಜೆ ನೆರವೇರಲಿದೆ. ಕಾಶಿಯ ವಿಧ್ವಾಂಸರಾದ ಅರುಣ್ ದೀಕ್ಷಿತ್ (Arun Dixit) ನೇತೃತ್ವದಲ್ಲಿ ಪ್ರಾಣ ಪ್ರತಿಷ್ಠಾಪನೆ ಪೂಜೆ ನಡೆಯಲಿದೆ. ಈಗಾಗಲೇ ಪೂರ್ವಭಾವಿ ಪೂಜಾ ಹವನಗಳನ್ನು ಮಾಡಲಾಗುತ್ತಿದೆ. ಐದಾರು ಶತಮಾನಗಳಿಂದ ಕಾಣುತ್ತಿದ್ದ ಕನಸು ನೆರೆವೇರುತ್ತಿದೆ. ಇಡೀ ವಿಶ್ವವೇ ಇಂದು ಇತ್ತ ತಿರುಗಿ ನೋಡುವಂತೆ ಆಗುತ್ತಿದೆ. ಯಾವುದೇ ವಿಘ್ನಗಳಿಲ್ಲದೇ ರಾಮ ಪ್ರಾಣ ಪ್ರತಿಷ್ಠಾನ(Prana Pratishthapana Pooja) ಕಾರ್ಯ ನೆರೆವೇರಲಿದೆ ಎಂದು ಪೇಜಾವರ ಶ್ರೀ ಹೇಳಿದರು. ಅಲ್ಲದೇ ಉತ್ತರ ಭಾರತದಲ್ಲಿ ವಿಶ್ವೇಶ್ವರ ತೀರ್ಥ ಶ್ರೀಗಳು ಅನೇಕ ಕಾರ್ಯಗಳು ಮಾಡಿದ್ದಾರೆ. ಅಯೋಧ್ಯೆಕ್ಕೋಸ್ಕರ ತಮ್ಮನ್ನು ತಾವು ತೊಡಗಿಸಿ ಕೊಂಡ ರೀತಿ ಎಲ್ಲರಿಗೂ ನೆನಪಿದೆ. ಇಂದು ಗುರುಗಳು ಭೌತಿಕವಾಗಿ ನಮ್ಮ ಜೊತೆಗಿಲ್ಲ ಅವರ ಕಾರ್ಯಗಳು ಶಾಶ್ವತವಾಗಿವೆ. ರಾಮಮಂದಿರ ಉದ್ಘಾಟನೆಗೆ ಶಂಕರಾಚಾರ್ಯ ಪೀಠಗಳ ವಿರೋಧವಿದೆ ಎಂಬುದು ಊಹಾಪೋಹವಾಗಿದೆ. ಶಂಕರಾಚಾರ್ಯ ಪೀಠಗಳ ವಿರೋಧ ಮಾಡಿರುವ ಬಗ್ಗೆ ನಮ್ಮ ಟ್ರಸ್ಟ್ಗೆ ಇನ್ನು ತಲುಪಿಲ್ಲ. ಹೊರಗೆ ಹರಿದಾಡುತ್ತರುವ ಮಾತುಗಳು ಸತ್ಯಾಸತ್ಯತೆ ತಿಳಿದು ಬಂದಿಲ್ಲ ಎಂದು ಅವರು ಹೇಳಿದರು.
ಇದನ್ನೂ ವೀಕ್ಷಿಸಿ: Ram Mandir: ಅಡ್ವಾಣಿ ಬಂಧನ..ಸರ್ಕಾರ ಪತನ..ಏನಿದರ ರಹಸ್ಯ ? ರಾಜಕೀಯ ಚಿತ್ರಣ ಬದಲಿಸಿತ್ತು ರಾಮ ರಥಯಾತ್ರೆ!