Asianet Suvarna News Asianet Suvarna News

ಕುತೂಹಲ ಕೆರಳಿಸಿದ ಕಾಮನ್ ಮ್ಯಾನ್ v/s ರಾಯಲ್ ಮ್ಯಾನ್! ಲೋಕಸಮರದಲ್ಲಿ ಯಾರು ಗೆಲ್ತಾರೆ? ಯಾರು ಸೋಲ್ತಾರೆ?

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಹೈವೋಲ್ಟೆಜ್ ಫೈಟ್..!
ಲೋಕಸಭಾ ಸಮರದ ಅಖಾಡದಲ್ಲಿ ಘಟಾನುಘಟಿ ಅಭ್ಯರ್ಥಿ..!
ರಾಜ್ಯ ರಾಜಧಾನಿಯಲ್ಲಿ 1 ಕೋಟಿಗೂ ಹೆಚ್ಚು ಮತದಾರರು..!
 

2024 ಲೋಕ ಸಮರಕ್ಕೆ ಅಖಾಡ ಸಿದ್ಧವಾಗಿದೆ. ಇಷ್ಟು ದಿನ ಬಹಿರಂಗವಾಗಿ ಅಬ್ಬರದ ಪ್ರಚಾರ ಮಾಡಿದ್ದಾಯ್ತು. ಅಲ್ಲಲ್ಲಿ ಭರ್ಜರಿಯಾಗಿ ಕ್ಯಾಂಪೇನ್ ಮಾಡಿದ್ದೂ ಆಯ್ತು. ಈಗ ಅದೆಲ್ಲದಕ್ಕೂ ಬ್ರೇಕ್, ಈಗೇನಿದ್ದರೂ ಏಪ್ರಿಲ್ 26ಕ್ಕೆ ವೋಟ್ ಮಾಡೋದಕ್ಕೆ ಕೌಂಟ್ ಡೌನ್ ಶುರು. ಇಷ್ಟು ದಿನ ಹೈವೋಲ್ಟೇಜ್ 2024ರ ಲೋಕ(Lok Sabha elections 2024) ಸಮರದ ತಯಾರಿ ಹೇಗ್ಹೇಗೆ ನಡೆದಿತ್ತು ಅನ್ನೊ ಪಿಕ್ಚರ್ ಎಲ್ಲರ ಮುಂದಿದೆ. ಲೋಕ ಸಮರದ ಭಾಗ ಒಂದರಲ್ಲಿ, ರಾಜ್ಯದಲ್ಲಿ ಮೊದಲ ಹಂತದದಲ್ಲಿ 14 ಕ್ಷೇತ್ರಗಳಲ್ಲಿ, ಇದೇ ಏಪ್ರಿಲ್ 26ರಂದು ಮತದಾನ(Voting) ನಡೆಯಲಿದೆ. ಈ ಹಂತದಲ್ಲಿ ಉಡುಪಿ-ಚಿಕ್ಕಮಗಳೂರು ಹಾಸನ ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ ಕ್ಷೇತ್ರಗಳಲ್ಲಿ ಈಗ ಬಹಿರಂಗ ಪ್ರಚಾರಕ್ಕೆ ಬ್ರೇಕ್ ಹಾಕಲಾಗಿದೆ. ಹಾಗಂತ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯ ನಡೆಯುವುದೇ ಇಲ್ಲ ಅರ್ಥ ಅಲ್ಲ. ಅಭ್ಯರ್ಥಿಗಳು ಈಗ ಸ್ವತಃ ತಾವೇ ತಮ್ಮ ಕ್ಷೇತ್ರದದಲ್ಲಿರವ ಮನೆ ಮನೆಗೆ ತೆರಳಿ ಪ್ರಚಾರ ಮಾಡ್ತಾರೆ. ಇಲ್ಲಾ ಕಾರ್ಯಕರ್ತರು ಮನೆಗಳಿಗೆ ಹೋಗಿ ಮತದಾರರ(Voters)ಮನವೋಲಿಸುವ ಪ್ರಯತ್ನ ಮಾಡುತ್ತಾರೆ. ಪ್ರತಿಯೊಬ್ಬ ಅಭ್ಯರ್ಥಿಗೂ ಇದು ಪ್ರತಿಷ್ಠೆಯ ಕಣವಾಗಿರುವುದರಿಂದ, ಗೆಲ್ಲೊದಕ್ಕೆ ಏನೆಲ್ಲ ಕಸರತ್ತುಗಳನ್ನ ಮಾಡ್ಬೇಕಾಗಿದೆಯೋ ಅದೆಲ್ಲವನ್ನೂ ಮಾಡಲಾಗ್ತಿದೆ. 18ನೇ ಲೋಕ ಸಮರದಲ್ಲಿ ಕರ್ನಾಟಕದಿಂದ(Karnataka) ಸುಮಾರು 247 ಅಭ್ಯರ್ಥಿಗಳು ಮೊದಲ  ಚುನಾವಣಾ ಕಣದಲ್ಲಿದ್ದಾರೆ. ಅದರಲ್ಲಿ ಕೆಲ ಘಟಾನುಘಟಿ ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಮಂಡ್ಯದಲ್ಲಿ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬೆಂಗಳೂರು ಉತ್ತರದಲ್ಲಿ ಅಭ್ಯರ್ಥಿಗಳಾಗಿದ್ದಾರೆ. ಇನ್ನೂ ಮೈಸೂರಿನಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್, ಬೆಂಗಳೂರು ಗ್ರಾಮಾಂತರದಲ್ಲಿ ಡಾ. ಸಿ.ಎಸ್. ಮಂಜುನಾತ್ ಸೇರಿ ಹಲವು ಪ್ರಮುಖರು ಮೊದಲ ಹಂತದ ಚುನಾವಣೆಯ ಅಭ್ಯರ್ಥಿಗಳಾಗಿದ್ದಾರೆ.

ಇದನ್ನೂ ವೀಕ್ಷಿಸಿ:  ಹಿಟ್ ಹಾಡುಗಳ ಸರದಾರ ಡಾ.ರಾಜ್‌ಕುಮಾರ್! ವರನಟನ ಬಗ್ಗೆ ತಿಳಿದುಕೊಳ್ಳಲೇಬೇಕಾದ ಸಂಗತಿಗಳಿವು!