ದಿನಕ್ಕೊಂದು ವಿವಾದ ಆಗ್ತಿದೆ, ಮಂದಿರ- ಮಸೀದಿ ಗದ್ದಲ ಬೇಡ: ಮೋಹನ್ ಭಾಗವತ್ ಅಚ್ಚರಿಯ ಹೇಳಿಕೆ
ಅತಿಯಾದ ತಿರಸ್ಕಾರ, ದ್ವೇಷ, ಅಸೂಯೆ ಹುಟ್ಟಿಕೊಳ್ಳುವುದು ಬೇಡ. ದೇಶದಲ್ಲಿ ದಿನಕ್ಕೊಂದು ಮಂದಿರ, ಮಸೀದಿ ವಿವಾದ ಹುಟ್ಟಿಕೊಳ್ಳುತ್ತಿವೆ. ಅದು ಹೇಗೆ ಸಾಧ್ಯವಾಗುತ್ತೆ? ಇವುಗಳಿಗೆ ಪರಿಹಾರವೇನು?. ಭಾರತ ದೇಶ ಸಂವಿಧಾನದ ಅಡಿಯಲ್ಲಿ ನಡೆಯುತ್ತದೆ ಎಂದು ಹೇಳಿದ ಆರ್ಎಸ್ಎಸ್ ಸಂಚಾಲಕ ಮೋಹನ್ ಭಾಗವತ್
ಬೆಂಗಳೂರು(ಡಿ.22): ಹಿಂದೂ ದೇಗುಲಗಳ ಮೇಲೆ ಮಸೀದಿ ನಿರ್ಮಾಣ ಚರ್ಚೆ, ಕಾಶಿ, ಮಥುರಾ, ಸಂಬಾಲ್ ಮಸೀದಿ ಸರ್ವೆ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಆರ್ಎಸ್ಎಸ್ ಸಂಚಾಲಕ ಮೋಹನ್ ಭಾಗವತ್ ಅಚ್ಚರಿಯ ಹೇಳಿಕೆಯೊಂದನ್ನ ನೀಡಿದ್ದಾರೆ .
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕಿತ್ತು ಆಗಿದೆ. ಅಯೋಧ್ಯೆ ರಾಮ ಮಂದಿರ ಹಿಂದೂಗಳ ಶ್ರದ್ಧಾ ಕೇಂದ್ರವಾಗಿದೆ. ಮಂದಿರ ಕಟ್ಟುವುದರಿಂದಲೇ ಹಿಂದೂ ನಾಯಕನಾಗಲು ಸಾಧ್ಯವಿಲ್ಲ ಎಂದು ಮೋಹನ್ ಭಾಗವತ್ ತಿಳಿಸಿದ್ದಾರೆ.
ಉಪ್ಪಿಯ 'ಯುಐ' ನೋಡಿದ ಪ್ರೇಕ್ಷಕರ ರಿಯಾಕ್ಷನ್ ಏನು? ಭಾರೀ ಟ್ರೆಂಡ್ ಆಗ್ತಿದೆ ಯಾಕೆ?
ಅತಿಯಾದ ತಿರಸ್ಕಾರ, ದ್ವೇಷ, ಅಸೂಯೆ ಹುಟ್ಟಿಕೊಳ್ಳುವುದು ಬೇಡ. ದೇಶದಲ್ಲಿ ದಿನಕ್ಕೊಂದು ಮಂದಿರ, ಮಸೀದಿ ವಿವಾದ ಹುಟ್ಟಿಕೊಳ್ಳುತ್ತಿವೆ. ಅದು ಹೇಗೆ ಸಾಧ್ಯವಾಗುತ್ತೆ? ಇವುಗಳಿಗೆ ಪರಿಹಾರವೇನು?. ಭಾರತ ದೇಶ ಸಂವಿಧಾನದ ಅಡಿಯಲ್ಲಿ ನಡೆಯುತ್ತದೆ ಎಂದು ಹೇಳಿದ್ದಾರೆ.