ಕೆಂಪುಕೋಟೆಯಿಂದ ಮಣಿಪುರ ಜನತೆಗೆ ಮೋದಿ ಭರವಸೆ, ಇಲ್ಲಿದೆ ಸ್ವಾತಂತ್ರ್ಯ ದಿನಾಚರಣೆ ಭಾಷಣದ ವಿಶ್ಲೇಷಣೆ!
ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಪ್ರಧಾನಿ ಮೋದಿ ಮಣಿಪುರ ಹಿಂಸಾಚಾರ ಕುರಿತು ಮಾತನಾಡಿದ್ದಾರೆ. ತೀವ್ರ ಟೀಕೆಗೆ ಗುರಿಯಾಗಿದ್ದ ಮೋದಿ ಇದೀಗ ಮಣಿಪುರ ಜನತಗೆ ಹೊಸ ಭರವಸೆ ನೀಡಿದ್ದಾರೆ. ಮೋದಿ ಮಣಿಪುರ ವಿಚಾರದ ಕುರಿತು ವಿಶ್ಲೇಕ ಪ್ರಶಾಂತ್ ನಾತು ವಿಶ್ಲೇಷಣೆ ಇಲ್ಲಿದೆ.
ಬೆಂಗಳೂರು(ಆ.15) ಪ್ರಧಾನಿ ನರೇಂದ್ರ ಮೋದಿ ಕೆಂಪು ಕೋಟೆ ಮೇಲೆ ಸ್ವಾತಂತ್ರ್ಯ ದಿನಾಚರಿಸಿದ್ದಾರೆ. ವಿಶೇಷವಾಗಿ ಪ್ರಧಾನಿ ಮೋದಿ ತಮ್ಮ ಭಾಷಣದ ಆರಂಭದಲ್ಲೇ ಮಣಿಪುರ ಹಿಂಸಾಚಾರ ಘಟನೆ ಪ್ರಸ್ತಾಪಿಸಿದ್ದಾರೆ. ಮಣಿಪುರದ ಘಟನೆಯನ್ನು ಮತ್ತೊಮ್ಮೆ ಖಂಡಿಸಿ, ಶಾಂತಿ ಸುವ್ಯವಸ್ಥೆಗೆ ಕೇಂದ್ರ ಸರ್ಕಾರ ಪ್ರಯತ್ನ ಮಾಡುತ್ತಿದೆ ಎಂದಿದ್ದಾರೆ. ಇದೇ ವೇಳೆ ಮಣಿಪುರ ಜನತೆಯೊಂದಿಗೆ ಇಡೀ ದೇಶ ನಿಂತಿದೆ ಎಂದು ಮೋದಿ ಹೇಳಿದ್ದಾರೆ. ಮಣಿಪುರ ಘಟನೆ ಕುರಿತು ಮೋದಿ ಪ್ರಸ್ತಾಪಿಸಿದ ವಿಚಾರಗಳೇನು? ಇದು ರಾಜಕೀಯವಾಗಿ ಬೀರಿದ ಪರಿಣಾಮವೇನು? ಇಲ್ಲಿದೆ.