Parliament Security Breach: ಮನೋರಂಜನ್ ಜೊತೆ ಸಂಬಂಧ ಹೊಂದಿದ್ದ ನಿವೃತ್ತ ಡಿವೈಎಸ್‌ಪಿ ಪುತ್ರನ ಬಂಧನ
ಸಂಸತ್ ಸ್ಮೋಕ್ ದಾಳಿ ಆರೋಪಿ ಮನೋರಂಜ್ ನ ಜೊತೆ ಸಂರ್ಪಕ ಹೊಂದಿದ್ದ ಎಂಬ ಕಾರಣಕ್ಕಾಗಿ ನಿವೃತ್ತ ಡಿವೈಎಸ್‌ಪಿ ಪುತ್ರ ಸಾಯಿಕೃಷ್ಣನ ಬಂಧಿಸಿ ಹೆಚ್ಚಿನ ವಿಚಾರಣೆಗೆ ದೆಹಲಿಗೆ ಕರೆದ್ಯೊಯಲಾಗಿದೆ.
ಸಂಸತ್ ದಾಳಿ (Parliament Attack) ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದೆ. ಪ್ರಕರಣಕ್ಕೆ ಸಂಬಂಧಪಟ್ಟ 6 ಜನರನ್ನು ಈಗಾಗಲೇ ಬಂಧಿಸಲಾಗಿದ್ದು, ಅದರಲ್ಲಿ ಮೈಸೂರಿನ ಮನೋರಂಜನ್ ಕೂಡ ಆರೋಪಿ. ತನಿಖಾ ತಂಡ ಮೈಸೂರಿಗೆ ಬಂದು ಮನೋರಂಜನ್ (Manoranjan) ಕುರಿತು ಮಾಹಿತಿ ಕಲೆ ಹಾಕಿರುವ ಬೆನ್ನಲ್ಲೇ ದೆಹಲಿ ಪೊಲೀಸರು ಮೈಸೂರಿನ ಮನೋರಂಜ್ ನ ಜೊತೆ ಸಂರ್ಪಕ ಹೊಂದಿದ್ದ ನಿವೃತ್ತ ಡಿವೈಎಸ್‌ಪಿ ಪುತ್ರ ಸಾಯಿಕೃಷ್ಣನ ಬಂಧಿಸಿದ್ದಾರೆ. ಬಾಗಲಕೋಟೆಯ 30 ವರ್ಷದ ಸಾಯಿಕೃಷ್ಣ ಎಂಬಾತನ ವಶಕ್ಕೆ ಪಡೆದ ದೆಹಲಿ ಪೊಲೀಸರು, ಒಂದು ಸುತ್ತಿನ ವಿಚಾರಣೆಯನ್ನು ಬಾಗಲಕೋಟೆಯಲ್ಲಿ ಮಾಡಿದ್ದು, ಹೆಚ್ಚಿನ ವಿಚಾರಣೆಗಾಗಿ ದೆಹಲಿಗೆ ಕರೆದ್ಯೊಯ್ದದ್ದಾರೆ. ಮನೋರಂಜನ್ ರೂಮ್‌ಮೇಟ್ ಆಗಿದ್ದ ಸಾಯಿಕೃಷ್ಣ, ಕೇವಲ ಮನೋರಂಜನ್ ಜೊತೆ ಸಂಬಂಧ ಹೊಂದಿದ್ದ ಎಂಬ ಕಾರಣಕ್ಕೆ ಬಂಧಿಸಲಾಗಿದೆಯೇ ಅಥವಾ ಈ ಪ್ರಕರಣದಲ್ಲಿ ಆತನ ಪಾತ್ರ ಏನಾದರೂ ಇರಬಹುದಾ ಎಂಬ ಅನುಮಾನ ಸೃಷ್ಟಿಸಿದೆ. ಆತನ ವಿಚಾರಣೆಯ ನಂತರ ಹಲವು ಸತ್ಯ ಬಯಲಾಗುವ ಸಾಧ್ಯತೆಗಳಿವೆ.
ಇದನ್ನು ಓದಿ: ಮನೋರಂಜನ್-ಸಾಯಿಕೃಷ್ಣ ಲಿಂಕ್..? ಮೈಸೂರಿನ ಬಳಿಕ ಬಾಗಲಕೋಟೆಗೂ ಹಬ್ಬಿದ ದಾಳಿ ನಂಟು !