ಮನೋರಂಜನ್-ಸಾಯಿಕೃಷ್ಣ ಲಿಂಕ್..? ಮೈಸೂರಿನ ಬಳಿಕ ಬಾಗಲಕೋಟೆಗೂ ಹಬ್ಬಿದ ದಾಳಿ ನಂಟು !

ನಿವೃತ್ತ ಡಿವೈಎಸ್ಪಿ ಪುತ್ರನನ್ನ ವಶಕ್ಕೆ ಪಡೆದ ದೆಹಲಿ ಪೊಲೀಸರು
ಬಾಗಲಕೋಟೆಯಲ್ಲಿ 30 ವರ್ಷದ ಸಾಯಿಕೃಷ್ಣ ಎಂಬಾತ ವಶಕ್ಕೆ
ಆರೋಪಿ ಮನೋರಂಜನ್ ಜತೆ ಸಂಪರ್ಕ ಹೊಂದಿದ್ದ ಸಾಯಿ ಕೃಷ್ಣ

Share this Video
  • FB
  • Linkdin
  • Whatsapp

ಸಂಸತ್‌ನೊಳಗೆ ಸ್ಮೋಕ್ ಬಾಂಬ್ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಕ್ತಿದೆ. ಮೈಸೂರು(mysore) ಬಳಿಕ ಈಗ ನಂಟು ಬಾಗಲಕೋಟೆಗೆ(Bagalkote) ಹಬ್ಬಿದೆ. ಆರೋಪಿ ಮನೋರಂಜನ್ ಸ್ನೇಹಿತ ನಿವೃತ್ತ DySP ಪುತ್ರ ಸಾಯಿಕೃಷ್ಣನ(Saikrishna) ದೆಹಲಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ತಡರಾತ್ರಿ ಹೆಚ್ಚಿನ ವಿಚಾರಣೆಗೆ ದೆಹಲಿಗೆ(Delhi) ಸಾಯಿಕೃಷ್ಣನ ಪೊಲೀಸರು ಕರ್ಕೊಂಡು ಹೋಗಿದ್ದಾರೆ. ಈತನಿಂದ ದಾಳಿ ಬಗ್ಗೆ ಮತ್ತಷ್ಟು ಸತ್ಯ ಹೊರಬರುವ ಸಾಧ್ಯತೆ ಇದೆ. ಬಾಗಲಕೋಟೆಯಲ್ಲಿ 30 ವರ್ಷದ ಸಾಯಿಕೃಷ್ಣ ಎಂಬಾತ ವಶಕ್ಕೆ ಪಡೆದಿದ್ದು, ಮೈಸೂರಿನ ಮನೋರಂಜನ್ ಜತೆ ಸಾಯಿ ಕೃಷ್ಣ ಸಂಪರ್ಕ ಹೊಂದಿದ್ದ ಎನ್ನಲಾಗ್ತಿದೆ. ಸದ್ಯ ಬಗೆದಷ್ಟು ಬಯಲಾಗುತ್ತಿದೆ ಸ್ಮೋಕ್ ಬಾಂಬ್ ದಾಳಿ ಪ್ರಕರಣ. ಮೈಸೂರಿನ ಬಳಿಕ ಬಾಗಲಕೋಟೆಗೂ ಹಬ್ಬಿದೆ. ನವನಗರದ ಠಾಣೆಯಲ್ಲಿ 2 ಗಂಟೆಗಳ ಕಾಲ ಸಾಯಿಕೃಷ್ಣ ವಿಚಾರಣೆ ನಡೆಸಿದ್ದು, ಹೆಚ್ಚಿನ ವಿಚಾರಣೆಗೆ ಬಾಗಲಕೋಟೆಯ ಸಾಯಿಕೃಷ್ಣ ಅಜ್ಞಾತ ಸ್ಥಳಕ್ಕೆ ಶಿಫ್ಟ್ ಮಾಡಲಾಗಿದೆ. ಬಾಗಲಕೋಟೆಯ ವಿದ್ಯಾಗಿರಿ ನಿವಾಸಿಯಾಗಿರುವ ಸಾಯಿಕೃಷ್ಣ.

ಇದನ್ನೂ ವೀಕ್ಷಿಸಿ: ನಾನು 25 ವರ್ಷ ಎಲೆಮರೆ ಕಾಯಿಯಂತೆ ಪಕ್ಷಕ್ಕೆ ದುಡಿಸಿದ್ದೇನೆ: ಟಿಕೆಟ್‌ ಆಕಾಂಕ್ಷಿ ಡಾ.ಸುಶ್ರುತ್ ಗೌಡ

Related Video