ಗಣರಾಜ್ಯೋತ್ಸವ ಪರೇಡ್‍ನಲ್ಲಿ ಇರಲ್ಲ ಕರ್ನಾಟಕದ ಸ್ತಬ್ಧಚಿತ್ರ ಪ್ರದರ್ಶನ
ಗಣರಾಜ್ಯೋತ್ಸವಕ್ಕೆ ಕರ್ನಾಟಕಕ್ಕೆ ಬಿಗ್ ಶಾಕ್ ಎದುರಾಗಿದ್ದು, ಈ ಬಾರಿಯ ಗಣರಾಜ್ಯೋತ್ಸದ ಪರೇಡ್ನಲ್ಲಿ ಕರ್ನಾಟಕದ ಸ್ತಬ್ಧಚಿತ್ರಕ್ಕೆ ಅನುಮತಿ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದೆ.
ಈ ಬಾರಿ ಗಣರಾಜ್ಯೋತ್ಸದ ಪರೇಡ್‌ನಲ್ಲಿ ರಾಜ್ಯದ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದೆ. ಹದಿಮೂರು ವರ್ಷಗಳಿಂದ ಕರ್ನಾಟಕದ ಟ್ಯಾಬ್ಲೋ ಪ್ರದರ್ಶನವಾಗುತ್ತಿತ್ತು. ಈ ಬಾರಿ ರಾಜ್ಯದಿಂದ ನಾರಿ ಶಕ್ತಿ ಥೀಮ್ ಪೈನಲ್ ಆಗಿತ್ತು. ಕರ್ನಾಟಕದಿಂದ ನಾಲ್ಕು ಸ್ಥಬ್ಧಚಿತ್ರ ಕಳುಹಿಸಲಾಗುತ್ತಿತ್ತು. ಎರಡು ಮೀಟಿಂಗ್'ನಲ್ಲಿ ಸ್ತಬ್ಧ ಚಿತ್ರಕ್ಕೆ ಅನುಮತಿ ಸಿಕ್ಕರೂ ಕೊನೆ ಮೀಟಿಂಗ್'ನಲ್ಲಿ ಸಿಕ್ಕಿಲ್ಲ.