ಮುರುಗೇಶ್ ನಿರಾಣಿ ಅಪ್ಪಂಗೆ ಹುಟ್ಟಿದ್ರೆ ಸಿಡಿ ಬಿಡುಗಡೆ ಮಾಡಲಿ: ಯತ್ನಾಳ್ ಸವಾಲ್

ಸಚಿವ ಮುರುಗೇಶ್ ನಿರಾಣಿಗೆ ತಾಕತ್ತಿದ್ದರೆ, ನಿಜವಾಗಿಯೂ ಅವರ ಅಪ್ಪಂಗೆ ಹುಟ್ಟಿದ್ದರೆ ಸಿಡಿ ಬಿಡುಗಡೆ ಮಾಡಲಿ ಎಂದು ಬಸನಗೌಡ ಪಾಟೀಲ್ ಯತ್ನಾಳ ಸವಾಲ್ ಹಾಕಿದ್ದಾರೆ.
 

Share this Video
  • FB
  • Linkdin
  • Whatsapp

ಸಚಿವ ಮುರುಗೇಶ್ ನಿರಾಣಿ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಮಧ್ಯೆ ಸಿಡಿ ಸಮರ ಶುರುವಾಗಿದೆ. ನಿರಾಣಿ ಅವರಪ್ಪಗೆ ಹುಟ್ಟಿದ್ರೆ ಸಿಡಿ ತೆಗೆಯಲಿ ಎಂದು ಶಾಸಕ ಯತ್ನಾಳ್‌ ಸವಾಲ್‌ ಹಾಕಿದ್ದಾರೆ. ಕಾಂಗ್ರೆಸ್‌ ಹಾಗೂ ಬಿಜೆಪಿಯಲ್ಲಿ ದೊಡ್ಡ ಸಿಡಿ ಫ್ಯಾಕ್ಟರಿ ಇದೆ. ತಾಕತ್ತು ಇದ್ರೆ ಸಿಡಿ ಹೊರಕ್ಕೆ ತೆಗೆಯಲಿ ಎಂದು ಗುಡುಗಿದ್ದಾರೆ. ನನ್ನ ಬಳಿ ಸಿಡಿ ಭಂಡಾರವೇ ಇದೆ. ನಿರಾಣಿ ಸ್ಟೇ ತೆಗೆದುಕೊಂಡಿದ್ದಾರೆ, ಸಿಡಿ ಇಟ್ಟುಕೊಂಡೇ ನಿರಾಣಿ ಮಂತ್ರಿ ಆದ್ರು. ಅವರಪ್ಪಗೆ ಹುಟ್ಟಿದ್ರೆ ಸಿಡಿ ಬಿಡುಗಡೆ ಮಾಡಲಿ ಎಂದು ಕಿಡಿ ಕಾರಿದ್ದಾರೆ. ಯಾರು ಸಿಡಿ ವಿಚಾರದಲ್ಲಿ ಸ್ಟೇ ತೆಗೆದುಕೊಂಡಿರುತ್ತಾರೋ ಅವರಿಗೆ ಸಿಡಿ ವಿಚಾರ ಗೊತ್ತಿರುತ್ತದೆ ಎಂದು ಸಚಿವ ಮುರುಗೇಶ ನಿರಾಣಿ ಹೇಳಿದ್ದರು. ಅದಕ್ಕೆ ಯತ್ನಾಳ್ ಈ ರೀತಿ ಕುಟುಕಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸ್ಯಾಂಟ್ರೋ ರವಿಯ 20 ವರ್ಷದ ಕೇಸ್‌ಗಳ ಇತಿಹಾಸ ತೆಗೆಯುತ್ತೇವೆ: ಸಿಎಂ ಬೊಮ್ಮಾಯಿ

Related Video