Mamata Banerjee: ಹಿಂದೂ ಮಹಿಳೆಯರೇ ಈತನ ಟಾರ್ಗೆಟ್..! ರಾಜಾರೋಷವಾಗಿ ಕಿಡ್ನಾಪ್..ನಿರಂತರ ಅತ್ಯಾಚಾರ..!

ಫೋನ್ ಬಂದ ಕೂಡಲೇ ಅವರ ಮನೆಗೆ ಹೋಗ್ಬೇಕಂತೆ..!
ಮಹಿಳಾ ಮುಖ್ಯಮಂತ್ರಿ ರಾಜ್ಯದಲ್ಲಿ ಮಹಿಳೆಯರು ಸೇಫಾ?
ರಾಜಾರೋಷವಾಗಿ ಕಿಡ್ನಾಪ್..ನಿರಂತರ ಅತ್ಯಾಚಾರ..!
 

Share this Video
  • FB
  • Linkdin
  • Whatsapp

ಮಮತಾ ಬ್ಯಾನರ್ಜಿ ಸರ್ಕಾರವಿರುವ ಪಶ್ಚಿಮ ಬಂಗಾಳ ಇಡೀ ದೇಶದ ಗಮನವನ್ನ ತನ್ನತ್ತ ಸೆಳಿತಾ ಇದೆ. ಯಾವುದೋ ಅದ್ಭುತ ಯೋಜನೆಯಿಂದಲ್ಲ. ಅಮೋಘ ಸಾಧನೆಯಿಂದಲ್ಲ. ಬ್ಯಾನರ್ಜಿ(Mamata Banerjee) ಪಕ್ಷ ಟಿಎಂಸಿ ನಾಯಕ ಶೇಖ್ ಷಹಜಹಾನ್(Sheikh Shahjahan) ಮೇಲೆ ಬಂದಿರುವ ರೇಪ್ ಆರೋಪದಿಂದ. ದಲಿತ ಮಹಿಳೆಯರನ್ನೇ(Dalit Womens) ಟಾರ್ಗೆಟ್ ಮಾಡಿ ಕಿಡ್ನಾಪ್ ಮಾಡಿ ಅತ್ಯಾಚಾರ(Rape) ಮಾಡ್ತಿದ್ದಾರೆ ಅನ್ನೋ ಆರೋಪ ಈಗ ತುಂಬಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತಾ ಇದೆ. ಪಶ್ಚಿಮ ಬಂಗಾಳದ(West Bengal) ಸಂದೇಶ್ಖಾಲಿ ತುಂಬಾನೇ ಸದ್ದು ಮಾಡ್ತಾ ಇದೆ. ಸಂದೇಶ್ ಖಾಲಿ ಅನ್ನೋದು ಒಂದು ಊರಿನ ಹೆಸರು. ಆ ಊರಿನ ಕಥೆಯನ್ನ ಕೇಳ್ತಾ ಇದ್ರೆ ಮಾತ್ರ ದಿಗ್ಭ್ರಮೆ ಉಂಟಾಗುತ್ತೆ. ಈ ಕಾಲದಲ್ಲಿ ಹಿಂಗೂ ನಡೀಬೋದಾ ಅನ್ನೋ ಆತಂಕಮಯ ಅಚ್ಚರಿಯಾಗುತ್ತೆ. ದಲಿತ ಮಹಿಳೆಯರ ಸುರಕ್ಷತೆ ಬಗ್ಗೆ ಚಿಂತೆಯುಂಟಾಗುತ್ತೆ. ಟಿಎಂಸಿ ನಾಯಕ ಶೇಖ್ ಷಹಜಹಾನ್ ಮೇಲೆ ಬಂದಿರುವ ಆರೋಪ ಇಷ್ಟೊಂದು ಗುಲ್ಲೆಬ್ಬಿಸಿದೆ. ಇದೇ ಸಂದೇಶ್ ಖಾಲಿಯಲ್ಲಿ ಆಗ್ತಾ ಇರೋದಂತೆ. ಸುಂದರವಾಗಿರೋರ ನಂಬರ್‌ಗಳನ್ನ ಶೇಖ್ ಷಹಜಹಾನ್ ಹಾಗೂ ಆತನ ಗೂಂಡಾಗಳು ಇಟ್ಕೊಂಡಿರ್ತಾರೆ. ಅವರ ತೆವಲು ಏರಿದಾಗಲೆಲ್ಲಾ ಫೋನ್ ಮಾಡ್ತಾರೆ. ಆಗ ಇವರು ಅವರಿದ್ದಲ್ಲಿ ಹೋಗಬೇಕು. ಅವರ ಜೊತೆಗೆ ಹಾಸಿಗೆ ಹಂಚಿಕೊಳ್ಳಬೇಕು. ಒಬ್ಬರಾದ ಮೇಲೆ ಒಬ್ಬರು ಅತ್ಯಾಚಾರ ಮಾಡ್ತಾರೆ ಅನ್ನೋ ಘನ ಗಂಭೀರ ಆರೋಪ ಕೇಳಿ ಬಂದಿದೆ.

ಇದನ್ನೂ ವೀಕ್ಷಿಸಿ:  Assembly Session: ಏನಿಲ್ಲ ಏನಿಲ್ಲ ಬಿಜೆಪಿ ನಾಯಕರ ತಲೆಯಲ್ಲಿ ಏನಿಲ್ಲ: ಸಿಎಂ ಸಿದ್ದರಾಮಯ್ಯ ಕೌಂಟರ್‌

Related Video