AYODHYA TRIP: ರಾಮಮಂದಿರ ಉದ್ಘಾಟನೆ ಸಂಭ್ರಮಿಸಲು ಕಮಲ ಪ್ಲಾನ್: ಅಯೋಧ್ಯಾ ಪ್ರವಾಸ ಬಿಜೆಪಿಯಿಂದಲೇ ಆಯೋಜನೆ!

ರಾಜ್ಯದ 4 ವಲಯಗಳಿಂದ ರಾಮಭಕ್ತರನ್ನು ಕಳುಹಿಸಲು ಲೆಕ್ಕಾಚಾರ
2 ದಿನಗಳ ಕಾಲ ಅಯೋಧ್ಯೆಯಲ್ಲಿ ವಾಸ್ತವ್ಯ ಮತ್ತು ವೀಕ್ಷಣೆಗೆ ಅವಕಾಶ
ಪ್ರತಿ ವಿಧಾನಸಭಾ ಕ್ಷೇತ್ರದಿಂದಲೂ ರಾಮಭಕ್ತರನ್ನು ಕಳುಹಿಸಲು ಪ್ಲಾನ್

First Published Jan 5, 2024, 11:51 AM IST | Last Updated Jan 5, 2024, 11:51 AM IST

ರಾಮಮಂದಿರ ಉದ್ಘಾಟನೆ ಸಂಭ್ರಮಿಸಲು ಬಿಜೆಪಿ(BJP) ಪ್ಲ್ಯಾನ್‌ ಮಾಡಿದ್ದು, ರಾಮಭಕ್ತರಿಗೆ ಅಯೋಧ್ಯಾ ಪ್ರವಾಸ(AYODHYA TRIP) ಬಿಜೆಪಿಯಿಂದಲೇ ಆಯೋಜನೆ ಮಾಡಲಾಗುವುದಂತೆ. ಜನವರಿ 24ರಿಂದ ಮೊದಲ ಹಂತದ ಅಯೋಧ್ಯಾ ಪ್ರವಾಸಕ್ಕೆ ತಯಾರಿ ಆರಂಭವಾಗುತ್ತದೆ. ಲೋಕಸಭಾ ಚುನಾವಣೆ(Loksabha election) ಲೆಕ್ಕಾಚಾರ ಇಟ್ಕೊಂಡು ಅಯೋಧ್ಯಾ ಪ್ರವಾಸ ಮಾಡಲಾಗುತ್ತಿದೆಯಾ ಎಂಬ ಪ್ರಶ್ನೆ ಸಹ ಕಾಡುತ್ತಿದೆ. ರಾಮಮಂದಿರ(Ram Mandir) ಉದ್ಘಾಟನೆಯಾದ ಮೊದಲ ವಾರದಿಂದಲೇ ಪ್ರವಾಸ ಆಯೋಜನೆ ಮಾಡಲಾಗುತ್ತದೆ. ರಾಜ್ಯದ ಮೂಲೆ ಮೂಲೆಗಳಿಂದ ರಾಮಭಕ್ತರನ್ನು ಅಯೋಧ್ಯೆಗೆ ಕಳುಹಿಸಲು ತೀರ್ಮಾನ ಮಾಡಲಾಗಿದೆ. ರಾಜ್ಯದಿಂದ ಬರೋಬ್ಬರಿ 60 ರೈಲಿನಲ್ಲಿ ಅಯೋಧ್ಯೆಗೆ ರಾಮಭಕ್ತರ ಪ್ರವಾಸ ಮಾಡಲಿದ್ದಾರೆ. ಪ್ರತಿ ರೈಲಿನಲ್ಲಿ 1,260 ಭಕ್ತರಿಗೆ ಅವಕಾಶ ಕೊಡಲು ನಿರ್ಣಯ ಮಾಡಲಾಗಿದೆ. ಜನವರಿ 24ರಿಂದ ಆರಂಭಗೊಳ್ಳುವ ರಾಮಭಕ್ತರ ಅಯೋಧ್ಯಾ ಪ್ರವಾಸ. 

ಇದನ್ನೂ ವೀಕ್ಷಿಸಿ:  ರಾಹುಲ್ ಗಾಂಧಿ ಪ್ರಧಾನಿ ರೇಸ್‌ನಲ್ಲಿಡುವ ಕಾಂಗ್ರೆಸ್ ಹಾದಿ ಮತ್ತಷ್ಟು ಸುಗಮ..? I.N.D.I.A ಕೂಟಕ್ಕೆ ನಿತೀಶ್ ಸಂಚಾಲಕ?

Video Top Stories