ರಾಹುಲ್ ಗಾಂಧಿ ಪ್ರಧಾನಿ ರೇಸ್‌ನಲ್ಲಿಡುವ ಕಾಂಗ್ರೆಸ್ ಹಾದಿ ಮತ್ತಷ್ಟು ಸುಗಮ..? I.N.D.I.A ಕೂಟಕ್ಕೆ ನಿತೀಶ್ ಸಂಚಾಲಕ?
ಪ್ರಧಾನಿ ಅಭ್ಯರ್ಥಿ ವಿವಾದದ ಬಳಿಕ ಮುನಿಸಿಕೊಂಡಿದ್ದ ನಿತೀಶ್
ಈ ಬಗ್ಗೆ ಆಪ್ತರ ಬಳಿ ನೋವು ತೋಡಿಕೊಂಡಿದ್ದ ಬಿಹಾರ ಸಿಎಂ
ನಿತೀಶ್ ಕುಮಾರ್ ಇಂಡಿಯಾ ಕೂಟ ತೊರೆಯುತ್ತಾರೆಂಬ ಆತಂಕ!
I.N.D.I.A ಕೂಟದಲ್ಲಿ ಮತ್ತೊಂದು ವಿವಾದಕ್ಕೆ ವೇದಿಕೆ ಸಿದ್ಧವಾದಂತೆ ಕಾಣುತ್ತಿದೆ. ಪ್ರಧಾನಿ ಅಭ್ಯರ್ಥಿ(Prime Minister Candidate) ವಿವಾದದ ಬಳಿಕ ಮತ್ತೊಂದು ಜಟಾಪಟಿ ಆಗುವುದು ಫಿಕ್ಸ್ ಆದಂತೆ ಕಾಣುತ್ತಿದೆ. ಮಲ್ಲಿಕಾರ್ಜುನ ಖರ್ಗೆ(Mallikarjuna Kharge) ದಾಳ ಎಸೆದಿದ್ದ ಟಿಎಂಸಿ, ಆಪ್‌ಗೆ ಕಾಂಗ್ರೆಸ್(Congress) ತಿರುಗೇಟು ನೀಡಿದೆ. ನಿತೀಶ್ ಕುಮಾರ್‌ಗೆ(Nitish Kumar)I.N.D.I.A ಕೂಟದ ಸಂಚಾಲಕ ಹುದ್ದೆ..? ನೀಡಲು ಚಿಂತನೆ ನಡೆಸಲಾಗಿದೆಯಂತೆ. ಪ್ರಧಾನಿ ಅಭ್ಯರ್ಥಿ ಬದಲು ಸಂಚಾಲಕ ಹುದ್ದೆ ಸೃಷ್ಟಿಸಲು ಪ್ಲ್ಯಾನ್ ಮಾಡಲಾಗುತ್ತಿದೆ. ಇಂಡಿಯಾ ಕೂಟದ ಸಾರಥ್ಯ ಜೆಡಿಯುನ ನಿತೀಶ್ ಕುಮಾರ್‌ಗೆ ವಹಿಸುವ ಸಾಧ್ಯತೆ ಇದೆ. ಈ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಕಾಂಗ್ರೆಸ್ ಮುಂದಾಗಿದೆ. ಸಂಚಾಲಕ ಹುದ್ದೆ ಸೃಷ್ಟಿ ಮೂಲಕ ಪ್ರಧಾನಿ ಅಭ್ಯರ್ಥಿ ಕಿತ್ತಾಟಕ್ಕೆ ಬ್ರೇಕ್ ಹಾಕುವ ಪ್ಲ್ಯಾನ್ ಇದರಲ್ಲಿ ಇದೆ. ರಾಹುಲ್(Rahul gandhi) ಪ್ರಧಾನಿ ರೇಸ್‌ನಲ್ಲಿಡುವ ಕಾಂಗ್ರೆಸ್ ಹಾದಿ ಮತ್ತಷ್ಟು ಸುಗಮವಾದಂತೆ ಕಾಣುತ್ತಿದೆ.
ಇದನ್ನೂ ವೀಕ್ಷಿಸಿ: ಸರ್ಕಾರದ ವಿವಾದಾತ್ಮಕ ನಿಲುವು : ಲೋಕಸಭಾ ಚುನಾವಣೆ ಹೊತ್ತಲ್ಲಿ ಬಿಜೆಪಿಗೆ ಆಸ್ತ್ರ ಕೊಟ್ಟಿತಾ ಕಾಂಗ್ರೆಸ್..?