Ram Mandir: ಕೌಸಲ್ಯಸುಪ್ರಜನಿಗೆ ‘ಪಟ್ಟಾಭಿಷೇಕ’ದ ಸಂಭ್ರಮ: ದಶರಥನಂದನ ಊರಿನಲ್ಲಿ ಮೇಳೈಸಿದ ‘ರಾಮರಾಜ್ಯ’

ಶತಕೋಟಿ ರಾಮಭಕ್ತರು ದೈವಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ. ರಾಮಭಕ್ತರ ಕನಸು ನನಸಾಗಲಿದ್ದು, ಪ್ರಧಾನಿ ಮೋದಿ ಸಾರಥ್ಯದಲ್ಲಿ ರಾಮಲಲ್ಲಾ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ.

First Published Jan 22, 2024, 10:32 AM IST | Last Updated Jan 22, 2024, 10:33 AM IST

ಇಂದು ಹಿಂದುಗಳಿಗೆ ಅತ್ಯಂತ ಮಹತ್ವದ ದಿನ. ಶತಕೋಟಿ ಭಾರತೀಯರ ಕನಸು ಸಕಾರಗೊಳ್ಳುವ ಸುದಿನನ. ಹೌದು ಕೌಸಲ್ಯಸುಪ್ರಜ ಬಾಲ ರಾಮನಿಗೆ ಪ್ರಾಣಪ್ರತಿಷ್ಠಾಪಣೆ ನಡೆಯಲಿದ್ದು, ಎಲ್ಲೆಲ್ಲೂ ರಾಮಘೋಷ ಮೊಳಗಿದೆ. ಭಕ್ತಿಸಾಗರದಲ್ಲಿ ಅಯೋಧ್ಯೆ(Ayodhya) ಮಿಂದೇಳುತ್ತಿದೆ.380 ಅಡಿ ಉದ್ದ, 250 ಅಡಿ ಅಗಲ. ಮೂರು ಮಹಡಿಗಳ ಬೃಹತ್ ಭವ್ಯ ಮಂದಿರ ನಾಗರ ಶೈಲಿಯಲ್ಲಿ ವಿನ್ಯಾಸಗೊಂಡಿದ್ದು, 51 ಇಂಚು ಎತ್ತರದ ರಾಮಲಲ್ಲಾನ ಮೂರ್ತಿ ಭವ್ಯ ಮಂದಿರದಲ್ಲಿ ವಿರಾಜಮಾನವಾಗಲಿದೆ. ರಾಮಮಂದಿರದಲ್ಲಿ ಬೆಳಗ್ಗೆ 6.30ರಿಂದಲೇ ಧಾರ್ಮಿಕ ವಿಧಿವಿಧಾನಗಳು ಶುರುವಾಗಲಿವೆ. ಬೆಳಗ್ಗೆ 6.30ಕ್ಕೆ ರಾಮಲಲ್ಲಾ ಮೂರ್ತಿಗೆ(Ram Lalla idol) ಶೃಂಗಾರ ಮಾಡಿ ಜಾಗರಣ ಆರತಿ ಬೆಳಗಲಾಗುತ್ತದೆ. ಇನ್ನು 7 ಗಂಟೆಯಿಂದಲೇ ರಾಮನ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ರಾಮಮಂದಿರ(Ram Mandir) ಟ್ರಸ್ಟ್‌ ನೀಡಿರುವ ಪಾಸ್‌ಗಳ ಕ್ಯೂ ಆರ್‌ ಕೋಡ್‌ ಸ್ಕ್ಯಾನ್‌ ಮಾಡುವ ಮೂಲಕ ಭಕ್ತರು ದೇವಾಲಯ ಪ್ರವೇಶಿಸಿ ಬೆಳಗ್ಗೆ 7 ಗಂಟೆಯಿಂದ 11.30ರವರೆಗೆ ರಾಮನ ದರ್ಶನ ಪಡೆಯಬಹುದಾಗಿದೆ. ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಆರತಿ ನಡೆಯಲಿದೆ.

ಇದನ್ನೂ ವೀಕ್ಷಿಸಿ:  Ayodhya Ram Mandir : ಏನಿದು “ಕ್ಷತ್ರಿಯ” ಶಪಥ..? ಭೀಷಣ ಪ್ರತಿಜ್ಞೆ ಈಡೇರಿದ್ದು ಹೇಗೆ..?

Video Top Stories