ಅರುಣ್ ಯೋಗಿರಾಜ್ ಊರಲ್ಲಿ ಈಗಲೇ ರಾಮೋತ್ಸವ! ರಾಮಲಲ್ಲಾ ವಿಗ್ರಹ ಕೆತ್ತನೆಗೆ ಎದುರಾಗಿದ್ದ ಸವಾಲುಗಳೇನೇನು.?

ಹೇಗಿದ್ದಾನೆ ಗೊತ್ತಾ ಕನ್ನಡಿಗ ಕೆತ್ತಿದ ಬಾಲ ರಾಮ? 
ಹೇಗೆ ನಡೆದಿತ್ತು ರಾಮ ವಿಗ್ರಹದ ಆಯ್ಕೆ ಪ್ರಕ್ರಿಯೆ?
ರಾಮ ವಿಗ್ರಹಕ್ಕೆ ಬಳಕೆಯಾಗಿದ್ದು ಕರುನಾಡ ಶಿಲೆ!

First Published Jan 3, 2024, 3:03 PM IST | Last Updated Jan 3, 2024, 3:03 PM IST

ಅಯೋಧ್ಯೆಯ  ರಾಮಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲಿದೆ ಕನ್ನಡಿಗ ಕೆತ್ತಿದ ರಾಮ ವಿಗ್ರಹ. ವಿಶ್ವವೇ ಎದುರು ನೋಡ್ತಾ ಇದ್ದ ಅಯೋಧ್ಯೆ ರಾಮಮಂದಿರದಲ್ಲಿ, ಇದೇ ಜನವರಿ 22ರಂದು ರಾಮದೇವರ ಪ್ರಾಣ ಪತಿಷ್ಠಾಪನೆಯಾಗಲಿದೆ. ಕೋಟಿ ಕೋಟಿ ಭಕ್ತರು ಕಾಯ್ತಾ ಇರೋ ಆ ಪವಿತ್ರ ಕಾರ್ಯಕ್ರಮಕ್ಕೆ ದಿನಗಣನೆ ಆರಂಭವಾಗಿದೆ. ಒಂದೊಂದು ನಿಮಿಷ ಉರುಳಿದಂತೆಲ್ಲಾ ದೇಶದಲ್ಲಿ ಸಂಭ್ರಮ ನೂರ್ಮಡಿಯಾಗ್ತಾ ಇದೆ. ಇಂಥಾ ಹೊತ್ತಲ್ಲಿ, ಕನ್ನಡಿಗರ ಸಡಗರ ಹೆಚ್ಚಿಸೋ ಮತ್ತೊಂದು ಸಂಗತಿ ಸಂಭವಿಸಿದೆ. ಅದೇನು ಅಂದ್ರೆ, ಅಯೋಧ್ಯೆ ರಾಮಮಂದಿರಕ್ಕೆ ಕನ್ನಡಿಗ ಕೆತ್ತಿದ ಪ್ರಭು ಶ್ರೀರಾಮನ ಮೂರ್ತಿ ಆಯ್ಕೆಯಾಗಿದೆ. ಅರುಣ್ ಯೋಗಿರಾಜ್(Arun Yogiraj). ಇವತ್ತು ದೇಶದೆಲ್ಲೆಡೆ ಸದ್ದು ಮಾಡ್ತಾ ಇರೋ ಹೆಸರು. ಪರಿಶ್ರಮಕ್ಕೆ.. ಪರಮಾದ್ಭುತ ವಿಗ್ರಹ ನಿರ್ಮಾಣಕ್ಕೆ ಅರುಣ್ ಯೋಗಿರಾಜ್ ಕೇರ್ ಆಫ್ ಅಡ್ರಸ್.. ಅಂಥಾ ಅರುಣ್ ಅವರು ನಿರ್ಮಿಸಿದ ರಾಮಲಲ್ಲಾ ವಿಗ್ರಹವೇ(Ram Lalla idol), ಅಯೋಧ್ಯೆಯಲ್ಲಿ(Ayodhya) ಪ್ರತಿಷ್ಠಾಪನೆಗೊಳ್ಳೋಕೆ ಸಜ್ಜಾಗಿದೆ..ರಾಮಲಲ್ಲಾ ವಿಗ್ರಹ ನಿರ್ಮಾಣವಾಗಿರೋದು ಕೂಡ, ಕನ್ನಡ ನೆಲದ ಶಿಲೆಯಿಂದ.. ಮೈಸೂರಿನ ಎಚ್.ಡಿ ಕೋಟೆ ಹಾರೋಹಳ್ಳಿಯ ಶಿಲೆ ಅದು.. ರಾಮದಾಸ್ ಅನ್ನೋರ ಜಮೀನಿನಲ್ಲಿ 10 ಅಡಿ ಆಳದಲ್ಲಿ  ಕಪ್ಪು ಶಿಲೆಯೊಂದು ಅಡಗಿತ್ತು. ಅವತ್ತು ಸ್ಥಳದಲ್ಲಿಯೇ ಮಾನಯ್ಯ ಬಡಿಗೇರ್ ರಿಂದ ಆ ಕಲ್ಲಿನ ಪರೀಕ್ಷೆ ನಡೆದಿತ್ತು. ಸುಮಾರು 40 ಟನ್ ನಷ್ಟು ಕಲ್ಲಗಳನ್ನೂ ಅಯೋಧ್ಯೆಗೆ  ಅರುಣ್ ಅವರು ತಗೊಂಡ್ ಹೋಗಿದ್ರು. ಅಷ್ಟೇ ಅಲ್ಲ, ಇಂಥಾ ಶಿಲೆಗಳನ್ನ ಪರೀಕ್ಷೆ ಮಾಡೋ, IIRM ನಡೆಸಿದ ಎಲ್ಲಾ ಟೆಸ್ಟೂಗಳಲ್ಲೂ ಈ ಮೈಸೂರಿನ ಶಿಲೆ ಪಾಸಾಗಿತ್ತು.

ಇದನ್ನೂ ವೀಕ್ಷಿಸಿ:  Shivamogga: ಮುಚ್ಚಿಹೋಗಿದ್ದ ಕಂಪನಿ ಮತ್ತೆ ಬಂದಿರೋದ್ಯಾಕೆ..? ಹೊಸ ಹೋರಾಟಕ್ಕೆ ಸಜ್ಜಾಗುತ್ತಿದೆ ಶಿವಮೊಗ್ಗ..!

Video Top Stories