ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ: ಕರ್ನಾಟಕದಿಂದ 530 ಮಂದಿಗೆ ಹೈಕಮಾಂಡ್‌ನಿಂದ ಆಹ್ವಾನ

ಅಧಿವೇಶನದ ಮೊದಲ ದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾರಿಂದ ಭಾಷಣ
ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ ನಾಥ್ ಸಿಂಗ್ ಸೇರಿ ಹಲವರಿಂದ ಭಾಷಣ
ನಾಳೆ ಅಧಿವೇಶನ ಉದ್ದೇಶಿಸಿ ಮಾತನಾಡಲಿರುವ ಪ್ರಧಾನಿ ನರೇಂದ್ರ ಮೋದಿ
 

First Published Feb 17, 2024, 11:03 AM IST | Last Updated Feb 17, 2024, 11:04 AM IST

ಇಂದಿನಿಂದ ದೆಹಲಿಯಲ್ಲಿ ಎರಡು ದಿನಗಳ ರಾಷ್ಟ್ರೀಯ ಬಿಜೆಪಿ ಕಾರ್ಯಕಾರಿಣಿ ಸಭೆ(National Executive Meeting) ನಡೆಯಲಿದೆ. ಕರ್ನಾಟಕದಿಂದ 530 ಬಿಜೆಪಿ(BJP) ನಾಯಕರಿಗೆ ಹೈಕಮಾಂಡ್‌ನಿಂದ ಆಹ್ವಾನ ಬಂದಿದೆ. ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಪ್ರಧಾನಿ ಮೋದಿ ಭಾಷಣವೇ ಪ್ರಮುಖವಾಗಿದೆ. ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಲೋಕಸಭಾ ಚುನಾವಣೆ(Loksabha Election) ಬಗ್ಗೆ ಪಾಠ ಮಾಡಲಿದ್ದಾರೆ. 400 ಕ್ಷೇತ್ರ ಗೆಲುವಿಗೆ ಬೇಕಾದ ನೀಲ ನಕ್ಷೆ ತಯಾರಿಸಿ ಕೊಡಲಿದ್ದಾರೆ ಎಂದು ತಿಳಿದುಬಂದಿದೆ. ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಕರ್ನಾಟಕ(Karnataka) ನಾಯಕರು ಭಾಗಿಯಾಗಲಿದ್ದಾರೆ. ಯಡಿಯೂರಪ್ಪ, ವಿಜಯೇಂದ್ರ, ಅಶೋಕ್, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಈಶ್ವರಪ್ಪ, ಅಶ್ವತ್ಥನಾರಾಯಣ, ಕೋಟಾ ಶ್ರೀನಿವಾಸಪೂಜಾರಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳು ರಾಷ್ಟ್ರೀಯ ಬಿಜೆಪಿ ಕಾರ್ಯಕಾರಿಣಿಯಲ್ಲಿ ಭಾಗಿಯಾಗಲಿದ್ದಾರೆ. ವಿವಿಧ ರಾಜ್ಯಗಳಿಂದ 12 ಸಾವಿರ ಕೇಸರಿ ನಾಯಕರಿಗೆ ಆಹ್ವಾನ ನೀಡಲಾಗಿದೆ. ನವದೆಹಲಿಯ ಭಾರತ್ ಮಂಟಪದಲ್ಲಿ ಕಾರ್ಯಕಾರಿಣಿ ಸಭೆ ನಡೆಯಲಿದೆ. ಬೇರೆ ಬೇರೆ ರಾಜ್ಯದ ಚುನಾಯಿತ ಜನಪ್ರತಿನಿಧಿಗಳು, ಮಾಜಿ ಶಾಸಕ, ಸಂಸದರು, ಮಾಜಿ ಸಿಎಂಗಳು, ಕೇಂದ್ರ ಸಚಿವರು, ಮೇಯರ್, ಉಪ ಮೇಯರ್ಗಳು, ರಾಷ್ಟ್ರೀಯ, ರಾಜ್ಯ ಘಟಕಗಳ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಇದನ್ನೂ ವೀಕ್ಷಿಸಿ:  Maldives: ಆರ್ಥಿಕ ದುಸ್ಥಿತಿಗೆ ತಲುಪಿದ ಮಾಲ್ಡೀವ್ಸ್‌: ಬೇಲ್ಔಟ್ ಸಾಲಕ್ಕಾಗಿ IMF ಮೊರೆ, ದಿವಾಳಿ ಎಂದು ಘೋಷಣೆ

Video Top Stories