
ಅಕ್ರಮ ಬಯಲಿಗೆಳೆದ ಪತ್ರಕರ್ತೆ ವಿರುದ್ಧ FIRಗೆ ರಾಜೀವ್ ಚಂದ್ರಶೇಖರ್ ಖಂಡನೆ
ಮಾರ್ಕ್‌ಶೀಟ್ ಅಕ್ರಮ ಬಯಲಿಗೆಳೆದ ಏಷ್ಯಾನೆಟ್ ಮಲೆಯಾಳಂ ವರದಿಗಾರ್ತಿ ಅಖಿಲಾ ನಂದಕುಮಾರ್ ವಿರುದ್ಧವೇ ಕೇರಳ ಪೊಲೀಸರು ಎಫ್‌ಐಆರ್ ದಾಖಲಿಸಿರುವುದನ್ನು ಮಾಹಿತಿ ತಂತ್ರಜ್ಞಾನ ಇಲಾಖೆ ಕೇಂದ್ರ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಖಂಡಿಸಿದ್ದಾರೆ.
ತಿರುವನಂತಪುರಂ: ಕೇರಳದ ಮಹಾರಾಜ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ನಡೆದ ಮಾರ್ಕ್‌ಶೀಟ್ ಅಕ್ರಮ ಬಯಲಿಗೆಳೆದ ಏಷ್ಯಾನೆಟ್ ಮಲೆಯಾಳಂ ವರದಿಗಾರ್ತಿ ಅಖಿಲಾ ನಂದಕುಮಾರ್ ವಿರುದ್ಧವೇ ಕೇರಳ ಪೊಲೀಸರು ಎಫ್‌ಐಆರ್ ದಾಖಲಿಸಿರುವುದನ್ನು ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಖಂಡಿಸಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ದೂರು ದಾಖಲಿಸುವ ಬದಲು ಪೊಲೀಸರು ಪ್ರಕರಣ ಬಯಲಿಗೆಳೆದ ಪತ್ರಕರ್ತೆ ವಿರುದ್ಧ ದೂರು ದಾಖಲಿಸಿದ್ದಾರೆ. ಸಿಪಿಐಎಂ ವಿದ್ಯಾರ್ಥಿ ಸಂಘಟನೆಯಾದ ಎಸ್‌ಎಫ್‌ಐ ಕಾರ್ಯಕರ್ತನ ದೂರಿನ ಆಧಾರದ ಮೇಲೆ FIR ದಾಖಲಿಸಿದ್ದು, ಕೇರಳದ ಸಿಪಿಐಎಂ ನೇತೃತ್ವದ ಸರಕಾರದ ನಡೆ ಖಂಡಿಸಿದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಖಂಡಿಸಿದ್ದಾರೆ.