ಇಂದು ಜೈಪುರಕ್ಕೆ ಆಗಮಿಸಲಿರುವ ಬಿಜೆಪಿ 3 ವೀಕ್ಷಕರು: ರಾಜಸ್ಥಾನದಲ್ಲೂ ಹೊಸಬರಿಗೆ ಸಿಎಂ ಪಟ್ಟ ಪಕ್ಕನಾ ?

ಮಧ್ಯಪ್ರದೇಶದಲ್ಲಿ ಚೌವ್ಹಾಣ್ ರಾಜ್ಯಭಾರ ಅಂತ್ಯ..!
3 ಬಾರಿ ಶಾಸಕನಿಗೆ ಸಿಎಂ ಪಟ್ಟ ಕಟ್ಟಿದ ಹೈಕಮಾಂಡ್
ರಾಜಸ್ಥಾನಕ್ಕೆ ಇಂದು ಮೂವರು ವೀಕ್ಷಕರ ಭೇಟಿ

First Published Dec 12, 2023, 9:20 AM IST | Last Updated Dec 12, 2023, 9:20 AM IST

ಉತ್ತರದಲ್ಲಿ ತ್ರಿವಿಕ್ರಮ ಸಾಧನೆಗೈದ ಬಿಜೆಪಿ(BJP) ಹೈಕಮಾಂಡ್‌ಗೆ ಸಿಎಂ ಆಯ್ಕೆಯೇ ಕ್ಕಗ್ಗಂಟಾಗಿತ್ತು. 3 ರಾಜ್ಯಗಳ ಪೈಕಿ ಕೊನೆಗೂ ಎರಡು ರಾಜ್ಯಗಳ ಸಿಎಂ ಆಯ್ಕೆ ಗಜಪ್ರಹಸನಕ್ಕೆ ಹೈಕಮಾಂಡ್ ತೆರೆ ಎಳೆದಿದೆ. ಛತ್ತೀಸ್‌ಗಢ(Chhattisgarh) ಸಿಎಂ  ಆಯ್ಕೆ ನಡೆಸಿದ್ದ ಬಿಜೆಪಿ ಹೈಕಮಾಂಡ್ ಸೋಮವಾರ ಮಧ್ಯಪ್ರದೇಶದಲ್ಲೂ(Madhya Pradesh) ಮುಖ್ಯಮಂತ್ರಿ ಆಯ್ಕೆ ಕಗ್ಗಂಟಿಗೆ ತೆರೆ ಎಳೆದಿದೆ. ಛತ್ತೀಸ್‌ಗಢ ಮಾದರಿಯಲ್ಲೇ ಮಧ್ಯಪ್ರದೇಶದಲ್ಲೂ ಹೊಸಬರಿಗೆ ಮಣೆ ಹಾಕಿದ್ದು, ಮೂರು ಬಾರಿ ಶಾಸಕರಾಗಿದ್ದ ಮೋಹನ್ ಯಾದವ್ ಮಧ್ಯಪ್ರದೇಶ ಸಿಎಂ ಎಂದು ಘೋಷಣೆ ಮಾಡಿದೆ. ರಾಜಸ್ಥಾನದಲ್ಲಿ(Rajasthan) ಸಿಎಂ ಆಯ್ಕೆ ಇಂದು ನಡೆಯಲಿದ್ದು, ಈ ಎರಡು ರಾಜ್ಯಗಳ ರೀತಿ ಇಲ್ಲೂ ಹೊಸ ಮುಖಗಳಿಗೆ ಮಣೆ ಹಾಕುವ ಸಾಧ್ಯತೆ ಇದೆ. ರಾಜನಾಥ್‌ ಸಿಂಗ್‌, ಸರೋಜ್‌ ಪಾಂಡೆ, ವಿನೋದ್‌ ತಾವಡೆ ವೀಕ್ಷಕರಾಗಿ ಜೈಪುರಕ್ಕೆ ಹೋಗಲಿದ್ದಾರೆ.

ಇದನ್ನೂ ವೀಕ್ಷಿಸಿ:  Today Horoscope: ಇಂದು ಕಾರ್ತಿಕ ಮಾಸ ಮುಗಿಯಲಿದ್ದು, ದೀಪವನ್ನು ಹಚ್ಚುವುದರಿಂದ ಸಿಗುವ ಫಲವೇನು ?