'ನಮ್ಮೂರ ನಾಗರ ಪಂಚಮಿ' ಕಾರ್ಯಕ್ರಮ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಭಾಗಿ

ಮಹಿಳಾ ಮಣಿಗಳಿಂದ ಅದ್ದೂರಿ  ನಾಗರ ಪಂಚಮಿ ಹಬ್ಬ ಆಚರಣೆ 
ತಮ್ಮದೇ ಶೈಲಿಯಲ್ಲಿ ಹಬ್ಬ ಆಚರಿಸಿದ ಉತ್ತರ ಕರ್ನಾಟಕ ಮಂದಿ 
ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಉತ್ತರ ಕರ್ನಾಟಕದ ಹೆಣ್ಮಕ್ಳು

First Published Aug 22, 2023, 1:03 PM IST | Last Updated Aug 22, 2023, 1:03 PM IST

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಉತ್ತರ ಕರ್ನಾಟಕ ಶೈಲಿಯಲ್ಲಿ ನಾಗರ ಪಂಚಮಿ(Nagar Panchami) ಹಬ್ಬವನ್ನು ಆಚರಿಸಲಾಯಿತು. ಈ ಹಬ್ಬ ಆಚರಣೆಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಭಾಗಿಯಾಗಿದ್ರು. ತಮ್ಮದೇ ಶೈಲಿಯಲ್ಲಿ ಬೆಂಗಳೂರಿನಲ್ಲಿ(Bengaluru) ಉತ್ತರ ಕರ್ನಾಟಕದ(North Karnataka) ಮಹಿಳೆಯರು ಹಬ್ಬವನ್ನು ಆಚರಿಸಿದರು. ಸಾಂಪ್ರದಾಯಿಕ ಉಡುಗೆ ತೊಟ್ಟು,ನಾಗಪ್ಪ, ಗೋ ಮಾತೆ, ಗಣಪತಿಗೆ ಮಹಿಳೆಯರು ಪೂಜೆ ಸಲ್ಲಿಸಿದ್ರು. ಅಲ್ಲದೇ ಪೂಜೆ ಬಳಿಕ ಮಹಿಳೆಯರು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾದ್ರು. ನಮ್ಮೂರ ನಾಗರ ಪಂಚಮಿ ಎಂಬ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇದರಲ್ಲಿ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್‌(Lakshmi Hebbalkar) ಭಾಗಿಯಾಗಿದ್ರು.

ಇದನ್ನೂ ವೀಕ್ಷಿಸಿ:  ಬಿಎಸ್‌ವೈ ಪುತ್ರನ ಮಣಿಸಲು ಮತ್ತೊಬ್ಬ ಮಾಜಿ ಸಿಎಂ ಮಗನ ಅಖಾಡಕ್ಕಿಳಿಸುತ್ತಾ 'ಕೈ' ?

Video Top Stories