ಭದ್ರಕೋಟೆ ಮತ್ತೆ ಕೈ ವಶವಾಗುತ್ತಾ..? ಹೇಗಿದೆ ಅಮೇಥಿ ಚುನಾವಣಾ ರಾಜಕೀಯದ ಚರಿತ್ರೆ..?
ಸೋಲಿಸಿದ ಸ್ಮೃತಿ ಇರಾನಿ ಚಾಲೆಂಜ್ ಸ್ವೀಕರಿಸ್ತಾ ಗಾಂಧಿ ಫ್ಯಾಮಿಲಿ..?
ಭದ್ರಕೋಟೆ ಕಾಂಗ್ರೆಸ್ ಕೈ ತಪ್ಪಿದ್ದೇಕೆ..? ಸ್ಮೃತಿ V/S ರಾಹುಲ್ 3.0..?
ಒಂದು ಕಾಲದ ಗಾಂಧಿ ಕುಟುಂಬದ ಭದ್ರಕೋಟೆ ಉ.ಪ್ರದೇಶದ ಅಮೇಥಿ..!
2019ರಲ್ಲಿ ಉತ್ತರ ಪ್ರದೇಶದ ಅಮೇಥಿಯಲ್ಲಿ(Amethi) ಸೋತು ಕೇರಳದ ವಯನಾಡಿನಲ್ಲಿ ನೆಲೆ ಕಂಡುಕೊಂಡಿದ್ದ ರಾಹುಲ್ ಗಾಂಧಿ(Rahul Gandhi), ಇದೀಗ ಮತ್ತೆ ಅಮೇಥಿಯಿಂದಲೇ ಸ್ಪರ್ಧೆ ಮಾಡ್ತಾರೆ ಎಂಬ ಗುಸುಗುಸು ಪ್ರಾರಂಭವಾಗಿದೆ. ಇದಕ್ಕಾಗಿ ಕಾಂಗ್ರೆಸ್(Congress) ಭದ್ರಕೋಟೆ ಅಮೇಥಿ ಟಿಕೆಟ್ ಘೋಷಿಸದೇ ರಾಹುಲ್‌ಗಾಗಿ ಮೀಸಲು ಇಟ್ಟಿದೆ ಕಾಂಗ್ರೆಸ್ ಹೈಕಮಾಂಡ್ ಎನ್ನಲಾಗ್ತಿದೆ. 2019ರಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ(Smriti Irani) ವಿರುದ್ಧ ಸುಮಾರು 50 ಸಾವಿರ ಮತಗಳ ಅಂತರದಿಂದ ರಾಹುಲ್ ಇಲ್ಲಿ ಸೋಲು ಕಂಡಿದ್ದರು. ಉತ್ತರ ಪ್ರದೇಶದ ಅಮೇಥಿ, ರಾಯ್ ಬರೇಲಿ ಗಾಂಧಿ ಕುಟುಂಬದ ಭದ್ರಕೋಟೆಯಾಗಿದ್ದು, ಈ 2 ಕ್ಷೇತ್ರಗಳಿಂದ ಗಾಂಧಿ ಕುಟುಂಬದ ಒಟ್ಟು ಆರು ಮಂದಿ 21 ಬಾರಿ ಸ್ಪರ್ಧೆ ಮಾಡಿ, 02 ಬಾರಿ ಸೋಲು ಕಂಡಿದ್ದಾರೆ.
ಇದನ್ನೂ ವೀಕ್ಷಿಸಿ: ಕೇಂದ್ರ ಸಚಿವರ ವಿರುದ್ಧ ಕಾಂಗ್ರೆಸ್ ಪ್ಲ್ಯಾನ್ ಚೇಂಜ್!? ಲೋಕ ಸಮರಕ್ಕೆ ದಿಂಗಾಲೇಶ್ವರ ಶ್ರೀ ಎಂಟ್ರಿ! ಏನಿದು ಬಿಗ್ ಟ್ವಿಸ್ಟ್?