
ಹತ್ರಾಸ್‌ನಲ್ಲಿ ಕಾಲ್ತುಳಿತ ಪ್ರಕರಣ: ಯೋಗಿ ಸರ್ಕಾರದ ವಿರುದ್ಧ ರಾಹುಲ್ ವಾಗ್ದಾಳಿ, ಭೋಲೆ ಬಾಬಾ ನಾಪತ್ತೆ
ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಉತ್ತರ ಪ್ರದೇಶದ ಹತ್ರಾಸ್‌ಗೆ ಭೇಟಿ ನೀಡಿ, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಉತ್ತರ ಪ್ರದೇಶದ (Uttar Prades) ಹತ್ರಾಸ್‌ನಲ್ಲಿ ಕಾಲ್ತುಳಿತ ದುರಂತ(Hathras Stampede Incident) ಸಂಭವಿಸಿದ ಹಿನ್ನೆಲೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ(Rahul Gandhi) ಭೇಟಿ ನೀಡಿ, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಅಲ್ಲದೇ ಈ ಘಟನೆ ಬಗ್ಗೆ ಮಾಹಿತಿಯನ್ನು ಪಡೆದಿದ್ದಾರೆ. ಹತ್ರಾಸ್ ಕಾಲ್ತುಳಿತ ದುರಂತದಲ್ಲಿ 121 ಜನ ಸಾವಿಗೀಡಾಗಿದ್ದಾರೆ. ಗಾಯಾಳು ಕುಟುಂಬಗಳನ್ನು ರಾಹುಲ್ ಗಾಂಧಿ ಭೇಟಿ ಮಾಡಿದ್ದಾರೆ. ಇಲ್ಲಿತನಕ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಜುಲೈ 2 ರ ಸಂಜೆ ಧಾರ್ಮಿಕ ಬೋಧಕ ಸೂರಜ್ ಪಾಲ್ ಅವರ ಸತ್ಸಂಗದಲ್ಲಿ ಕಾಲ್ತುಳಿತ ಸಂಭವಿಸಿದೆ. ಆದ್ರೆ ಇಲ್ಲಿತನಕ ಭೋಲೆ ಬಾಬಾ(Bhole Baba) ಮಾತ್ರ ಪತ್ತೆಯಾಗಿಲ್ಲ.
Add Asianetnews Kannada as a Preferred Source

ಇದನ್ನೂ ವೀಕ್ಷಿಸಿ: ಕ್ಯಾಬಿನೆಟ್ ಸಭೆಯಲ್ಲಿ ಮುಡಾ ಅಕ್ರಮದ ಬಗ್ಗೆ ಚರ್ಚೆ! ಬಿಜೆಪಿಯಿಂದ ಮುಂದುವರೆದ ಪ್ರತಿಭಟನೆ ಕಹಳೆ