ಮೋದಿ ಅದಾನಿ ಅಣಕು ಸಂದರ್ಶನ ಮಾಡಿದ ರಾಹುಲ್ ಗಾಂಧಿ

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಗೌತಮ್ ಅದಾನಿ ವಿರುದ್ಧದ ಆರೋಪಗಳ ತನಿಖೆಗೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಪ್ರಧಾನಿ ಮೋದಿ ಮತ್ತು ಅದಾನಿ ಮುಖವಾಡ ಧರಿಸಿ ರಾಹುಲ್ ಗಾಂಧಿ ಅಣಕು ಸಂದರ್ಶನ ನಡೆಸಿದ್ದಾರೆ. ಈ ಬಗ್ಗೆ ಒಂದು ಡಿಟೇಲ್ ಸ್ಟೋರಿ

Share this Video
  • FB
  • Linkdin
  • Whatsapp

ಪ್ರಸ್ತುತ ಸಂಸತ್ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, 10ನೇ ದಿನವಾದ ಇಂದು ಕೂಡ ಸಂಸತ್‌ನಲ್ಲಿ ಕಾಂಗ್ರೆಸ್‌, ಉದ್ಯಮಿ ಗೌತಮ್ ಅದಾನಿ ವಿರುದ್ಧ ಇರುವ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿ ಗದ್ದಲ ನಡೆಸಿದೆ. ಸಂಸತ್ ಎದುರು ಪ್ರತಿಭಟನೆ ನಡೆಸಿದ ಕಾಂಗ್ರೆಸ್, ಪ್ರಧಾನಿ ಮೋದಿ ಹಾಗೂ ಅದಾನಿಯವರ ಮುಖವಾಡ ಧರಿಸಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿದೆ. ಒಬ್ಬರು ಗೌತಮ್ ಅದಾನಿ ಮುಖವಾಡ ತೊಟ್ಟರೆ ಮತ್ತೊಬ್ಬರು ಪ್ರಧಾನಿ ನರೇಂದ್ರ ಮೋದಿ ವೇಷ ತೊಟ್ಟಿದ್ದು, ಇಬ್ಬರನ್ನು ರಾಹುಲ್ ಗಾಂಧಿ ಅಣಕು ಸಂದರ್ಶನ ಮಾಡಿದ್ದಾರೆ. 

Related Video