Asianet Suvarna News Asianet Suvarna News

ಶನಿವಾರ ಸಂಜೆ ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ!

ನಾಳೆ, ಶನಿವಾರ ಸಂಜೆ 4.30ಕ್ಕೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.

ನವದೆಹಲಿ(ಜು.31): ನಾಳೆ, ಶನಿವಾರ ಸಂಜೆ 4.30ಕ್ಕೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಕೊರೋನಾ ನಿಯಂತ್ರಣ, ಅನ್‌ಲಾಕ್‌ 3, ರಫೇಲ್ ಆಗಮನ ಹೀಗೆ ಈ ಎಲ್ಲಾ ವಿಚಾರಗಳ ಕುರಿತು ಮೋದಿ ಮಾತನಾಡಲಿದ್ದಾರೆನ್ನಲಾಗುತ್ತಿದೆ.

ಸದ್ಯ ಜಾರಿಗೊಳಿಸಲಾಗಿರುವ ಹೊಸ ಶಿಕ್ಷಣ ನೀತಿ ಕುರಿತಾಗಿಯೂ ಮೋದಿ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಹೀಗಾಗಿ ಈ ಎಲ್ಲಾ ನಿಟ್ಟಿನಲ್ಲಿ ಪಿಎಂ ಮೋದಿ ಮಾಡಲಿರುವ ಭಾಷಣ ಭಾರೀ ಕುತೂಹಲ ಮೂಡಿಸಿದೆ.

Video Top Stories