Asianet Suvarna News Asianet Suvarna News

ಬೈಡೆನ್ ಅಲ್ಲ.. ರಿಷಿ ಅಲ್ಲ.. ಮೋದಿಯೇ ನಂಬರ್ 1..! ಘಟಾನುಘಟಿಗಳನ್ನು ಹಿಂದೆ ತಳ್ಳಿ ವಿಶ್ವನಾಯಕ ಆಗಿದ್ದು ಹೇಗೆ?

ಮೋದಿಗೆ ಸಿಕ್ಕಿರುವ ರೇಟಿಂಗ್‌ಗೂ ಈ ನಾಯಕರಿಗೆ ದೊರೆತಿರುವ ರೇಟಿಂಗ್‌ಗೂ ಹೆಚ್ಚು ವ್ಯತ್ಯಾಸವಿದೆ. ಈ ಸಮೀಕ್ಷೆಯಲ್ಲಿ 22 ಜಾಗತಿಕ ನಾಯಕರನ್ನು ರೇಟಿಂಗ್ ಮಾಡಿದ್ದು, ಮೋದಿಯೇ ನಂ. 1 ಸ್ಥಾನ ಪಡೆದಿದ್ದು, ಶೇಕಡಾ 78 ರ ಅನುಮೋದನೆ ದೊರೆತಿದೆ. 

ಅಮೆರಿಕ ಮೂಲದ ಸಲಹಾ ಸಂಸ್ಥೆ 'ಮಾರ್ನಿಂಗ್ ಕನ್ಸಲ್ಟ್' ನಡೆಸಿದ ಸಮೀಕ್ಷೆಯ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಶ್ವದ ಅತ್ಯಂತ ಜನಪ್ರಿಯ ನಾಯಕ ಎಂದು ಗುರುತಿಸಲಾಗಿದೆ. ಈ ಸರ್ವೇಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಯುಕೆ ಪ್ರಧಾನಿ ರಿಷಿ ಸುನಕ್ ಸೇರಿದಂತೆ ಇತರ ನಾಯಕರು ಇದ್ದರೂ ಮೋದಿಯ ಜನಪ್ರಿಯತೆ ಮುಂದೆ ಇವರೆಲ್ಲ ಮಂಕಾಗಿದ್ದಾರೆ.  ಏಕೆಂದರೆ ಮೋದಿಗೆ ಸಿಕ್ಕಿರುವ ರೇಟಿಂಗ್‌ಗೂ ಈ ನಾಯಕರಿಗೆ ದೊರೆತಿರುವ ರೇಟಿಂಗ್‌ಗೂ ಹೆಚ್ಚು ವ್ಯತ್ಯಾಸವಿದೆ. ಈ ಸಮೀಕ್ಷೆಯಲ್ಲಿ 22 ಜಾಗತಿಕ ನಾಯಕರನ್ನು ರೇಟಿಂಗ್ ಮಾಡಿದ್ದು, ಮೋದಿಯೇ ನಂ. 1 ಸ್ಥಾನ ಪಡೆದಿದ್ದು, ಶೇಕಡಾ 78 ರ ಅನುಮೋದನೆ ದೊರೆತಿದೆ. 
 

Video Top Stories