News Hour: ಕಾಲಾರಾಮ್‌ ಮಂದಿರಕ್ಕೂ ರಾಮಾಯಣಕ್ಕೂ ಇರುವ ನಂಟೇನು?

ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ನಾಸಿಕ್‌ನ ಕಾಲಾರಾಮ್‌ ದೇವಸ್ಥಾನಕ್ಕೆ ಭೇಟಿ ನೀಡಿದ್ದು ಮಾತ್ರವಲ್ಲದೇ ದೇವಸ್ಥಾನದ ಶುಚಿತ್ವ ಕಾರ್ಯವನ್ನೂ ಮಾಡಿ, ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಗೆ ವ್ರತವನ್ನೂ ಆರಂಭಿಸಿದರು. 

First Published Jan 12, 2024, 11:26 PM IST | Last Updated Jan 12, 2024, 11:26 PM IST

ಬೆಂಗಳೂರು (ಜ.12): ಪ್ರಧಾನಿ ನರೇಂದ್ರ ಮೋದಿ ಇಂದು ಮಹಾರಾಷ್ಟ್ರಕ್ಕೆ ಭೇಟಿ ನೀಡಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದರು. ಅದಕ್ಕೂ ಮುನ್ನ ನಾಸಿಕ್‌ ಮತ್ತು ನವೀ ಮುಂಬೈನಲ್ಲಿ ಮೋದಿ ಮೆಗಾ ರೋಡ್‌ಶೋ ನಡೆಸಿದರು. ಈ ವೇಳೆ ನಾಸಿಕ್‌ನ ಕಾಲಾರಾಮ್‌ ಮಂದಿರಲ್ಲಿ ಮೋದಿ ಶ್ರಮಾದಾನ ಮತ್ತು ಪೂಜೆ ನಡೆಸಿದರು.

ನಾಸಿಕ್‌ನ ಕಾಲಾರಾಮ್‌ ದೇಗುಲದಲ್ಲಿಯೇ ಮೋದಿ ವ್ರತ ಆರಂಭಿಸಿದ್ದಾರೆ. ರಾಮಾಯಣಕ್ಕೂ ಈ ಕಾಲಾರಾಮ್‌ ದೇವಸ್ಥಾನಕ್ಕೂ ನಂಟಿದೆ. ಐದು ಆಲದ ಮರಗಳು ಒಟ್ಟಿಗೆ ಇರುವ ಇದೇ ಪ್ರದೇಶದಿಂದಲೇ ಸೀತಾ ಮಾತೆಯ ಅಪಹರಣವಾಗಿತ್ತು ಎನ್ನುವುದು ಪ್ರತೀತಿ.

ಪ್ರಾಣ ಪ್ರತಿಷ್ಠಾಪನೆಗೂ ಮುನ್ನ ತಾಯಿ ಹೀರಾಬೆನ್‌ ಸಂದೇಶ ನೆನಪಿಸಿಕೊಂಡು ಭಾವುಕರಾದ ಪ್ರಧಾನಿ ಮೋದಿ!

1790 ರಲ್ಲಿ ಪೇಶ್ವೆ ಸರ್ದಾರ್ ಓಧೇಕರ್ ಈ ದೇವಸ್ಥಾನವನ್ನು ಕಟ್ಟಿದ್ದರು. ವಿಗ್ರಹ ಕಪ್ಪು ಬಣ್ಣದ್ದು.. ಹೀಗಾಗಿ ಕಾಲಾರಾಮ್ ಮಂದಿರ ಎಂದು ಕರೆಸಿಕೊಂಡಿದೆ. ಇಲ್ಲಿ ರಾಮನ ಜತೆಗೆ ಸೀತಾಮಾತೆ, ಲಕ್ಷ್ಮಣನ ವಿಗ್ರಹಗಳೂ ಇವೆ. ಇಡೀ ದೇಗುಲವನ್ನ ಕಪ್ಪು ಕಲ್ಲುಗಳಿಂದಲೇ ನಿರ್ಮಿಸಲಾಗಿದೆ. ಮಂದಿರದ ಶಿಖರವು 32 ಟನ್ ಚಿನ್ನದಿಂದ ಮಾಡಲಾಗಿದೆ ಎನ್ನಲಾಗಿದೆ. ಗೋಧಾವರಿಯಲ್ಲಿ ವಿಗ್ರಹ ಇದೆ ಎಂದು ರಾಜನಿಗೆ ಕನಸು ಬಿದ್ದಿತ್ತು. ಬಳಿಕ ನದಿಯಲ್ಲಿ ಹುಡುಕಿದಾಗ ಸಿಕ್ಕ ವಿಗ್ರಹ ಹೊರ ತೆಗೆದು ದೇವಸ್ಥಾನವನ್ನು ಕಟ್ಟಿದ್ದರು.

Video Top Stories