Asianet Suvarna News Asianet Suvarna News

ಪ್ರಾಣ ಪ್ರತಿಷ್ಠಾಪನೆಗೂ ಮುನ್ನ ತಾಯಿ ಹೀರಾಬೆನ್‌ ಸಂದೇಶ ನೆನಪಿಸಿಕೊಂಡು ಭಾವುಕರಾದ ಪ್ರಧಾನಿ ಮೋದಿ!

ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಗೆ ಇನ್ನು ಕೆಲವೇ ದಿನಗಳಿವೆ. ಈ ನಡುವೆ ಮುಂಬೈನಲ್ಲಿ ಹಲವು ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ನನ್ನ ಜೀವನದಲ್ಲಿಯೇ ಇಂಥ ಕ್ಷಣಗಳನ್ನು ನಾನು ಕಂಡಿಲ್ಲ ಎಂದು ಹೇಳಿದ್ದಾರೆ.

Prime Minister Narendra Modi Remembers Mother Heeraben Message on Ram Mandir pran pratishtha san
Author
First Published Jan 12, 2024, 7:06 PM IST

ಮುಂಬೈ (ಜ.12): ಇನ್ನೇನು ಕೆಲವೇ ದಿನಗಳಲ್ಲಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರದಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯಾಗಲಿದೆ. ಜನವರಿ 22 ರಂದು ನಡೆಯಲಿರುವ ಈ ಕಾರ್ಯಕ್ರಮ ನೆನಪಿಸಿಕೊಂಡು ಈಗಲೇ ತಾವು ಭಾವುಕರಾಗುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮಹಾರಾಷ್ಟ್ರದ ಮುಂಬೈನಲ್ಲಿ ಹಲವು ಯೋಜನೆಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ, ಇವುಗಳನ್ನು ಉದ್ಘಾಟಿಸಿ ನಡೆಸಿದ ಬಳಿಕ, ರಾಮ್ ರಾಮ್‌ ಎನ್ನುತ್ತಲೇ ತಮ್ಮ ಭಾಷಣವನ್ನು ಆರಂಭಿಸಿದರು. ತಮ್ಮ ಮಾತಿನಲ್ಲಿ ರಾಮ ಮಂದಿರವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಶತಮಾನಗಳಿಂದಲೂ ಅನೇಕರು ಮಾಡಿದ್ದ ಅತ್ಯಂತ ಕಷ್ಟಕರ ಪ್ರಯಾಣವನ್ನು ಅವರು ಜನರ ಎದುರು ತೆರೆದಿಟ್ಟರು. ಜನವರಿ 12 ರಂದು ಛತ್ರಪತಿ ಶಿವಾಜಿ ಮಹಾರಾಜರ ತಾಯಿ ಮಾತಾ ಜೀಜಾಬಾಯಿ ಅವರ ಜನ್ಮ ಜಯಂತಿ. ಈ ಹಂತದಲ್ಲಿ ಮಾತನಾಡಿದ ಮೋದಿ, 'ಮಾತಾ ಜೀಜಾಬಾಯಿ ಹಾಗೂ ಅವರ ಕೊಡುಗೆಗಳನ್ನು ನೆನಪಿಸಿಕೊಳ್ಳುವಾಗ ನನಗೆ ನನ್ನ ತಾಯಿ ನೆನಪಾಗುವುದು ಕೂಡ ಬಹಳ ಸಹಜ. ನನ್ನ ತಾಯಿ ಜೀವನದ ಕೊನೆಯ ಕ್ಷಣದವರೆಗೂ, ಬೆಡ್‌ನ ಮೇಲೆ ಮಲಗಿಕೊಂಡೇ ಸೀತಾ-ರಾಮ್‌ ಅನ್ನು ಪಠಿಸುತ್ತಿದ್ದರು ಎಂದು ಅವರು ಭಾವುಕರಾದರು.

ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ 2022ರ ಡಿಸೆಂಬರ್‌ 30 ರಂದು ತಮ್ಮ 99ನೇ ವರ್ಷದಲ್ಲಿ ನಿಧನರಾದರು. ಇದೇ ವೇಳೆ ಜನವರಿ 22ರ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಸಲುವಾಗಿ ಇಂದಿನಿಂದ 11 ದಿನಗಳ ಕಾಲ ಉಪವಾಸ ವೃತವನ್ನು ಆರಂಭಿಸುತ್ತಿರುವುದಾಗಿಯೂ ಪ್ರಧಾನಿ ಮೋದಿ ಹೇಳಿದ್ದಾರೆ.

ಅಯೋಧ್ಯಾ ರಾಮ ಮಂದಿರಕ್ಕೆ ಸೂರ್ಯ ತಿಲಕ ಯಂತ್ರ ದಾನವಾಗಿ ನೀಡಿದ ಬೆಂಗಳೂರು ಕಂಪನಿ!

ಪ್ರಾಣ ಪ್ರತಿಷ್ಠೆಗೆ ಕೇವಲ 11 ದಿನಗಳು ಮಾತ್ರವೇ ಉಳಿದಿದೆ. ಈ ಸಮಾರಂಭದಲ್ಲಿ ನಿಮ್ಮ ಪ್ರತಿನಿಧಿಸುವ ಅವಕಾಶವನ್ನು ದೇವರು ನನಗೆ ನೀಡಿದ್ದಾರೆ. ಇದನ್ನು ನಾನು ಗಮನದಲ್ಲಿಟ್ಟುಕೊಂಡು. ಮುಂದಿನ 11 ದಿನಗಳ ಕಾಲ ನಾನು ವಿಶೇಷ ವೃತ ಮಾಡುತ್ತಿದ್ದೇನೆ ಎಂದು ಪ್ರಧಾನಿ ತಿಳಿಸಿದ್ದಾರೆ.

ಇಲ್ಲಿದೆ ಸಾಕ್ಷಿ, ದೇಶದ ಅತಿದೊಡ್ಡ ತೀರ್ಥಕ್ಷೇತ್ರ-ಪ್ರವಾಸಿ ಸ್ಥಳವಾಗುವ ಹಾದಿಯಲ್ಲಿ ಅಯೋಧ್ಯೆ!

 "ನಾನು ಜೀವನದಲ್ಲಿ ಮೊದಲ ಬಾರಿಗೆ ಅಂತಹ ಭಾವನೆಗಳನ್ನು ಅನುಭವಿಸುತ್ತಿದ್ದೇನೆ, ಈ ಕ್ಷಣದಲ್ಲಿ, ನನ್ನ ಭಾವನೆಗಳನ್ನು ಪದಗಳಲ್ಲಿ ವ್ಯಕ್ತಪಡಿಸುವುದು ತುಂಬಾ ಕಷ್ಟ' ಎಂದು ಪ್ರಧಾ ಹೇಳಿದ್ದಾರೆ.
 

Latest Videos
Follow Us:
Download App:
  • android
  • ios