ಕೊರೋನಾ ಹೆಚ್ಚಳ: ಸಂಸತ್ತಿನಲ್ಲಿ ಮಾಸ್ಕ್‌ ಧರಿಸಿ ಜಾಗೃತಿ ಸಂದೇಶ ಕೊಟ್ಟ ಪ್ರಧಾನಿ ಮೋದಿ!

ದೇಶದಲ್ಲಿ ಕೊರೋನಾ ಆತಂಕ ಹೆಚ್ಚಾಗುತ್ತಿದೆ. ಇತ್ತ ಮಾಸ್ಕ್ ಧರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮನವಿ ಮಾಡಿದೆ. ಇದರ ಬೆನ್ನಲ್ಲೇ ಮೋದಿ ಸಂಸತ್ತಿನ ಕಲಾಪದಲ್ಲಿ ಮಾಸ್ಕ್ ಧರಿಸಿ ದೇಶಕ್ಕೆ ಜಾಗೃತಿ ಸಂದೇಶ ನೀಡಿದ್ದಾರೆ.

Share this Video
  • FB
  • Linkdin
  • Whatsapp

ಕೊರೋನಾ ಹೆಚ್ಚಳ ಭಾರತದಲ್ಲಿ ಆತಂಕ ಸೃಷ್ಟಿಸಿದೆ. ಚೀನಾದಲ್ಲಿ ಕೋವಿಡ್ ಸ್ಪೋಟಕ್ಕೆ ಕಾರಣವಾಗಿರುವ ಒಮಿಕ್ರಾನ್ ತಳಿ ಭಾರತದಲ್ಲೂ ಪತ್ತೆಯಾಗಿದೆ. ಇದರ ಬೆನ್ನಲ್ಲೇ ನಿರ್ಬಂಧಗಳ ಜಾರಿಗೆ ಚಿಂತನೆ ನಡೆಯುತ್ತಿದೆ. ಕೊರೋನಾ ಹೆಚ್ಚಳದ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಸ್ಕ್ ಧರಿಸಿ ಸಂಸತ್ತಿನ ಕಲಾಪದಲ್ಲಿ ಪಾಲ್ಗೊಂಡಿದ್ದಾರೆ. ಈ ಮೂಲಕ ದೇಶದ ಜನರಿಗೆ ಜಾಗೃತಿ ಸಂದೇಶ ನೀಡಿದ್ದಾರೆ. ಪ್ರಧಾನಿ ಮೋದಿ ಜೊತೆಗೆ ಹಲವು ಸಚಿವರು, ಸಂಸದರು ಮಾಸ್ಕ್ ಧರಿಸಿ ಕಲಾಪದಲ್ಲಿ ಪಾಲ್ಗೊಂಡಿದ್ದಾರೆ.

Related Video