News Hour: ನಿಲ್ಲದ ಮಂಗಳಸೂತ್ರ ಮಹಾಯುದ್ಧ, ಹಾಗೆ ಹೇಳಿಯೇ ಇಲ್ಲ ಎಂದ ರಾಹುಲ್‌ ಗಾಂಧಿ!

ಲೋಕಸಭಾ ಚುನಾವಣೆಯ ಕಣದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಸಿಕ್ಕ ಮಂಗಳಸೂತ್ರ ಅಸ್ತ್ರವನ್ನು ಭರ್ಜರಿಯಾಗಿ ಪ್ರಯೋಗ ಮಾಡಿದ್ದಾರೆ. ಈ ನಡುವೆ ರಾಹುಲ್‌ ಗಾಂಧಿ ನಾನು ಹಾಗೆ ಹೇಳಿಯೇ ಇಲ್ಲ ಎಂದು ಯೂಟರ್ನ್‌ ಹೊಡೆದಿದ್ದಾರೆ.
 

Share this Video
  • FB
  • Linkdin
  • Whatsapp

ಬೆಂಗಳೂರು (ಏ.24): ನಾಲ್ಕನೇ ದಿನವೂ ನಿಲ್ಲದ ಮಂಗಳಸೂತ್ರ ಮಹಾಯುದ್ಧ ನಿಂತಿಲ್ಲ. ಅಜ್ಜಿ ಕೂಡಿಟ್ಟ ಆಭರಣ ಕೂಡ ಬಿಡಲ್ಲ ಎಂದು ಮೋದಿ ಜನರಿಗೆ ವಾರ್ನ್‌ ಮಾಡಿದ್ದಾರೆ. ಆಸ್ತಿ ಹಂಚಿಕೆ ಮಾಡ್ತೀನಿ ಅಂದೇ ಇಲ್ಲ ಎಂದು ರಾಹುಲ್ ಯೂಟರ್ನ್​ ಹೊಡೆದಿದ್ದಾರೆ.

ಕಾಂಗ್ರೆಸ್​ ನಿಮ್ಮ ಆದಾಯದ ಮೇಲೆ ಕಣ್ಣಿಟ್ಟಿದೆ.. ಹುಷಾರ್. ಅಜ್ಜಿಯರ ಬಳಿ ಇರುವ ಆಭರಣಗಳನ್ನೂ ಕಾಂಗ್ರೆಸ್​ ಬಿಡೋದಿಲ್ಲ. ಅವರು ಯಾರಿಗೆ ಹಂಚ್ತಾರೆ ಎಂಬುದು ನಿಮಗೆ ಗೊತ್ತಲ್ವಾ..? ಎಂದು ಛತ್ತೀಸ್​ಗಢದ ಸರಬುಜಾ ಸಮಾವೇಶದಲ್ಲಿ ಮೋದಿ ವಾಗ್ದಾಳಿ ನಡೆಸಿದ್ದಾರೆ.

'ಮಧ್ಯಮ ವರ್ಗವದರು ಸ್ವಾರ್ಥಿಗಳು..' To 'ಪಿತ್ರಾರ್ಜಿತ ತೆರಿಗೆ' ಕಾಂಗ್ರೆಸ್‌ಗೆ Sam Pitroda ಸೆಲ್ಫ್‌ ಗೋಲ್‌!

ಇನ್ನೊಂದೆಡೆ ಎರಡು ದಿನದಿಂದ ಪ್ರಚಾರಕ್ಕೆ ಗೈರಾಗಿದ್ದ ರಾಹುಲ್‌ ಗಾಂಧಿ ಬುಧವಾರ ಸಾಮಾಜಿಕ್‌ ನ್ಯಾಯ್‌ ಸಮ್ಮೇಳನದಲ್ಲಿ ಮಾತನಾಡಿ, ನಾನು ಹೀಗೆ ಹೇಳಿಯೇ ಇಲ್ಲ. ಎಕ್ಸ್‌ರೇ ಮಾಡುತ್ತೇನೆ ಎಂದಷ್ಟೇ ಹೇಳಿದ್ದೇನೆ ಎಂದು ಹೇಳುವ ಮೂಲಕ ಸಮಜಾಯಿಷಿ ನೀಡಿದ್ದಾರೆ.

Related Video